ಎಸ್‍ಆರ್‍ಎಸ್ ಶಾಲೆಯಲ್ಲಿ ಕೆಂಪು ದಿನಾಚರಣೆ

ಚಿತ್ರದುರ್ಗ;

     ಇಲ್ಲಿನ ಪ್ರತಿಷ್ಠಿತ ಎಸ್‍ಆರ್‍ಎಸ್ ಹೆರಿಟೇಜ್ ಶಾಲೆಯಲ್ಲಿ ಬುಧವಾರದಂದು ಬ್ಲ್ಯೂಜೆಮ್ಸ್ ಚಿಣ್ಣರ ಲೋಕದಲ್ಲಿ ಕೆಂಪು ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆಂಪು ಬಣ್ಣದ ಬಲೂನುಗಳನ್ನು ಆಕಾಶಕ್ಕೆ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

      ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಸ್‍ಆರ್‍ಎಸ್ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿ ಅವರು ಮಾತನಾಡಿ, ‘ಕೆಂಪು ಬಣ್ಣದ’ ಮಹತ್ವದ ಬಗ್ಗೆ ಮತ್ತು ಕೆಂಪು ಎಂದರೆ ಪ್ರೀತಿ, ಸಂತೋಷದ ಪ್ರತೀಕ ವ್ಯಕ್ತಪಡಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಾಲೆಯ ಪ್ರಾಂಶುಪಾಲ ಎಮ್ ಎಸ್ ಪ್ರಭಾಕರ್‍ರವರು ಮಾತನಾಡಿ ಭಾರತದಲ್ಲಿ ಕೆಂಪು ಬಣ್ಣ ಪವಿತ್ರ ಬಣ್ಣವೆಂದು ಹಾಗೂ ಪ್ರೀತಿಯನ್ನು ಸಂಕೇತಿಸುವ ಕೆಂಪುವಾಗಿದೆ. ಕೆಂಪು ಬಣ್ಣವೂ ಒಂದು ಅತೀ ಮಹತ್ವದ ಬಣ್ಣವಾಗಿದ್ದು ಕೆಂಪು ಬಣ್ಣವು ಕ್ರೀಯಾಶೀಲತೆಯನ್ನು ಉದ್ದೀಪಿಸುವ ಬಣ್ಣವೆಂದು ಪರಿಗಣಿಸಲ್ಪಟ್ಟಿದೆ ಎಂದು ಹೇಳಿದರು

     ವ್ಯಕ್ತಿಯೋರ್ವನಲ್ಲಿ ಕೆಂಪು ಬಣ್ಣವೂ ಹುಟ್ಟುಹಾಕುವ ಚೈತನ್ಯವೇ ಬೇರೆಯ ತರನಾದದ್ದು ಕೆಂಪುಬಣ್ಣವು ನಿಮ್ಮೊಳಗಿನ ಭಾವನೆಗಳನ್ನು ಹೊರಗಿಡುವಂತಾಗಿದೆ. ಈ ಬಣ್ಣವೂ ಒಂದು ನಿರ್ದಿಷ್ಟವಾದ ಸಮಯ ಸ್ಥಳ ಹಾಗೂ ವ್ಯಕ್ತಿಯೋರ್ವನ ವೈಯಕ್ತಿಕ ಜೀವನ ಕರ್ಮಗಳ ಸಂಕೇತವಾಗಿದೆ ಎಂದುನೆರೆದವರಿಗೆ ತಿಳಿಸಿದರು.

       ಸಿಬ್ಬಂದಿ ವರ್ಗ: ಕಾರ್ಯಕ್ರಮದಲ್ಲಿ ಶಾಂತ, ಗೀತ, ಕವಿತ, ಭವ್ಯ, ಸುಷ್ಮ, ಫರೀನ್, ಶಿಲ್ಪ, ಮಂಗಳ, ತೇಜಸ್ವಿನಿ, ಇತರರು ಹಾಜರಿದ್ದರು.

        ಕಾರ್ಯಕ್ರಮದ ವಿಶೇಷತೆ: ಕೆಂಪು ದಿನದ ಅಂಗವಾಗಿ ಚಿಣ್ಣರ ತರಗತಿಯ ಕೋಣೆಗಳು ಸಹ ಕೆಂಪು ಬಣ್ಣದಿಂದ ಕಂಗೊಳಿಸಿದ್ದು ಎಲ್ಲಾ ಚಿಣ್ಣರೂ ಸಿಬ್ಬಂದಿ ವರ್ಗವೂ ಕೆಂಪು ಬಣ್ಣದ ಉಡುಗೆಯನ್ನುಟ್ಟು ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಕೆಂಪು ಬಣ್ಣದ ಮಹತ್ವ ಮತ್ತು ಅದರ ಉಪಯೋಗಗಳ ಮಕ್ಕಳ ಬಣ್ಣವನ್ನು ಗುರುತಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link