ಓರ್ವನ ಬಂಧನ: ಚಿನ್ನಾಭರಣ ವಶ

ದಾವಣಗೆರೆ:

     ಬಂಗಾರ-ಬೆಳ್ಳಿ ಕಳುವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಚನ್ನಗಿರಿ ಪೊಲೀಸರು ಯಶಸ್ವಿಯಾಗಿದ್ದು, ಒಟ್ಟು 2 ಕಳವು ಪ್ರಕರಣಗಳ ಬೇಧಿಸಿ, ಬಂಧಿತನಿಂದ ನಾಲ್ಕುವರೆ ಲಕ್ಷ ರೂ. ಮೌಲ್ಯದ 275 ಗ್ರಾಂ ತೂಕದ ಬೆಳ್ಳಿ, 127 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

     ಚಿಕ್ಕಮಂಗಳೂರು ಜಿಲ್ಲೆ ತರೀಕೇರಿ ತಾಲ್ಲೂಕಿನ ಶಿವನಿ ಗ್ರಾಮದ ಪರಮೇಶ್ (25) ಬಂಧಿತ ಆರೋಪಿ.ಗ್ರಾಮಾಂತರ ಉಪವಿಭಾಗದ ಚನ್ನಗಿರಿ, ಸಂತೆಬೆನ್ನೂರು, ಠಾಣೆ ಸರಹದ್ದುಗಳಲ್ಲಿ ಬಂಗಾರ ಬೆಳ್ಳಿ ಕಳುವು ಪ್ರಕರಣಗಳು ಹೆಚ್ಚಾಗಿದ್ದು, ಈ ಪ್ರಕರಣಗಳನ್ನು ಪತ್ತೆ ಮಾಡಲು ಎಸ್ಪಿ ಆರ್. ಚೇತನ್ ಮತ್ತು ಎಎಸ್ಪಿ ಟಿ.ಜೆ. ಉದೇಶ್, ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮಂಜುನಾಥ ಕೆ. ಗಂಗಲ್ ಮುಂದಾಳತ್ವದಲ್ಲಿ ಚನ್ನಗಿರಿ ವೃತ್ತ ನಿರೀಕ್ಷಕ ಕೆ.ಎನ್. ಗಜೇಂದ್ರಪ್ಪ ಹಾಗೂ ಚನ್ನಗಿರಿ ಪೊಲೀಸ್ ಠಾಣೆಯ ಪಿಎಸ್‍ಐ ಶಿವರುದ್ರಪ್ಪ ಎಸ್. ಮೇಟಿ ಮತ್ತು ಸಿಬ್ಬಂದಿಗಳಾದ ಎಸ್.ಆರ್. ರುದ್ರೇಶ್, ಧರ್ಮಪ್ಪ , ಎಂ. ರುದ್ರೇಶ, ಎ. ಮಂಜುನಾಥ ಪ್ರಸಾದ್, ಜೆ. ಪರಶುರಾಮ, ತಿಪ್ಪೇಶ್ ಓಲೇಕಾರ, ರೇವಣಸಿದ್ದಪ್ಪ, ಮಂಜುನಾಥ ಒಳಗೊಂಡ ತಂಡವು ಬಂಗಾರ, ಬೆಳ್ಳಿ ಕಳುವು ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

       ಇಂದು ಮಧ್ಯಾಹ್ನ ಚನ್ನಗಿರಿ ಟೌನ್ ಬಳಿ ಚನ್ನಗಿರಿ ಠಾಣೆಯ ಪಿಎಸ್‍ಐ ಮತ್ತು ಸಿಬ್ಬಂದಿಗಳು ಅನುಮಾನಗೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಚನ್ನಗಿರಿ ಪೊಲೀಸ್ ಠಾಣೆಯ 1 ಮತ್ತು ಸಂತೆಬೆನ್ನೂರು ಠಾಣೆಯ 1 ಕಳುವು ಪ್ರಕರಣಗಳು ಪತ್ತೆಯಾಗಿವೆ.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap