
ಇತ್ತೀಚೆಗೆ ಎಲ್ಲೆಡೆ ಧಗೆ ಹೆಚ್ಚಿದೆ. ಇನ್ನೂ ಹೆಚ್ಚುತ್ತಿದೆ ಎಂಬುದು ಪರಿಸರ ಸಂಶೋಧನಾನಿರತ ವಿಜ್ಞಾನಿಗಳ ಅಭಿಮತÀ. ಎಲ್ಲೋ, ಯಾವಾಗಲೋ ಮುಂದಾಗುವ ಅನಾಹುತಕ್ಕಾಗಿ ಈಗಿನಿಂದೀಗಲೇ ನಾವೇಕೆ ಚಿಂತಿಸ ಬೇಕನ್ನುವ ನಿರಾಳ ಭಾವ ಬಹು ಜನರದ್ದು. ಇರುವವರೆಗೆ ಮಜಾ ಮಾಡೋಣ ಎಂಬ ಭೋಗದ ಜೀವನಕ್ಕೆ ಹಂಬಲಿಸುವ ಧೋರಣೆ ಯುವ ಪೀಳಿಗೆಯದು.
ಏರುತ್ತಿರುವ ಧಗೆಯಿಂದ ಹವಾಮಾನ ವೈಪರೀತ್ಯ ಉಂಟಾಗಿ ಜಗತ್ತಿನಾದ್ಯಂತ ಸಂಭವಿಸುತ್ತಿರುವ ನೈಸರ್ಗಿಕ ಅನಾಹುತಗಳನ್ನು ಯಥಾವತ್ತಾಗಿ ದೃಶ್ಯ ಮಾಧ್ಯಮಗಳು ತೋರಿಸುತ್ತಿದ್ದರೂ, ಅದಕ್ಕೂ ತಮಗೂ ಏನೇನು ಸಂಬಂಧಪಟ್ಟಿಲ್ಲವೆಂಬಂತೆ ಉಪೇಕ್ಷಿಸುವ ನಾವು ಏಕೆ ಭೂಮಿ ಬಿಸಿಯಾಗುತ್ತಿದೆ ಎಂದು ತಲೆ ಬಿಸಿಮಾಡಿ ಕೊಂಡಿದ್ದೇವೆಯೇ? ಖಂಡಿತ ಇಲ್ಲ. ನಿಮ್ಮ ಭಾವನೆ ಧೋರಣೆ ಏನೇ ಇರಲಿ, ಏರುತ್ತಿರುವ ಧಗೆ ಮುಂದಿನ ವರ್ಷಗಳಲ್ಲಿ ಮನುಷ್ಯ ಏನೂ ಮಾಡದಂತಹ ಭೀಕರತೆಯನ್ನು ತಂದೊಡ್ಡುವುದು ಖಾತ್ರಿ.
ಬ್ರೌನ್ ರೈಸ್ ಸೇವನೆ ʼಯಿಂದ ಈ ʻ ಅಘಾತಕಾರಿ ಆರೋಗ್ಯ ಸಮಸ್ಯೆʼಗಳಿಗೆ ಬ್ರೇಕ್ ಹಾಕಿ
ಮುಂದಿನ ಅನಾಹುತ ತಡೆಯಲು ಶಾಶ್ವತ ಕ್ರಮಗಳನ್ನು ಕೈಗೊಳ್ಳದೆ, ಅನಾಹುತವಾದಾಗ ಸಂತ್ರಸ್ತರಿಗೆ ಒಂದಿಷ್ಟು ಹಣಕಾಸಿನ ಪರಿಹಾರ ಅಥವಾ ತಾತ್ಕಾಲಿಕ ನೆಲೆಯನ್ನು ಒದಗಿಸಿ ತಮ್ಮ ಕೆಲಸ ಮುಗಿಯಿತು ಎಂಬ ಓಟು ಗಿಟ್ಟಿಸುವ ತಂತ್ರಗಾರಿಕೆ ಸರ್ಕಾರಗಳದ್ದು. ಎಲ್ಲರೂ ನಿರ್ಲಕ್ಷಿಸುತ್ತಿರುವ ಕಾಲಘಟ್ಟದಲ್ಲಿ ಬದುಕಿರುವ ಪ್ರಜ್ಞಾವಂತರು ಜೀವ ಪರವಾಗಿರುವ ಭೂ ವಾತಾವರಣದಲ್ಲಿ ಧಗೆ ಏರಿಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಲು ಜನರನ್ನು ಪ್ರಚೋದಿಸುವುದು ಮತ್ತು ಕಾರ್ಯಾಚರಣೆಗೆ ತೊಡಗಿಸುವುದು ಇಂದಿನ ತುರ್ತು !!
ಡೆನ್ಮಾರ್ಕ್ ನಲ್ಲಿ ಡೋಲು ಬಾರಿಸಿದ ಪ್ರಧಾನಿ; ನರೇಂದ್ರ ಮೋದಿಯವರ ಈ ವಿಡಿಯೋ ಫುಲ್ ವೈರಲ್
ಅಸಹನೀಯ ಧಗೆಯುಂಟಾಗಲು ಕಾರಣ ಭೂ ತಾಪಮಾನ ಏರಿಕೆ, ಮಾನವ ಚಟುವಟಿಕಗಳು ವಾತಾವರಣಕ್ಕೆ ಕಾರ್ಬನ್ ಡೈ ಆಕ್ಸೆಡ್‍ನಂತಹ ಹಸಿರು ಮನೆ ಅನಿಲಗಳನ್ನು ತುಂಬುತ್ತಿರುವುದು, ಜೊತೆಗೆ ಅರಣ್ಯ ನಾಶ ಮಾಡುತ್ತಿರುವುದು ಭೂ ತಾಪಮಾನ ವೃದ್ಧಿಯಾಗಲು ಮುಖ್ಯ ಕಾರಣ. ಇದರಿಂದ ನೀರಿಗಾಗಿ ರೈತರು ಕೊಳವೆ ಬಾವಿ ಕೊರೆಸಿ, ಕೊರೆÀಸಿ ಸಾಲಗಾರರಾಗಿದ್ದಾರೆ. ತೀರಿಸಲಾರದಷ್ಟು ಸಾಲ ಮಾಡಿರುವ ರೈತರು, ನೇಕಾರರು ಆತ್ಮಹತ್ಯೆ ಮೂಲಕ ಇಹಲೋಕ ತ್ಯಜಿಸಿ, ಸಂಸಾರವನ್ನು ಅನಾಥವಾಗಿಸಿ ಸರ್ಕಾರ ಮತ್ತು ಸಮಾಜಕ್ಕೆ ಭಾರ ಹೊರಿಸಿದ್ದಾರೆ.
ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಲಂಡನ್‌ನಲ್ಲಿ 889ನೇ ಬಸವ ಜಯಂತಿ ಆಚರಣೆ
ಗ್ರಾಮೀಣ ಪ್ರದೇಶದಲ್ಲಿ ಭೂ ತಾಪಮಾನ ಏರಿಕೆಯ ಪರಿಣಾಮಗಳು :
ಇಡೀ ಜಗತ್ತಿಗೆ ಆಪತ್ತನ್ನು ತಂದಿತ್ತಿರುವ ಭೂ ತಾಪಮಾನ ಏರಿಕೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹಾನಿಕರ ಪರಿಣಾಮ ಬೀರುತ್ತಿದೆ. ಧಗೆ ಏರಿಕೆ ಉಂಟು ಮಾಡುವ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಕೃಷಿಯ ಮೇಲೆ ರೈತರು ಚೇತರಿಸಿಕೊಳ್ಳಲಾರದಷ್ಟು ಬೆಳೆ ಹಾನಿ ಮಾಡುವುದು ಗ್ರಾಮೀಣ ಪ್ರದೇಶದ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ.
ಧಗೆ ಏರಿಕೆ ಬೆಳೆಗಳು ಹೆಚ್ಚು ಹೆಚ್ಚು ನೀರನ್ನು ಬೇಡುವಂತೆ ಮಾಡಿದೆ. ಧಗೆ ಏರಿಕೆ ನೆಲವನ್ನು ವಿಪರೀತ ಬಿಸಿಮಾಡಿ ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳು, ಎರೆಹುಳುವಿನಂತಹ ಸಾರವರ್ಧಕಗಳು ಕಣ್ಮರೆಯಾಗುವುದರಿಂದ ಮರುಭೂಮೀಕರಣಕ್ಕೆ ಚಾಲನೆ ನೀಡಿದೆ.
ಗ್ರಾಮಗಳ ಸರಹದ್ದು ಮತ್ತು ಅಡವಿಯಲ್ಲಿನ ಕೆರೆ ಕಟ್ಟೆಗಳು, ಝರಿ ತೊರೆಗಳು ಬತ್ತಿ, ವನ್ಯಜೀವಿಗಳು ಬದುಕುಳಿಯದೆ ಅವುಗಳ ಸಂಖ್ಯೆ ಕ್ಷೀಣಿಸಿದೆ. ಜೊತೆಗೆ ವನ್ಯ ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಧಾಳಿ ಮಾಡುತ್ತಿವೆ. ಅಂತರ್ಜಲ ಕುಸಿದು ಅನೇಕ ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್‍ಗಳಲ್ಲಿ ಸರಬರಾಜು ಮಾಡುವಷ್ಟು ನೀರಿನ ಅಭಾವ ಸೃಷ್ಟಿಯಾಗಿದೆ.
ರಮೇಶ್ ಜಾರಕಿಹೊಳಿ ವಿರುದ್ಧ 600 ಕೋಟಿ ರೂ. ವಂಚನೆ ಆರೋಪ: ಕಾಂಗ್ರೆಸ್ ಟ್ವೀಟ್
ವಿಪರೀತ ಧಗೆಯಿಂದ ಗುಡ್ಡ ಬೆಟ್ಟಗಳು ಮತ್ತು ಕಾಡಿಗೆ ಬೆಂಕಿ ಬಿದ್ದಾಗ ಆರಿಸಲು ಸಾಧ್ಯವಾಗದೆ ಜೀವವೈವಿಧ್ಯ ಶಿಥಿಲವಾಗುತ್ತಿದೆ. ವಿಪರೀತ ಧಗೆ ಜನ ಜಾನುವಾರುಗಳಲ್ಲಿ ಹಲವು ರೀತಿಯ ರೋಗಗಳಿಗೆ ಕಾರಣವಾಗಿದೆ. ಮಧ್ಯಾಹ್ನದ ವೇಳೆ ಪ್ರಯಾಣ ಮಾಡಲು ಅಥವಾ ಹೊರಗಡೆ ಕೆಲಸ ಮಾಡಲು ಸಾಧ್ಯವಾಗದ ಕಾರ್ಮಿಕ ವರ್ಗದ ಜೀವನೋಪಾಯ ಕಷ್ಟಕ್ಕೆ ಸಿಲುಕಿದೆ.
ಸಂವಾದಗಳು : ಸಮುದಾಯದ ವಿವಿಧ ವರ್ಗಗಳ ಜನರ ನಡುವೆ ಮಾತುಕತೆಯ ಮೂಲಕ ಮೂರು ರೀತಿಯಲ್ಲಿ ವಾತಾವರಣಕ್ಕೆ ಸೇರುವ ಕಾರ್ಬನ್ ಡೈ ಆಕ್ಸೈಡ್ ಅನ್ನು ನಿಯಂತ್ರಿಸಲು ಸಾಧ್ಯವಿದೆ. ವಾಹನಗಳಲ್ಲಿ ಉರಿಯುವ ಪೆಟ್ರೋಲ್, ಡಿಸೇಲ್‍ನ್ನು ಮಿತಗೊಳಿಸುವುದು. ಹೊಗೆ ಉಗುಳುವ ಕಾರ್ಖಾನೆ ಉತ್ಪಾದಿತ ವಸ್ತುಗಳ ಬಳಕೆ ಕಡಿಮೆ ಮಾಡುವುದು. ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೆಡ್‍ನ್ನು ತೆಗೆಯುವುದು.
ಭೂ ತಾಪಮಾನ ತಗ್ಗಿಸುವ ಸರ್ಕಾರದ ಪ್ರಯತ್ನಗಳು : ಭೂ ತಾಪಮಾನ ತಗ್ಗಿಸುವುದು ಒಬ್ಬಿಬ್ಬರರಿಂದ ಒಂದೆರಡು ದಿನಗಳಲ್ಲಿ ಮಾಡಿ ಮುಗಿಸುವ ಕೆಲಸವಲ್ಲ. ಇದು ಎಲ್ಲಾ ದೇಶಗಳ ಜನರೆÀಲ್ಲರ ಪಾಲುಗಾರಿಕೆಯಿಂದ ಹಲವು ವರ್ಷಗಳ ಕಾಲ ನಿರಂತರವಾಗಿ ಮುಂದುವರಿಯಬೇಕಾದ ಪ್ರಕ್ರಿಯೆ. ಆದುದರಿಂದ ಕೇಂದ್ರ ಸರ್ಕಾರ ವಾತಾವರಣಕ್ಕೆ ಕಾರ್ಬನ್ ಡೈ ಆಕ್ಸೆಡ್ ಸೇರುವುದನ್ನು ತಗ್ಗಿಸಲು ಅಂತರಾಷ್ಟ್ರೀಯ ಒಪ್ಪಂದಕ್ಕನುಗುಣವಾಗಿ ಕಾರ್ಯೋನ್ಮುಖವಾಗಿ ಜನಜಾಗೃತಿಯಲ್ಲಿ ವಿವಿಧ ಸಂಘಟನೆಗಳ ಮೂಲಕ ತೊಡಗಿದೆ.
ಡಿಸೇಲ್-ಪೆಟ್ರೋಲ್ ಬಳಕೆಗೆ ಮಿತಿ :
ದ್ವಿಚಕ್ರ ವಾಹನಗಳನ್ನು ಅನಾವಶ್ಯಕವಾಗಿ ಓಡಿಸದೆ ನಡೆಯುವುದು, ಸೈಕಲ್ ಸವಾರಿ ಮಾಡುವುದು. ಲಘು ವಸ್ತುಗಳ ಸಾಗಾಣಿಕೆಗೆ ರಿಕ್ಷಾ, ಟ್ರ್ಯಾಕ್ಟರ್ ಬಳಸದೆ ಸೈಕಲ್, ಸೈಕಲ್ ರಿಕ್ಷಾ, ಎತ್ತಿನ ಗಾಡಿ, ಜಟಕಾದಲ್ಲಿ ಸಾಗಿಸುವುದು.
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮವನ್ನು ಪೊಲೀಸರೇ ಬಯಲಿಗೆ ತಂದಿದ್ದಾರೆ: ಹೊಸಬಾಂಬ್ ಸಿಡಿಸಿದ ಹೆಚ್ ಡಿ ಕುಮಾರಸ್ವಾಮಿ!
ಉಳುಮೆಗೆ ಪ್ರಾಣಿಗಳು ಅತ್ಯುತ್ತಮ. ಇಲ್ಲದಿದ್ದರೆ ಟ್ರ್ಯ್ರಾಕ್ಟರ್ ಟ್ರೈಲ್ಲರ್ ಉಳುಮೆ ಮಾಡುವುದಾದರೆ ಉಳುಮೆ ಮಾಡುವ ಸಂಖ್ಯೆ ತಗ್ಗಿಸಿ, ತೋಟಗಳಾದರೆ ಉಳುಮೆರಹಿತ ಕೃಷಿ ಮಾಡಬಹುದು. ಟ್ರಂಚ್ ತೆಗೆಯಲು, ಗುಂಡಿ ತೋಡಲು, ಮಣ್ಣು ಮತ್ತು ಮರಳು ತುಂಬಲು, ಗೊಬ್ಬರ ಲೋಡ್ ಮಾಡಲು ಜೆಸಿಬಿ ಬದಲು ಜನರ ದೈಹಿಕ ಶ್ರಮ ಬಳಕೆ ಮಾಡಬಹುದು.
ಸಾಮೂಹಿಕ ಸಾರಿಗೆ ಮೂಲಕ ಇಂಧನವನ್ನು ಉಳಿಸಬಹುದು. ಮೇಲಿನ ಕ್ರಮಗಳು ಇಂಗಾಲದ ಡೈ ಆಕ್ಸೈಡ್‍ನ್ನು ನೇರವಾಗಿ ನಾವೇ ಸ್ವತಃ ತಡೆಯಬಹುದಾದಂತವು. ಕಾರ್ಬನ್ ಡೈ ಆಕ್ಸೈಡ್ ಪರೋಕ್ಷವಾಗಿ ನಮ್ಮಿಂದ ವಾತಾವರಣಕ್ಕೆ ಸೇರದಂತೆ ತಡೆಯಲು ಹೊಗೆ ಬಿಡುವ ಕಾರ್ಖಾನೆ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬಹುದು. ಕೃಷಿಯಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಔಷಧಿ ಬಳಕೆ ಕಡಿಮೆ ಮಾಡಬಹುದು.
ಡಾ.ಪುನೀತ್ ರಾಜ್ಕುಮಾರ್ಗೆ ಬಸವಶ್ರೀ ಪ್ರಶಸ್ತಿ: ಮುರುಘಾ ಶರಣರಿಂದ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ
ನಾವು ಆರೋಗ್ಯವಾಗಿರುವುದು ವಾತಾವರಣಕ್ಕೆ ಕಾರ್ಬನ್ ಡೈ ಆಕ್ಸೈಡ್ ಸೇರದಂತೆ ತಡೆಯುವ ಮತ್ತೊಂದು ಪರೋಕ್ಷ ವಿಧಾನ. ಒಂದು ವೇಳೆ ಅನಾರೋಗ್ಯಕ್ಕೆ ತುತ್ತಾದರೆ ನೈಸರ್ಗಿಕ ಅಥವಾ ಆಯುರ್ವೇದ ಚಿಕಿತ್ಸೆ ಪಡೆಯಬಹುದು. ಎಲ್ಲಾ ಕ್ರಮಗಳಿಗಿಂತ ಶ್ರೇಷ್ಠ ಹಾಗೂ ಪರಿಣಾಮಕಾರಿ ಕ್ರಮವೆಂದರೆ ವಾತಾವರಣದಲ್ಲಿರುವ ಕಾರ್ಬನ್ ಡ್ರೈ ಆಕ್ಸೈಡನ್ನು ತೆಗೆದುಹಾಕುವುದು ಅಥವಾ ಹೀರಿಕೊಳ್ಳುವಂತಹ ವ್ಯವಸ್ಥೆ ಮಾಡುವುದು.
ಎಲ್ಲರಿಗೂ ತಿಳಿದಿರುವ ಹಾಗೆ ಕಾರ್ಬನ್ ಡೈ ಆಕ್ಸೈಡ್ ಮರಗಿಡಗಳಿಗೆ ಆಹಾರ ಉತ್ಪಾದನೆಗೆ ಅತ್ಯಗತ್ಯ. ಆದುದರಿಂದ ಗಿಡಮರಗಳನ್ನು ಬೆಳೆಸುವುದರ ಮೂಲಕ ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸಿ ಭೂ ತಾಪಮಾನವನ್ನು ಕಡಿಮೆ ಮಾಡಬಹುದು.
18-40 ವರ್ಷ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ₹1,800 ನೀಡುತ್ತಿದೆಯೇ?
ಕೊನೆ ಮಾತು :
ಇಂದಿನ ಸಂದರ್ಭದಲ್ಲಿ ಕಾರ್ಖಾನೆ ಮಾಲೀಕರು ತಮ್ಮ ಕೈಗಾರಿಕಾ ಸ್ಥಾವರಗಳ ಮೂಲಕ ವಾತಾವರಣಕ್ಕೆ ಬಿಡುಗಡೆಯಗುತ್ತಿರುವ ಹಸಿರು ಮನೆ ಪರಿಣಾಮಕ್ಕೆ ಕಾರಣವಾಗಿರುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಮಿತಗೊಳಿಸಿ, ಸಾರ್ವಜನಿಕರು ಸ್ವಯಂ ಚಾಲಿತ ವಾಹನಗಳಲ್ಲಿ,
ಡಿಸೇಲ್, ಪೆಟ್ರೋಲ್ ಉರಿಸುವುದನ್ನು ತಗ್ಗಿಸಿ ಹಾಗೂ ಸರ್ಕಾರ ಕಾಡನ್ನು ಹಾನಿಯಾಗದಂತೆ ಕಟ್ಟುನಿಟ್ಟಿನ ನಿಬಂಧನೆ ಹೇರಿ ಹವಾಮಾನ ವೃದ್ಧಿಸುವುದು, ಕೈಗಾರಿಕೆಗಳ ಹೊಗೆಯ ವೈಪರೀತ್ಯವನ್ನು ನಿಯಂತ್ರಿಸುವುದು ಎಂದಿಗಿಂತ ಇಂದು ಅನಿವಾರ್ಯ.
ಕೋವಿಡ್ ಇನ್ನೂ ಮುಗಿದಿಲ್ಲ, ಸರ್ಕಾರದ ಮಾರ್ಗಸೂಚಿ ಪಾಲಿಸಿ: ರಾಮನಾಥ್ ಕೋವಿಂದ್
ಕೇಂದ್ರ ಸರ್ಕಾರದಿಂದ ಜಾಗೃತಿ :
ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪಟ್ರೋಲಿಯಂ ಸಂರಕ್ಷಣೆ ಮತ್ತು ಸಂಶೋಧನಾ ಸಂಸ್ಥೆಯು ದೇಶದಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್‍ನಂತಹ ಇಂಧನ ಉಳಿತಾಯ ಜಾಗೃತಿ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ʼರೆಪೊ ದರ 40 bps ಹೆಚ್ಚಳʼ : RBI ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ
ಕರ್ನಾಟಕದಲ್ಲಿ ಇಂಡಿಯನ್ ಆಯಿಲ್ ಕಾಪೆರ್Çರೇಷನ್ ನೇತೃತ್ವದಲ್ಲಿ ಹಾಸನ ಜಿಲ್ಲೆ ಬಾನುಗೊಂದಿಯ ಸೀ (ಸೆಂಟರ್ ಫಾರ್ ಎಜುಕೇಶನ್, ಏನ್ವರೋನ್‍ಮೆಂಟ್ ಆ್ಯಂಡ್ ಕಮ್ಯೂನಿಟಿ) ಸಂಸ್ಥೆಯ ಉಸ್ತುವಾರಿಯಲ್ಲಿ ಸೈಕಲ್ ಜಾಥಾ, ಪಾದಯಾತ್ರೆ, ಜನಸಾಮಾನ್ಯರ ಜೊತೆ ಸಂವಾದ, ಪೆÇೀಸ್ಟರ್ ಪ್ರದರ್ಶನ, ಹಿರಿಯರು ಮತ್ತು ಜ್ಞಾನಿಗಳಿಂದ ಹಿತ ವಚನ ಮುಂತಾದ ಜನರನ್ನು ಜಾಗೃತಗೊಳಿಸುವ ಕೆಲಸ ನಡೆಯುತ್ತಿದೆ.
– ರಾಮಕೃಷ್ಣಪ್ಪ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








