ಮಧುಗಿರಿ
ತಾಲ್ಲೂಕಿನ ಆಂಧ್ರದ ಗಡಿಭಾಗದಲ್ಲಿರುವ ಐ.ಡಿ.ಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ರಾಜಿನಾಮೆಯಿಂದ ತೆರವಾಗಿದ್ದು, ಶುಕ್ರವಾರ ನಡೆದ ಚುನಾವಣೆಯಲ್ಲಿ ಕೇವಲ 1 ಮತದಲ್ಲಿ ಎರಡೂ ಸ್ಥಾನಗಳು ಜೆಡಿಎಸ್ ಪಾಲಾಗಿವೆ.
ಅಧ್ಯಕ್ಷ ಸ್ಥಾನಕ್ಕೆ ಪಾರ್ವತಮ್ಮ ಬಸ್ತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜ ತಲಾ 9 ಮತಗಳನ್ನು ಪಡೆದು ಕೇವಲ 1 ಮತದ ಅಂತರದಿಂದ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಿವಮ್ಮ ಬಸ್ತಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್ ರೆಡ್ಡಿ ತಲಾ 8 ಮತ ಪಡೆದು ಕೇವಲ 1 ಮತದ ಅಂತರದಿಂದ ಪರಾಜಿತರಾಗಿದ್ದಾರೆ.
ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಐ.ಡಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟ ರಂಗಾರೆಡ್ಡಿ, ನಾಗರೆಡ್ಡಿ, ಮೆಡಿಕಲ್ ಬಾಬುರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಜಿಲಾನ್, ನವೀನ್ ಕುಮಾರ್, ಜಬಿ ಉಲ್ಲಾ, ಗೋಪಾಲ ರೆಡ್ಡಿ, ಮೆಡಿಕಲ್ ನಾಗ್ ಸೆನ್ ರೆಡ್ಡಿ, ದೇವರಾಜ್, ರಮೇಶ್, ಚೌಳಹಳ್ಳಿ ನಾಗಪ್ಪ, ನಾಗಭೂಷಣ್, ಗೋಪಿ, ದಯಾನಂದ ಮುಂತಾದವರಿದ್ದರು.
