ಜಕಾರ್ತಾ:
ಏಷ್ಯನ್ ಗೇಮ್ಸ್ 2018 ಪಂದ್ಯಾವಳಿಯ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಖ್ಯಾತ ಆಟಗಾರ್ತಿ ಪಿ ವಿ ಸಿಂಧು ಫೈನಲ್ ಪ್ರವೇಶಿಸಿದ್ದು ದೇಶಕ್ಕೆ ಚಿನ್ನದ ಪದಕ ತೊಡಿಸುವ ಭರವಸೆ ಮೂಡಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಜಪಾನ್ನ ಅಕಾನೆ ಯಮಗುಚಿ ಅವರನ್ನು ಸೋಲಿಸಿದ್ದು, ಏಷ್ಯನ್ ಗೇಮ್ಸ್ನಲ್ಲಿ ಫೈನಲ್ಸ್ ಪ್ರವೇಶಿಸಿದ ಮೊದಲ ಭಾರತದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದರಿಂದ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿದೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನಿನ ಅಕೆನೆ ಯಮಾಗುಚಿ ವಿರುದ್ಧ 21-17, 15-21, 21-10 ಅಂತರದಲ್ಲಿ ಸೋಲಿಸಿದ ಸಿಂಧು ಅಂತಿಮ ಹಣಾಹಣಿಗೆ ಲಗ್ಗೆ ಇಟ್ಟಿದ್ದು, ವಿಶ್ವದ ನಂ.1 ಆತಗಾರ್ತಿ ತೈವಾನ್ ತೈ ತ್ಸುಯಿಂಗ್ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
