ಎಸ್.ಐ.ಟಿ.ಯಲ್ಲಿ“ಗ್ರಾಮೀಣಅಭಿವೃದ್ಧಿ ವಿಷಯದ ಮೇಲೆ ಕಾರ್ಯಾಗಾರ”

ತುಮಕೂರು

             ಭಾರತದೇಶದಆರ್ಥಿಕತೆ ಹಳ್ಳಿಗಳ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ.ಗ್ರಾಮೀಣ ಭಾಗದಜನರ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡಕೊಳ್ಳುವುದರ ಮೂಲಕ ಗ್ರಾಮೀಣ ಭಾಗದಜನರಜೀವನ ಮಟ್ಟವನ್ನು ಸುಧಾರಿಸಬಹುದುಎಂದುಕಾರ್ಯಾಗಾರದ ಮುಖ್ಯಅತಿಥಿಡಾ. ಎ. ಎಂ. ಪಟಾಣ್‍ಕರ್, ನಿವೃತ್ತ ಮುಖ್ಯಸ್ಥರು, ತಂತ್ರಜ್ಞಾನ ವರ್ಗಾವಣೆ ಮತ್ತು ಸಹಯೋಗ ವಿಭಾಗ, ಭಾಭಾಅಟಾಮಿಕ್ ಸಂಶೋಧನಾಕೇಂದ್ರ ಹಾಗೂ ಪ್ರಸ್ತುತ ಸಲಹೆಗಾರ, ಆರ್.ಜಿ.ಎಸ್ ಮತ್ತು ಟಿ.ಸಿ., ಮಹಾರಾಷ್ಟ್ರ ಸರ್ಕಾರಇವರುಅಭಿಪ್ರಾಯ ಪಟ್ಟರು.ಇವರುಇಂದು ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದಗ್ರಾಮೀಣಅಭಿವೃದ್ಧಿಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರುಗಳೊಡನೆ ಸಂವಾದ ನಡೆಸಿದರು.

              ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಡಾ.ಸ್ಮಿತ ಎಸ್. ಮೂಲೆ, ಸಂಯೋಜಕರು, ಎಕೆಆರ್‍ಯುಟಿಐ, ಟಿ.ಟಿ. ಆ್ಯಂಡ್ ಸಿಡಿ, ಭಾಭಾಅಟಾಮಿಕ್ ಸಂಶೋಧನಾಕೇಂದ್ರ, ಟಾಂಬೆ, ಮುಂಬೈ ಮಾತನಾಡುತ್ತಾರೈತರುಅತೀಕಡಿಮೆದರದಲ್ಲಿದೊರೆಯುವಆಧುನಿಕ ಉಪಕರಣಗಳನ್ನು ಉಪಯೋಗಿಸಿ ಕೃಷಿ ಹಾಗೂ ಇತರ ಚಟುವಟಿಕೆಗಳಲ್ಲಿ ತಮ್ಮಜೀವನವನ್ನು ಹಸನುಗೊಳಿಸಿಕೊಳ್ಳಬೇಕೆಂದರು.

              ಮಹಾವಿದ್ಯಾಲಯದಗ್ರಾಮೀಣಅಭಿವೃದ್ಧಿಕೇಂದ್ರದ ಸಂಯೋಜಕರಾದಡಾ.ಎಸ್.ವಿ. ದಿನೇಶ್‍ಇವರುಕೇಂದ್ರದ ಧ್ಯೇಯೋದ್ದೇಶಗಳನ್ನು ತಿಳಿಸಿಕೊಟ್ಟರು.ಈ ಮೂಲಕ ಎಸ್.ಐ.ಟಿ. ಹಲವಾರು ಗ್ರಾಮಗಳನ್ನು ದತ್ತುತೆಗೆದುಕೊಂಡುಅಲ್ಲಿನ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳ್ನು ಸೂಚಿಸುವುದರ ಮೂಲಕ ರೈತರಿಗೆ ಹಾಗೂ ಅಲ್ಲಿನಯುವಜನತೆ ಹಾಗೂ ಮಹಿಳೆಯರ ಸಬಲೀಕರಣಕ್ಕೆಎಸ್.ಐ.ಟಿ.ಯು ಶ್ರಮಿಸುತ್ತಿದೆಎಂದು ತಿಳಿಸಿದರು.

               ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾದಡಾ.ಎಂ.ಎನ್. ಚನ್ನಬಸಪ್ಪ ಮಾತನಾಡಿ ಸಿದ್ಧಗಂಗಾ ಸಂಸ್ಥೆ ಹೇಗೆ ಗ್ರಾಮೀಣ ಭಾಗದ ಜನತೆಗಳ ಆಶೋತ್ತರಗಳಿಗೆ ಸ್ಪಂದಿಸುತ್ತದೆತಮ್ಮಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಪ್ರಾಂಶುಪಾಲರಾದಡಾ.ಶಿವಕುಮಾರಯ್ಯ ಸ್ವಾಗತಿಸಿದರು. ವಿದ್ಯಾರ್ಥಿ ಸಚಿದಾನಂದ ಸ್ವಾಮಿ ಪ್ರಾರ್ಥಿಸಿದರು. ಎಂ.ಬಿ.ಎ. ವಿಭಾದ ನಿರ್ದೇಶಕರಾದಡಾ. ಎಂ.ಆರ್. ಸೊಲ್ಲಾಪುರ್ ವಂದನಾರ್ಪಣೆ ಸಲ್ಲಿಸಿದರು. ಎಂ.ಬಿ.ಎ. ವಿಭಾಗದ ಸಹಪ್ರಾಧ್ಯಾಪಕರಾದಡಾ. ಸಿ. ಸೋಮಶೇಖರ್‍ಕಾರ್ಯಕ್ರಮ ನಿರೂಪಿಸಿದರು.

Recent Articles

spot_img

Related Stories

Share via
Copy link