ನವದೆಹಲಿ:
ಕರ್ನಾಟಕದ ಕೊಡಗು ಜಿಲ್ಲೆಗೆ ದೊಡ್ಡ ವಿಪ್ಪತ್ತು ಬಂದೊದಗಿದ್ದು, ಇದರ ಮಧ್ಯೆ ಓಯಸಿಸ್‍ನಲ್ಲಿ ಭರವಸೆಯ ಬೆಳಕು ಮೂಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಿಳಿಸಿದ್ದಾರೆ.
‘ಕರ್ನಾಟಕದ ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹ ರಾಜ್ಯವನ್ನು ಕಂಗೆಡಿಸಿದೆ. ಆದರೆ ಈ ಸಂಕಷ್ಟದ ನಡುವಲ್ಲೇ ಒಂದು ಭರವಸೆಯ ಓಯಾಸಿಸ್ ಆಗಿ ಕೊಡಗಿನ ಸುಂಟಿಕೊಪ್ಪ ಎಂಬ ನಗರ ಕಾಣಿಸುತ್ತದೆ. ಇಲ್ಲಿ ಶಿವ, ರಾಮ, ಕ್ರಿಸ್ತ, ಅಲ್ಲಾಹ್ ಮತ್ತು ಬುದ್ಧ ಎಲ್ಲರೂ ಸಂತ್ರಸ್ತರಿಗೆ ಪರಿಹಾರ ನೀಡಲು, ಆಶ್ರಯ ನೀಡಲು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಹಾಯ ಮಾಡಿದ್ದಾರೆ. ಇದು ಭಾರತ!’ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
