ಕುಣಿಗಲ್
ಕೊನೆಯ ಶ್ರಾವಣ ಶನಿವಾರದ ಪ್ರಯುಕ್ತ ಪಟ್ಟಣದ ತುಮಕುರು ರಸ್ತೆ, ಮಹಾವೀರನಗರದಲ್ಲಿರುವ ಐತಿಹಾಸಿಕ ಸುಪ್ರಸಿದ್ದ ಶ್ರೀ ಶನೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಪೂಜಾ ಅಭಿಷೇಕ ಹಾಗೂ ಸಾವಿರಾರು ನಾಗರೀಕರಿಗೆ ಅನ್ನಸಂತರ್ಪನೆಯನ್ನು ನಡೆಸುವ ಮೂಲಕ ವಿಶೇಷ ರೀತಯಲ್ಲಿ ಆಚರಿಸಲಾಯಿತು.
ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಶನೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತೆಯೇ ಈ ಬಾರಿಯೂ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಕೊನೆ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದು,
ಶ್ರೀ ಭಗವಂತನ ಸನ್ನಿಧಿಗೆ ಬಂದ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಸನ್ನಿಧಿಯಲ್ಲಿ ಎಳ್ಳು ಭತ್ತಿ ಅಚ್ಚುವುದು, ಈಡುಗಾಯಿ ಹಾಕುವ ಮೂಲಕ ಸ್ವಾಮಿಯ ಹರಕೆ ತೀರಿಸಿದರು. ಇನ್ನಲಿ ಪ್ರಧಾನ ಅರ್ಚಕರಾದ ಕೆ.ಹೆಚ್. ನಾಗರಾಜು ಪ್ರತಿ ಶ್ರಾವಣದಂದು ವಿವಿಧ ರೀತಿಯಲ್ಲಿ ಸ್ವಾಮಿಗೆ ಅಲಂಕಾರವನ್ನು ಮಾಡುವ ಮೂಲಕ ಸಾವಿರಾರು ಸಂಖ್ಯೆಲ್ಲಿ ಭಾಗವಹಿಸುತ್ತಿದ್ದ ಭಕ್ತರಿಗೆ ತೀರ್ಥ ಪ್ರಸಾದದ ವ್ಯವಸ್ಥೆ ಸನ್ನಿಧಿಯಲ್ಲಿ ವ್ಯವಸ್ಥಿತವಾಗಿ ಹಮ್ಮಿಕೊಂಡಿದ್ದರು.