ಕಂಪ್ಯೂಟರ್ ಆಪರೇಟರ್ ವರ್ಗಾವಣೆ : ಪ್ರತಿಭಟನೆ

ಗುಬ್ಬಿ

    ಐದು ವರ್ಷದ ಅವಧಿಗೆ ಖಾಸಗಿ ಸಂಸ್ಥೆ ವತಿಯಿಂದ ಕಂಪ್ಯೂಟರ್ ಆಪರೇಟರ್ ಆಗಿ ಕಡಬ ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ತಹಸೀಲ್ದಾರ್ ಅವರು ಆಧಾರ್ ಕಾರ್ಡ್ ತೆಗೆಯಲು ಗುಬ್ಬಿ ತಹಸೀಲ್ದಾರ್ ಕಚೇರಿಗೆ ವರ್ಗಾವಣೆ ಮಾಡಿಕೊಂಡಿರುವುದನ್ನು ವಿರೋಧಿಸಿ ಕಂಪ್ಯೂಟರ್ ಆಪರೇಟರ್ ಚೇತನ್ ಕುಮಾರ್ ನನಗೆ ಅನ್ಯಾಯವಾಗಿದ್ದು ನನಗೆ ನ್ಯಾಯ ಕೊಡಿಸಿ ಎಂದು ಕಡಬ ನಾಡ ಕಚೇರಿ ಮುಂಭಾಗ ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

    ತಾಲ್ಲೂಕಿನ ಕಡಬ ನಾಡ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಚೇತನ್ ಕುಮಾರ್ 5 ವರ್ಷದ ಅವಧಿಗೆ ಕಂಪ್ಯೂಟರ್ ಆಗಿ ಕೆಲಸ ನಿರ್ವಹಣೆ ಮಾಡಲು ಸೇರ್ಪಡೆಯಾಗಿದ್ದು ತಹಸೀಲ್ದಾರ್ ಅವರು ಏಕಾಏಕಿ ನನ್ನನ್ನ ಆಧಾರ್ ಕಾರ್ಡ್ ತೆಗೆಯಲು ಗುಬ್ಬಿಗೆ ವರ್ಗಾವಣೆ ಮಾಡಿದ್ದಾರೆ. ಇದು ಸರಿಯಲ್ಲ ಹಾಗೂ ನನಗೆ ಮುಖ್ಯ ಕಂಪ್ಯೂಟರ್ ಕೆಲಸಗಾರನಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದೆ, ಆದರೆ ಈಗ ಆಧಾರ್ ಕಾರ್ಡ್ ತೆಗೆಯಲು ಹಾಕಿ ಡಿ ಗ್ರೇಡ್ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಮೂರು ಜನರನ್ನು ಮಾತ್ರ ತಹಸೀಲ್ದಾರ್ ಬದಲಾವಣೆ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ. ನನಗೆ ನ್ಯಾಯ ಕೊಡಿ ನನಗೆ ಸರಿ ಸಮಾನವಾದ ಹುದ್ದೆಯನ್ನ ನೀಡಬೇಕು, ಆಗ ನಾನು ಕೆಲಸ ಮಾಡಲು ಸಿದ್ದವೆಂದು ಎಂದು ತಿಳಿಸಿದರು.

     ಪಾಸ್‍ವರ್ಡ್ ನೀಡಲು ಚೇತನ್ ಕುಮಾರ್ ನಿರಾಕರಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ಹೆಚ್.ಎಸ್.ಪ್ರಕಾಶ್, ಕಂದಾಯ ನಿರೀಕ್ಷಕರಾದ ಆರ್.ಜಿ.ನಾಗಭೂಷಣ್, ಪಿಎಸ್‍ಐ ಹರೀಶ್‍ಕುಮಾರ್ ಚರ್ಚೆ ಮಾಡಿ ಪಾಸ್‍ವರ್ಡ್‍ನ್ನು ಇನ್ನೊಬ್ಬ ಕೆಲಸಗಾರನಿಗೆ ನೀಡುವ ಮೂಲಕ ಸಾರ್ವಜನಿಕ ಕೆಲಸ ಕಾರ್ಯಗಳು ಆರಂಭವಾದವು.

       ಇದೇ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಚನ್ನಬಸವಯ್ಯ ಮಾತನಾಡಿ, ಉತ್ತಮವಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಚೇತನ್‍ಕುಮಾರ್ ಅವರನ್ನು ಏಕಾಏಕಿ ಬದಲಾವಣೆ ಮಾಡಿರುವುದು ಸರಿಯಲ್ಲ. ರೈತರೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಆದ್ದರಿಂದ ಮತ್ತೆ ಅವರನ್ನು ಇಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಗ್ರಾಮದ ದಲಿತ ಮುಖಂಡರುಗಳು ಹಾಗೂ ರೈತ ಸಂಘದ ಮುಖಂಡರುಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link