ತುಮಕೂರು: ಏಕಕಾಲದಲ್ಲಿ ಮೂರು ಕಡೆ ಲೋಕಾ ದಾಳಿ

ತುಮಕೂರು

    ನಗರದಲ್ಲಿ ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಜಿ.ಪಂ. ಸಾರ್ವಜನಿಕ ಕುಂದುಕೊರತೆ ನಿವಾರಣಾಧಿಕಾರಿಯ ಮನೆ ಮುಂದೆ ಕಾದು ಕುಳಿತಿರುವ ಘಟನೆ ಬೆಳಕಿಗೆ ಬಂದಿದೆ.

    ಇಲ್ಲಿನ ಜಿಲ್ಲಾ ಪಂಚಾಯತ್ ಕುಂದುಕೊರತೆ ನಿವಾರಣಾಧಿಕಾರಿ ಡಾ. ಭೂವನಹಳ್ಳಿ ನಾಗರಾಜ್ ಅವರ ಆದರ್ಶ ನಗರದ ಮನೆ ಮುಂದೆ ಬೆಂಗಳೂರಿನ ಲೋಕಾಯುಕ್ತ ಡಿವೈಎಸ್ಪಿ ಪ್ರದೀಪ್‍ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ತಪಾಸಣೆಗಾಗಿ ಕಾದು ಕುಳಿತಿದೆ.

    ಡಾ. ಭೂವನಹಳ್ಳಿ ನಾಗರಾಜು ಅವರ ಮನೆಯಲ್ಲಿ ಯಾರೂ ಇಲ್ಲದೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಎಲ್ಲಿಗೋ ಹೋಗಿರುವ ಹಿನ್ನೆಲೆಯಲ್ಲಿ ಅವರ ಆಗಮನಕ್ಕಾಗಿ ಲೋಕಾ ಅಧಿಕಾರಿಗಳು ಮನೆ ಮುಂದೆ ಕಾದು ಕುಳಿತಿರುವ ದೃಶ್ಯ ಕಂಡು ಬಂತು.

    ಡಾ. ಭೂವನಹಳ್ಳಿ ನಾಗರಾಜು ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದು, ಜಿ.ಪಂ. ಕುಂದುಕೊರತೆ ನಿವಾರಣಾಧಿಕಾರಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.ಇವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿಗಳ ತಪಾಸಣೆ ನಡೆಸುವ ಸಲುವಾಗಿ ಮನೆಯೊಳಗೆ ಹೋಗಲು ಕಾದು ಕುಳಿತಿದ್ದಾರೆ.

   ಮಧ್ಯಾಹ್ನ 12 ಗಂಟೆಯಾದರೂ ಭೂವನಹಳ್ಳಿ ನಾಗರಾಜು ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮನೆಯ ಮುಂಭಾಗದಲ್ಲೇ ಲೋಕಾಯುಕ್ತ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

    ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ಜಂಟಿ ನಿರ್ದೇಶಕರ ಮನೆ ಮತ್ತು ಕಚೇರಿ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಟೂಡಾ ಯೋಜನಾ ವಿಭಾಗದ ಜಂಟಿ ನಿರ್ದೇಶಕ ನಾಗರಾಜು ತಮ್ಮ ಆದಾಯಕ್ಕಿಂತ ಮೀರಿ ಅಕ್ರಮ ಆಸ್ತಿಪಾಸ್ತಿ ಗಳಿಸಿದ್ದಾರೆ ಎಂಬ ದೂರಿನ ಮೇರೆಗೆ ಲೋಕಾಯುಕ್ತ ಪೆÇಲೀಸರು ಇಂದು ಮುಂಜಾನೆಯೇ ಏಕಕಾಲದಲ್ಲಿ ಅವರ ವಾಸದ ಮನೆ, ಟೂಡಾ ಕಚೇರಿ ಹಾಗೂ ಸ್ವಂತ ಊರು ಪಾವಗಡ ತಾಲ್ಲೂಕಿನ ಅರಸೀಕೆರೆ ಹೋಬಳಿಯ ಜಂಗಮರಹಳ್ಳಿಯಲ್ಲಿರುವ ಮನೆ ಮೇಲೆ ದಾಳಿ ಮಾಡಿ ಶಾಕ್ ನೀಡಿದ್ದಾರೆ.

   ಮುಂಜಾನೆಯೇ ಮೂರು ತಂಡಗಳಾಗಿ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ನಗರದ ದೇವನೂರು ಚರ್ಚ್ ಬಳಿ ಜಂಟಿ ನಿರ್ದೇಶಕ ನಾಗರಾಜು ವಾಸವಾಗಿರುವ ನಿವಾಸ, ಟೂಡಾ ಕಚೇರಿ ಹಾಗೂ ಪಾವಗಡ ತಾಲ್ಲೂಕಿನ ಅರಸೀಕೆರೆಯ ಜಂಗಮರಹಳ್ಳಿ ಮನೆ ಮೇಲೆ ದಾಳಿ ಮಾಡಿ ಅಗತ್ಯ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

   ಮೂರು ಕಡೆ ದಾಳಿ ಮಾಡಿರುವ ಲೋಕಾಯುಕ್ತರು ಟೂಡಾ ಯೋಜನಾ ವಿಭಾಗದ ಜಂಟಿ ನಿರ್ದೇಶಕ ನಾಗರಾಜು ಅವರು ಅಕ್ರಮವಾಗಿ ಸಂಪಾದಿಸಿರುವ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳ ತಪಾಸಣೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಮೂರು ಕಡೆಗಳಲ್ಲಿ ಲೋಕಾ ಅಧಿಕಾರಿಗಳು ದಾಖಲಾತಿಗಳಿಗಾಗಿ ತೀವ್ರ ಶೋಧ ನಡೆಸಿದ್ದು, ಹೆಚ್ಚಿನ ಮಾಹಿತಿಯನ್ನು ಲೋಕಾಯುಕ್ತ ಪೆÇಲೀಸರು ತಿಳಿಸಬೇಕಿದೆ.

    ಜಂಟಿ ನಿರ್ದೇಶಕ ನಾಗರಾಜು ಅವರು ಪಾವಗಡ ತಾಲ್ಲೂಕಿನ ಅರಸೀಕೆರೆಯವರಾಗಿದ್ದು, ಕಳೆದ ಒಂದೂವರೆ ವರ್ಷದಿಂದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

   ತುಮಕೂರು ಲೋಕಾಯುಕ್ತ ಎಸ್ಪಿ ವಲಿಬಾಷ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಮಂಜುನಾಥ್, ಹರೀಶ್, ಇನ್ಸ್‍ಪೆಕ್ಟರ್ ಮಹಮದ್ ಸಲೀಂ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap