ಏಷಿಯನ್ ಗೇಮ್ಸ್ 2018 : ಭಾರತಕ್ಕೆ ಬೆಳ್ಳಿ ಪದಕ ತಂದ ಸಿಂಧು

ಜಕಾರ್ತಾ: 

      ಏಷ್ಯನ್​ ಗೇಮ್ಸ್​ನ ಬ್ಯಾಡ್ಮಿಂಟನ್​ ಫೈನಲ್​ ಪ್ರವೇಶಿಸಿದ ಮೊದಲ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

      3-21, 16-21 ನೇರ ಸೆಟ್‌ಗಳಿಂದ ಸಿಂಧು ಅವರನ್ನು ಯಿಂಗ್ ಮಣಿಸಿದರು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಯಿಂಗ್ ಅವರ ಚುರುಕಿನ ಆಟವನ್ನು ಎದುರಿಸುವಲ್ಲಿ ಸಿಂಧು ವಿಫಲರಾದರು. ಮೊದಲ ಸೆಟ್‌ನಲ್ಲಿ ಯಿಂಗ್ ಸುಲಭವಾಗಿ ಗೆದ್ದುಕೊಂಡರು.‌

      ನಿನ್ನೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಜಪಾನಿನ ಮಾಜಿ ವಿಶ್ವ ಚಾಂಪಿಯನ್ ಅಕಾನೆ ಯೆಮಗುಚಿ ವಿರುದ್ಧ 21-17, 15-21, 21-10ರ ಅಂತರದಲ್ಲಿ ಗೆಲ್ಲುವ ಮೂಲಕ ಏಷ್ಯಾಡ್​ ಫೈನಲ್ಸ್​ಗೆ ಐತಿಹಾಸಿಕ ಪ್ರವೇಶ ಪಡೆದಿದ್ದರು.

      ಸಿಂಧು ಸಾಧನೆಗೆ ದೇಶವೇ ಮೆಚ್ಚುಗೆಯ ಸುರಿಮಳೆ ಸುರಿಸಿದ್ದು, ಕ್ರೀಡಾ ಸಚಿವ ರಾಜ್ಯವರ್ಧನ್​ ರಾಥೋಡ್​ ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link