ಐ.ಡಿ.ಹಳ್ಳಿಯಲ್ಲಿ ಕನ್ನಡ ಜಾಗೃತಿ ಶಾಖೆ ಉದ್ಘಾಟನೆ

ಐ.ಡಿ.ಹಳ್ಳಿ

           ಆಂಧ್ರದ ಗಡಿಭಾಗದಲ್ಲಿರುವ ಐ.ಡಿ.ಹಳ್ಳಿ ಗ್ರಾಮದಲ್ಲಿಭಾನುವಾರ ಕನ್ನಡ ಜಾಗೃತಿ ವೇದಿಕೆ ಹೋಬಳಿ ಅಧ್ಯಕ್ಷರಾದ ಯುವರಾಜ್ ರವರು ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶದ ದಿನದಂದು. ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್ ರವರು ಆಗಮಿಸಿ.ಆಂದ್ರದ ಗಡಿ ಭಾಗವಾಗಿರುವ ಐ.ಡಿ.ಹಳ್ಳಿ ಗ್ರಾಮದಲ್ಲಿ ಕನ್ನಡ ಜಾಗೃತಿ ವೇದಿಕೆ ಸಂಘಟನೆಯ ಶಾಖೆಯನ್ನು ತೆರೆದು. ತಾಯಿ ಭುವನೇಶ್ವರಿಯ ಫಲಕ ಉದ್ಘಾಟಿಸಿ ಮಾತನಾಡಿದರು.
            ಕನ್ನಡ ನಾಡು.ನುಡಿ.ನೆಲ.ಜಲ.ಭಾಷೆಯ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಒಕ್ಕೂಲರಾಗಿ ಕೂಗಾಕಬೇಕು.ಇವತ್ತು ಸಾವಿರಾರು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ.ನಮ್ಮನ್ನು ಆಳುವಂತಹ ಜನಪ್ರತಿನಿಧಿಗಳು ನಮ್ಮ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ. ಚುನಾವಣೆ ಬಂದಾಗ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ ಅಥವಾ ನೆನಪಿಸಿಕೊಳ್ಳುತ್ತಾರೆ.ಕಾಟಚರಕ್ಕೆ ಏನೂ ಒಂದೆರಡು ಮಾತುಗಳನ್ನು ಹೇಳಿ ಆಶ್ವಾಸನೆಗಳನ್ನು ಕೂಟ್ಟು ನಮ್ಮ ಭರವಸೆಗಳನ್ನು ಆಸೆಯಾಗಿ ರುಸಿಗೂಳಿಸುತ್ತಾರೆ. ಅವರ ಮಾತುಗಳನ್ನು ಕೇಳಿದ ನಾವು ಸುಮ್ಮನಾಗಿ ಇರುವ ಕಾರಣದಿಂದ ಅವರು ಸುಲಭವಾಗಿ ನಮ್ಮ ಮತಗಳನ್ನು ಪಡೆದುಕೊಂಡು ಹೊರಟುತ್ತಾರೆ.ಅದೇ ರೀತಿಯಾಗಿ ನಮ್ಮ ನಾಡಿನ ಭಾಷೆ ನಮ್ಮ ನಾಡಿನ ಜನತೆಗೆ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಯಾವ ರಾಜಕಾರಣಿಗಳು ಸಹ ಧ್ವನಿ ಮಾಡುವುದಿಲ್ಲ.

             ಹಾಗಾಗಿ ಅಂತಹ ವಿಚಾರಗಳನ್ನು ಅಳವಡಿಸಿಕೊಂಡಂತಹ ನಾವು.ನಮ್ಮ ಸಂಘಟನೆಯಾದ ಕನ್ನಡ ಜಾಗೃತಿ ವೇದಿಕೆಯ ಮುಖಾಂತರ ನಮ್ಮ ಸ್ಥಳೀಯವಾಗಿ ಇರುವಂತಹ ಏನೇನು ಮೂಲಭೂತ ಸಮಸ್ಯೆಗಳಿವೆ.ಅಂತಹ ಮೂಲಭೂತ ಸಮಸ್ಯೆಗಳನ್ನು ಹೇಳಬೇಕಾದರೆ ಒಂದು ಸಂಘಟನೆ ಬೇಕಾಗುತ್ತದೆ.ಹಾಗಾಗಿ ಅಂತ ಸಂಘಟನೆಯಿಂದ ನಾವೆಲ್ಲರೂ ಒಂದಾಗಿ ಜಾತ್ಯಾತೀತವಾಗಿ.ಧರ್ಮಾತೀತವಾಗಿ ಪಕ್ಷಾತೀತವಾಗಿ.ನಾವು ಹೋರಾಟಗಳನ್ನು ಮಾಡಬೇಕಾದರೆ ಒಂದು ಸಂಘಟನೆ ತುಂಬಾ ಅವಶ್ಯಕವಾಗಿ ಬೇಕಾಗುತ್ತದೆ.

              ಹಾಗಾಗಿ ಸುಮಾರು 20 ವರ್ಷಗಳಿಂದ ಕನ್ನಡ ನಾಡು. ನುಡಿ.ನೆಲ.ಜಲ ಭಾಷೆ ಹಾಗೂ ಸಂಸ್ಕೃತಿಗೆ ನಮ್ಮ ಸಂಘಟನೆಯು ಪರಂಪರೆಯನ್ನು ಒಂದುಗೂಡಿಸಿಕೂಂಡು ಹೋರಾಟಗಳನ್ನು ಮಾಡುತ್ತಾ.ಸೂಮರು 20 ವಸಂತಗಳನ್ನು ನವು ಪೂರೈಸಿದ್ದೆವೆ.ಹಾಗಾಗಿ ಅಂತಹ ಸಂಘಟನೆಯಾದ ನಮ್ಮ ಕನ್ನಡ ಜಾಗೃತಿ ವೇದಿಕೆ ಸಂಘಟನೆ ಸಂಘಟನೆಯನ್ನು ಆಂಧ್ರಕ್ಕೆ ಕೇವಲ ಒಂದು ಕಿಲೋಮೀಟರ್ ಇರುವಂತಹ ಆಂಧ್ರದ ಗಡಿ ಭಾಗದಲ್ಲಿ ಇಂದು ನಮ್ಮ ಸಂಘಟನೆಯನ್ನು ಮಾಡಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ.ಮುಂದೆಯೂ ಸಹ ನಿಮಗೆ ಏನೇ ತೊಂದರೆಯಾದರೂ ನಾನು ಜೊತೆ ಇರುತ್ತೇನೆ.ಗಡಿಭಾಗದಲ್ಲಿ ಸಮಸ್ಯೆಗಳು ಬಂದೇ ಬರುತ್ತದೆ ಆದ್ದರಿಂದ ನೀವೆಲ್ಲ ಜಾಗೃತರಾಗಿ ಕನ್ನಡ ಭಾಷೆಗೆ ಹಾಗೂ ಯಾವುದೆ ಹಾನಿ ಉಂಟಾಗದಂತೆ.ಸೈನಿಕರು ಗಡಿಯಲ್ಲಿ ಯಾವ ರೀತಿ ನಮಗೆ ರಕ್ಷಣೆ ಕೊಡುತ್ತಾರೂ. ಅದೇ ರೀತಿ ನಮ್ಮ ಕರ್ನಾಟಕ ರಾಜ್ಯಕ್ಕೆ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ರಕ್ಷಣೆಯನ್ನು ಕೊಡಬೇಕಾಗುತ್ತದೆ ಎಂದು ಸಂಘಟನೆಯ ಪದಾಧಿಕಾರಿಗಳಿಗೆ ಹೇಳಿದರು.

              ಕನ್ನಡ ಸೋಮುರವರು ತುಂಬಾ ಚನ್ನಾಗಿ ಮಾತನಾಡಿ ಕನ್ನಡ ದ್ವಜದ ಬಗ್ಗೆ ಹಾಗೂ ಕನ್ನಡಾಂಬೆಯ ಬಗ್ಗೆ.ಹಾಗೂ ಎಲ್ಲಾ ವಿಷಯಗಳನ್ನು ವಿಸ್ತಾರವಾಗಿ ಕನ್ನಡ ನಾಡು.ನುಡಿ.ನೆಲ.ಜಲ.ಭಾಷೆಯ ಬಗ್ಗೆ ಸಂತೋಷದಿಂದ ಕನ್ನಡ ಜಾಗೃತಿ ವೇದಿಕೆಯ ಪಧಾದಿಕಾರಿಗಳಿಗೆ ತೀಳಿಸಿದರು.

             ತುಮಕೂರು ಜಿಲ್ಲಾಧ್ಯಕ್ಷರಾದ ಚೆಲುವರಾಜ್ ರವರು ಮಾತನಾಡಿ ಗಡಿ ಭಾಗದಲ್ಲಿರುವ ಈ ಸಣ್ಣ ಗ್ರಾಮದಲ್ಲಿ ಇಂದು ಕನ್ನಡ ಜಾಗೃತಿ ವೇದಿಕೆ ಸಂಘಟನೆಯನ್ನು ರಸ್ತೆಯ ಬದಿಯಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಅನಾವರಣ ಮಾಡಿದ ಸಂಘದ ಪದಾಧಿಕಾರಿಗಳನ್ನು ನೋಡಿದರೆ ನನಗೆ ಸೈನಿಕರಾಗಿ ಕಾಣಿಸುತ್ತಿದ್ದಾರೆ.ಇದೇ ರೀತಿ ಮುಂದುವರೆದರೆ ನಮ್ಮ ನಾಡು.ನುಡಿ. ಜಲ.ಭಾಷೆ ಹಾಗೂ ಸಂಸ್ಕೃತಿಯನ್ನು ಆನಂದವಾಗಿ ಸಂತೋಷವಾಗಿ ನಾವು ನಮ್ಮ ಕನ್ನಡ ಧ್ವಜ ವಾಗಿರುವ ಕೆಂಪು ಮತ್ತು ಹಳದ ಬಣ್ಣವಾದ ಬಾವುಟವನ್ನು ಮೇಲೆತ್ತಿ ಹಿಡಿಯ ಬಹುದು ಎಂದು ಹೇಳಿದರು.

             ತಾಲೂಕು ಅಧ್ಯಕ್ಷ ರಾಘವೇಂದ್ರ ರವರು ಮಾತನಾಡಿ ಈ ಗ್ರಾಮದಲ್ಲಿ ನಮ್ಮ ಸಂಘಟನೆಯಿಂದ ಮೊದಲು ಪದಾಧಿಕಾರಿಗಳ ಆಯ್ಕೆ ಮಾಡಿದ ಮೂರು ದಿನದಲ್ಲಿ ನಮ್ಮ ಸಂಘಟನೆಯಿಂದ ಈ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಅನ್ಯಾಯ ನಡೆದಿದ್ದು ಸುದ್ದಿಯನ್ನು ತಿಳಿದ.ಸಂಘದ ಪಧಾದಿಕಾರಿಗಳೆಲ್ಲರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ.ಮೇಲಾದಿಕಾರಿಗಳಿಗೆ ನೀವೇಶನಗಳು ಯಾರಿಗೆ ಅರ್ಹತೆ ಇರುತ್ತದೆಯೂ ಅಂತಹವರನ್ನು ಹಾರಿಸಿ ಕೂಡುವಂತೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರು ಆವತ್ತಿನಿಂದ ಇವತ್ತಿನ ಹೂರಗೂ ಸಂಬಂದಪಟ್ಟಂತಹ ಅಧಿಕಾರಿಗಳು ಯಾರಿಗೆ ನಿವೇಶನಗಳು ಇಲ್ಲ ಎಂದು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

              ಆದ್ದರಿಂದ ಇಂತಹ ನೂರಾರು ಸಮಸ್ಯೆಗಳನ್ನು ಗಡಿಭಾಗವಾಗಿರುವ ಐ.ಡಿ.ಹಳ್ಳಿಯ ಕನ್ನಡ ಜಾಗೃತಿ ವೇದಿಕೆ ಪದಾಧಿಕಾರಿಗಳು ಒಂದೊಂದಾಗಿ ಪರಿಶೀಲಿಸಿ.ಸಾರ್ವಜನಿಕರಿಗೆ ನ್ಯಾಯ ದೊರೆಯುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.
ಗರಣಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋವಿಂದರಾಜು ರವರು ಮಾತನಾಡಿ ಆಂಧ್ರವಾಗಿರುವ ಮಡಕಶಿರಾ ದಲ್ಲಿ ನಮ್ಮ ಕನ್ನಡಿಗರು ಸುಮಾರು ಕನ್ನಡಂಭೆಯ ಫಲಕಗಳನ್ನು ಅನಾವರಣ ಮಾಡಿದ್ದಾರೆ. ಹಾಗೂ ಕನ್ನಡ ಸಂಘಟನೆಯನ್ನು ಕಟ್ಟಿ ಗಟ್ಟಿಯಾಗಿ ಹಿಡಿದಿದ್ದಾರೆ.ಆದರೆ ಐ.ಡಿ.ಹಳ್ಳಿ ಗ್ರಾಮ ಕರ್ನಾಟಕವಾಗಿದ್ದರೂ ಸಹ. ಸುಮಾರು ವರ್ಷಗಳಿಂದ ಯಾರು ಮಾಡಿದ ಸಂಘಟನೆ ಇಂದೂ ಮಾಡಿ ಮೊದಲ ಬಾರಿ ಐ.ಡಿ.ಹಳ್ಳಿ ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿ ತಾಯಿ ಭುವನೇಶ್ವರಿಯ ಫಲಕವನ್ನು ಉದ್ಘಾಟನೆಯನ್ನು ಮಾಡಿದಂತಹ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಪರವಾಗಿ ಅಭಿನಂದನೆಗಳು ಹಾಗೂ ನಿಮಗೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಏನೇ ಅನ್ಯಾಯವಾದರೂ ನಿಮಗೆ ಮಹಿತಿ ತಿಳಿಸಿದರೆ ನೀವು ತಕ್ಷಣ ನೀವು ವಿಚಾರಿಸಿ ಸಾರ್ವಜನಿಕರಿಗೆ ಪ್ರತಿಫಲ ಸಿಗುವವರೆಗೂ ಹೋರಾಟಗಳನ್ನು ಮಾಡಿ ಸಂಘಟನೆಯನ್ನು ಬೆಳೆಸುವಂತಹ ಕೆಲಸಗಳನ್ನು ನೀವೆಲ್ಲರೂ ಇವತ್ತಿನಿಂದಲೇ ಮಾಡಬೇಕಾಗುತ್ತದೆ ಎಂದರು.

            ಈ ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ.ಮಂಜುನಾಥ್ ದೇವ್.ರವರು ಹಾಗೂ ಜಿಲ್ಲಾಧ್ಯಕ್ಷರಾದ ಚೆಲುವರಾಜು.ಮತ್ತು ಕನ್ನಡ ಸೋಮು. ಆನೇಕಲ್ ತಾಲ್ಲೂಕು ಯುವ ಅಧ್ಯಕ್ಷರಾದ ಬೆಂಗಳೂರು ಮಧು.ತಾಲೂಕು ಅಧ್ಯಕ್ಷರಾದ ರಾಘವೇಂದ್ರ.ಕ.ಜಾ.ವೇ.ಸುರೇಶ್.ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೋವಿಂದರಾಜು. ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಯು. ನವೀನ್ ಕುಮಾರ್.ಶಿವಮ್ಮ ಬಸ್ತಪ್ಪ.ಹಾಗೂ ರೆಡ್ಸ್ ಸಂಸ್ಥೆ ಹೋಬಳಿ ಅಧ್ಯಕ್ಷರಾದ ತಾಡಿ ನಾಗರಾಜು. ಜೆಡಿಎಸ್ ಎಸ್ಸಿ ಘಟಕದ ಮಾಜಿ ಹೋಬಳಿ ಅಧ್ಯಕ್ಷರಾದ ನಟರಾಜು.ಡಿ.ಎಸ್.ಎಸ್.ತಾಲೂಕ್ ಅಧ್ಯಕ್ಷರಾದ ಅಂಜನಪ್ಪ. ಮಾದಿಗ ದಂಡೋರ ಗೌರವಾಧ್ಯಕ್ಷರಾದ ನಲ್ಲ ಕಮ್ಮನಹಳ್ಳಿ ಹನುಮಂತರಾಯಪ್ಪ. ರೇಟ್ಸ ಹೋಬಳಿ ಅಧ್ಯಕ್ಷರಾದ ಗಂಗಾಧರ್ ಬಿದರಕೆರೆ. ಚಿನ್ನೆನಹಳ್ಳಿ ಗೋವಿಂದಪ್ಪ ಸ್ವಾಮಿ.ಸಿದ್ದಪ್ಪ ಮದುಗಿರಿ.ಹಾಗೂಕ.ಜಾ.ವೇ.ಎಲ್ಲಾ ಪಧಾದಿಕಾರಿಗಳು ಹಾಗೂ ಹೋಬಳಿ ಅಧ್ಯಕ್ಷರಾದ ಯುವರಾಜ್.

            ಹೋಬಳಿ ಗೌರವಾಧ್ಯಕ್ಷರಾದ ಹೂವಿನಹಳ್ಳಿ ರಾಮಚಂದ್ರಪ್ಪ. ಹೊಸಕೆರೆ ಡಾಕ್ಟರ್ ಹಾಗೂ ಜೆಡಿಎಸ್ ಎಸ್ಸಿ ಘಟಕದ ಮುಖಂಡರಾದ ಶಿವಕುಮಾರ್ ಮತ್ತು ಶಂಭೂ.ಹರೀಶ. ಮಾರೇಶ. ಬೆಂಗಳೂರು ಖಾಸಗಿ ಕಂಪನಿಯ ಗೋವಿಂದಪ್ಪ.ಗೌರಿಬಿದನೂರು ಗಂಗಾಧರಪ್ಪ. ಬಾಲಪ್ಪ.ಆದಿನಾರಾಯಣ. ರಾಜು.ನಾಗರಾಜು.ಮಲ್ಲೇಶ.ಜಗದೀಶ. ತಿಪ್ಪೇಶ. ಕಾಂತರಾಜು ಹಾಜರಿದ್ದರು.

Recent Articles

spot_img

Related Stories

Share via
Copy link