ನವದೆಹಲಿ: 

ಮತ್ತೆ ಹಳೆ ಚಾಳಿ ಮುಂದುವರೆಸಿದ ಪಾಕಿಸ್ಥಾನ ಪ್ರಧಾನಿ ಮುಂದೆ ಶಾಂತಿ ಮಾತನ್ನು ಆಡಿದರೆ ಹಿಂದೆ ಬೆನ್ನಿಗೆ ಚೂರಿ ಹಾಕುವಂತಹ ಕೆಲಸವನ್ನು ಇನ್ನು ಬಿಟ್ಟಂತೆ ಕಾಣುತ್ತಿಲ್ಲ ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಯೋಧನ ಶಿರಚ್ಛೇದಗೊಳಿಸಿ ಪಾತಕತನ ಮೆರೆದಿರುವ ಪಾಕಿಸ್ತಾನದ ವಿರುದ್ಧ ಭಾರತ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಮ್’ಗಢ್ ಬಳಿ ಭಾರತೀಯ ಯೋಧನನ್ನು ಭೀಕರವಾಗಿ ಹತ್ಯೆಗೈದಿದ್ದ ಪಾಕಿಸ್ತಾನಿ ಸೈನಿಕರು, ಅಲ್ಲಿಗೆ ಸುಮ್ಮನಿರದೆ ಯೋಧನ ಕತ್ತನ್ನು ಸೀಳಿ ಕಣ್ಣುಗುಡ್ಡೆಯನ್ನು ಕಿತ್ತುಹಾಕುವ ಮೂಲಕ ರಾಕ್ಷಸತನದ ಪರಮಾವಧಿಯನ್ನು ತೋರಿದೆ .
ಪಾಕಿಸ್ತಾನದ ಈ ಪಾತಕೀ ಕೃತ್ಯಕ್ಕೆ ಭಾರತ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ನಿನ್ನೆಯಷ್ಟೇ ಸೇನಾ ಕಾರ್ಯಾಚರಣೆಗಳ ನಿರ್ದೇಶಕರ ನಡುವೆ ಉನ್ನತ ಮಟ್ಟದ ಮಾತುಕತೆ ನಡೆದಿದ್ದು, ಮಾತುಕತೆ ವೇಳೆ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸುತ್ತಿರುವುದು ಹಾಗೂ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರ ಕುರಿತಂತೆ ಭಾರತ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








