ತಿಪಟೂರು
ರಾಜ್ಯ ಸರ್ಕಾರ ಮಾದಿಗರ ಹೋರಾಟದ ಶಕ್ತಿಯನ್ನು ನಿರ್ಲಕ್ಷಿಸುತ್ತಿದೆ, ಮಾದಿಗರು ಒಳಮೀಸಲಾತಿಗಾಗಿ ಅನೇಕ ವರ್ಷಗಳಿಂದ ಹೋರಾಟುತ್ತಿದ್ದು ರಾಜ್ಯಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಮಾಡದಿದ್ದರೆ ಮಾದಿಗರು ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಈ ಬಗ್ಗೆ ಎಚ್ಚರಿಕೆ ನೀಡಲು ಸೆಪ್ಟೆಂಬರ್ 24 ರಂದು ತಮಟೆ ಚಳುವಳಿ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಾಲ್ಲೂಕಿನ ಮಾದಿಗ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮಾದಿಗ ದಂಡೋರ ತಾಲ್ಲೋಕು ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ ತಿಳಿಸಿದರು
ನಗರದ ಪ್ರವಾಸಿಮಂದಿರದಲ್ಲಿ ಏರ್ಪಡಿಸಿದ ಕರ್ನಾಟಕ ಮಾದಿಗ ದಂಡೋರ ಹಮ್ಮಿಕೊಂಡಿರುವ ತಮಟೆ ಚಳುವಳಿ ಪೂರ್ವಬಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿದ್ದ ಅವರು ರಾಜ್ಯದಲ್ಲಿ ಪರಿಶಿಷ್ಠ ಜಾತಿಗಳಲ್ಲಿಯೇ ಮಾದಿಗ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದ ಸವಲತ್ತುಗಳು ದೊರೆಯುತ್ತಿಲ್ಲ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ನ್ಯಾಯಸಮ್ಮತವಾಗಿತ್ತು ರಾಜ್ಯಸರ್ಕಾರ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕು. ಹಿಂದಿನ ಸರ್ಕಾರ ಸ್ಥಾಪಿಸಿದ ಆದಿಜಾಂಬವ ಅಭಿವೃದ್ದಿ ನಿಗಮವನ್ನು ಲೋಕಾರ್ಪಣೆಗೊಳಿಸಿ ಪರಿಶಿಷ್ಠಜಾತಿಗೆ ಮೀಸಲಿಟ್ಟಿರುವ 40 ಶೇಕಡ ಹಣವನ್ನು ಬಿಡುಗಡೆ ಮಾಡಬೇಕು. ಮಂತ್ರಿಮಂಡಲದಲ್ಲಿ ಮೂರು ಜನ ಮಾದಿಗ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಹೊರಗುತ್ತಿಗೆ ನೀತಿ ರದ್ದುಗೋಳಿಸಬೇಕು.
ರಾಜ್ಯಸರ್ಕಾರ ಆದಿಜಾಂಬವ ಜಯಂತಿ ಹಾಗೂ ಅರುಂಧತಿ ಜಯಂತಿಯನ್ನು ಆಚರಿಸಿ ಸರ್ಕಾರಿ ರಜೆ ಗೋಷಿಸಬೇಕು, ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಬೆಂಗಳೂರು ಗಾಂಧಿಪ್ರತಿಮೆ ಮೌರ್ಯ ಸರ್ಕಲ್ನಲ್ಲಿ ತಮಟೆ ಚಳುವಳಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಾದಿಗ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ನಮ್ಮ ನ್ಯಾಯಯುತ ಹಕ್ಕು ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿ ಜಾರಿಯಾಗುವ ವರೆಗೆ ಉಗ್ರಹೋರಾಟ ಮಾಡಬೇಕಾಗಿ ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾದಿಗ ದಂಡೋರ ಜಿಲ್ಲಾ ಉಪಾಧ್ಯಕ್ಷ ಈಚನೂರು ಮಹದೇವ ಮಾತನಾಡಿ ಮಾದಿಗರು ಬೇರೆಬೇರೆ ಸಂಘಟನೆಗಳ ಹೆಸರಿನಲ್ಲಿ ಹೋರಾಡದೆ ಒಂದೇ ಸಂಘಟನೆಯ ಹೆಸರಿನಲ್ಲಿ ಹೋರಾಟ ಮಾಡಬೇಕಿದೆ ಮಾದಿಗ ಸಮುದಾಯ ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಜನಸಂಖ್ಯೆ ಒಳಗೊಂಡಿದೆ ಆದರೆ ಸರ್ಕಾರ ನಮ್ಮ ಜನಾಂಗದ ಶಾಸಕರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡದೇ ಅವಮಾನ ಮಾಡಿರುವುದು ಖಂಡನೀಯ ಈ ನಿರ್ಲಕ್ಷದ ಫಲವನ್ನು ಮುಂದಿನ ದಿನಗಳಲ್ಲಿ ಉಣ್ಣಲಿದೇ ಮಾದಿಗರು ಜಾಗೃತರಾಗಿ ನಮಗೆ ಆಗಿರುವ ಅನ್ಯಾಯದ ವಿರುದ್ದ ಹೋರಾಟಮಾಡುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಆದಿಜಾಂಬವ ಸಂಘದ ಅಧ್ಯಕ್ಷ ಪೆದ್ದಿಹಳ್ಳಿ ನರಸಿಂಹಯ್ಯ, ಡಿ.ಎಸ್.ಎಸ್ ಅಧ್ಯಕ್ಷ ಕಲ್ಲೇಶ್, ಮೈನ್ಸ್ ಬಸವರಾಜು, ದಲಿತ ನೌಕರ ಸಂಘದ ಮುಂಖಡ ಸೋಮಶೇಖರ್, ಬಸವರಾಜು, ರಮೇಶ್, ಟಿ.ಕೆ.ಕುಮಾರ್, ಈಚನೂರು ಸೋಮಶೇಖರ್, ಈಡೇನಹಳ್ಳಿ ಕುಮಾರ್, ಕೃಷ್ಣಮೂರ್ತಿ, ಉಮೇಶ್ ಹತ್ಯಾಳ್ ಮೂರ್ತಿ, ಶಿವಲಿಂಗಯ್ಯ, ರಂಗಣ್ಣ ಜಯರಾಂ ಮುಂತಾದವರು ಉಪಸ್ಥಿತರಿದರು