ಐತಿಹಾಸಿಕ ಡಿ.ಉಪ್ಪಾರಹಟ್ಟಿ ಕೆರೆ ಅಪಾಯದ ಸ್ಥಿತಿಯಲ್ಲಿ

ಚಳ್ಳಕೆರೆ

         ತಾಲ್ಲೂಕಿನ ಬಹುತೇಕ ಕೆರೆಗಳು ಮಳೆಬಾರದ ಹಿನ್ನೆಲ್ಲೆಯಲ್ಲಿ ಸಂಪೂರ್ಣ ಒಣಗಿದ್ದು, ಕೇವಲ ಕೆಲವೇ ಕೆರೆಗಳಲ್ಲಿ ಮಾತ್ರ ಅಲ್ಪ ಪ್ರಮಾಣ ನೀರಿದ್ದು, ಆ ನೀರು ಸಹ ಪೋಲಾಗುತ್ತಿದ್ದು, ಇದು ರೈತರ ಆತಂಕಕ್ಕೆ ಕಾರಣವಾಗಿದೆ.

         ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿ.ಉಪ್ಪಾರಹಟ್ಟಿ ಗ್ರಾಮ ವ್ಯಾಪ್ತಿಯ ಡಿ.ಉಪ್ಪಾರಹಟ್ಟಿ ಗ್ರಾಮದಲ್ಲಿ ಪುರಾತನ ಕಾಲದ ಕೆರೆ ಇದ್ದು ಈ ಕೆರೆ ಒಂದು ಕಾಲದಲ್ಲಿ ಸುಮಾರು 500 ಎಕರೆ ಪ್ರದೇಶಗಳಿಗೆ ನೀರು ನೀಡುವ ಮೂಲಕ ನೀರಾವರಿ ಸೌಲಭ್ಯ ನೀಡಿತ್ತು. ಆದರೆ, ಇದು ಆ ಭಾಗದ ಮೂರ್ನಾಲ್ಕು ಗ್ರಾಮಗಳ ರೈತರ ಬೆಳೆಗಳಿಗೆ ಆಶ್ರಯ ತಾಣವಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಯಲ್ಲಿನ ಅಲ್ಪನೀರು ಸಹ ಪೋಲಾಗುತ್ತಿದ್ದು, ಇದರಿಂದ ಗ್ರಾಮಸ್ಥರು ಮತ್ತು ರೈತರು ಬೇಸತ್ತು ಹೋಗಿದ್ಧಾರೆ. ಸರ್ಕಾರ ಅಧಿಕಾರಿಗಳ ನಿರ್ಲಕ್ಷಕ್ಕೆ ಅಸಮದಾನ ವ್ಯಕ್ತ ಪಡಿಸಿದ್ದಾರೆ.

           ಗ್ರಾಮದ ಮುಖ್ಯಸ್ಥರಾದ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್ ರೈತ ಮುಖಂಡ ಉಪ್ಪಾರಹಟ್ಟಿ ಈ.ಈರಣ್ಣ, ರಾಜಣ್ಣ, ತಿಪ್ಪೇಸ್ವಾಮಿ, ಮಂಜುನಾಥ, ಚಿಕ್ಕಣ್ಣ ಮುಂತಾದವರು ಕೆರೆಯ ಅಭಿವೃದ್ಧಿಯನ್ನು ಕೈಗೊಳ್ಳದ ಸಣ್ಣ ನೀರಾವರಿ ಇಲಾಖೆ ವಿರುದ್ದ ಆರೋಪಿಸಿ ತಾಲ್ಲೂಕಿನಲ್ಲಿಯೇ ಪುರಾತನ ಕಾಲದ ಕೆರೆಯಾಗಿದೆ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಹಿಂದೆಮದಕರಿ ನಾಯಕ ಆಳ್ವಿಕೆಯಲ್ಲಿ ದೊಡ್ಡೇರಿ ತಾಲ್ಲೂಕು ಕೇಂದ್ರವಾಗಿದ್ದ ಸಂದರ್ಭದಲ್ಲಿ ಈ ಕೆರೆಯ ನೀರಿಂದಲೇ ಸುತ್ತಾರು ಗ್ರಾಮದ ಸುಮಾರು 600 ಎಕರೆ ಪ್ರದೇಶಕ್ಕೆ ನೀರಿನ ಸೌಲಭ್ಯ ದೊರಕುತ್ತಿದ್ದು, ಬಹುತೇಕ ಈ ಭಾಗದ ರೈತರೆಲ್ಲರಿಗೂ ಈ ಕೆರೆ ಬೆಳೆಗಳ ಬೆಳೆಯಲು ಹೆಚ್ಚು ಉಪಯುಕ್ತವಾಗುತ್ತಿತ್ತು.

             ಆದರೆ, ಇತ್ತೀಚಿನ ದಿನಗಳಲ್ಲಿ ಮಳೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಕೆರೆ ಒಣಗಿದ್ದರೂ ಸಹ ಕಳೆದ ಅಕ್ಟೋಬರ್ ತಿಂಗಳಲ್ಲಿ ಬಂದ ಅಲ್ಪ ಮಳೆಗೆ ಈ ಕೆರೆಯಲ್ಲಿ ಸುಮಾರು ಎರಡ್ಮೂರು ತಿಂಗಳಷ್ಟು ನೀರು ದಾಸ್ತಾನಿತ್ತು. ಆದರೆ, ಕೆರೆಯ ಏರಿಯ ಮೇಲೆ ಎರಡೂ ಭಾಗದಲ್ಲಿ ಬೆಳೆದಿರುವ ಜಾಲಿಗಿಡಗಳು ಅಲ್ಲಲ್ಲಿ ಹಾವು, ಹೆಗ್ಗಣ ತೋಡಿರುವ ಬಿಲಗಳಿಂದ ನೀರು ಪೋಲಾಗುತ್ತಿದ್ದು, ಇದರಿಂದ ಕೆರೆಯ ನೀರು ಖಾಲಿಯಾಗುವುದಲ್ಲದೆ ಕೆರೆ ಏರಿಯೂ ಸಹ ಅಪಾಯದಲ್ಲಿದ್ದು, ಇದನ್ನು ದುರಸ್ಥಿಗೊಳಿಸುವಂತೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿಸಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

           ಈ ಕೆರೆಯ ನೀರು ರೈತರಿಗಷ್ಟೇಯಲ್ಲದೆ ಈ ಭಾಗದ ಸಾವಿರಾರು ಸಂಖ್ಯೆಯ ಪಶು, ಪಕ್ಷಿ, ಪ್ರಾಣಿ ಹಾಗೂ ಜಾನುವಾರುಗಳಿಗೆ ಹೆಚ್ಚು ಅನುಕೂಲವಾಗಿತ್ತು. ಕೆರೆ ನೀರಿನ ಹಿನ್ನೆಲ್ಲೆಯಲ್ಲಿ ಈ ಭಾಗದ ಬಹುತೇಕ ಎಲ್ಲಾ ಬೋರ್‍ವೆಲ್‍ಗಳಲ್ಲಿ ನೀರಿನ ತೇವಾಂಶ ಹೆಚ್ಚಿನ ಉಳಿದಿರುವ ಅಲ್ಪ ಪ್ರದೇಶದ ತೋಟಗಳಲ್ಲಿದ ಬೆಳೆಗಳು ಸಹ ರಕ್ಷಣೆಯಾಗುತ್ತಿತ್ತು.

         ಆದರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಮನವಿ ಮಾಡಿಕೊಂಡರೂ ಇಲ್ಲಿಗೆ ಭೇಟಿ ನೀಡದೆ ನಿರ್ಲಕ್ಷ್ಯೆ ವಹಿಸಿ ಹಿನ್ನೆಲೆ ಕೆರೆ ಅಪಾಯದ ದುಸ್ಥಿತಿಯನ್ನು ಎದುರಿಸುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಕೆರೆಯ ಏರಿ ಹೊಡೆದು ಈ ಭಾಗದ ರೈತರಿಗೆ ಸಂಕಷ್ಟಗಳು ಎದುರಾಗಲಿವೆ. ಕೆರೆಯ ಅಭಿವೃದ್ಧಿ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಲಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರಾಗಲಿ ಗಮನಹರಿಸುತ್ತಿಲ್ಲ.

          ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಹಲವಾರು ಅಭಿವೃದ್ಧಿ ಕಾರ್ಯಗಳ ಮೂಲಕ ಜನರಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದ್ದು, ಪ್ರಸ್ತುತ ಡಿ.ಉಪ್ಪಾರಹಟ್ಟಿಯ ಕೆರೆಯ ದುಸ್ಥಿತಿಯ ಬಗ್ಗೆ ಅವರೇ ಗ್ರಾಮಕ್ಕೆ ಭೇಟಿ ನೀಡಿ ಕೆರೆಯ ಪರಿಸ್ಥಿತಿಯನ್ನು ಅರಿತು ಈ ಕೆರೆಯ ಅಭಿವೃದ್ಧಿಗೆ ಮುಂದಾಗಬೇಕಿದೆ. ಕೇವಲ ಗ್ರಾಮದಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವುದಲ್ಲಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಆಡಳಿತ ಕಾರ್ಯನಿರತವಾಗಿದ್ದರೂ ಸಹ ಇಂತಹ ರೈತೋಪಯೋಗಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಶಾಸಕ ಟಿ.ರಘುಮೂರ್ತಿಯವರು ಈ ಭಾಗದ ಐದಾರು ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರ ಹಿತದೃಷ್ಠಿಯಿಂದ ಡಿ.ಉಪ್ಪಾರಹಟ್ಟಿಯ ಕರೆಯ ದುರಸ್ಥಿಗೆ ಮುಂದಾಗಬೇಕೆಂದು ನೊಂದ ರೈತರು ಮನವಿ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link