ಕನ್ನಡ ವಿಭಾಗದ ವತಿಯಿಂದ ವಿಚಾರ ಸಂಕಿರಣ

ಬುಕ್ಕಾಪಟ್ಟಣ :

                  ಬುಕ್ಕಾಪಟ್ಟಣ ಗ್ರಾಮದಲ್ಲಿ ದಿನಾಂಕ 27-08-2018 ರಂದು ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಕನ್ನಡ ವೇದಿಕೆ ಮತ್ತು ಅಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಜ್ಞಾನ ಪ್ರಶಸ್ತಿ ಪುರಸ್ಕತ ಡಾ.ಚಂದ್ರಶೇಖರ ಕಂಬಾರರ ನಾಟಕಗಳು ಕುರಿತ ವಿಚಾರ ಸಂಕಿರಣವನ್ನು ಹಮ್ಮಿ ಕೊಳ್ಳಲಾಗಿತ್ತು. ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಎಂ.ಜೆ.ಮೋಹನ್ ಕುಮಾರ್ ರವರು ವಿಶೇಷ ಉಪನ್ಯಾಸವನ್ನು ನಡೆಸಿಕೊಟ್ಟರು. ಭಾರತೀಯ ಸಾಹಿತ್ಯ ಕ್ಷೇತ್ರದ ದೇಸಿಯತೆಯ ಚಿಲುಮೆಯಂತೆ ಕಂಬಾರರ ಸಾಹಿತ್ಯವು ನಾಟಕ, ಕಾವ್ಯ, ಕಾದಂಬರಿ ಮತ್ತು ಸಂಶೋಧನೆಯಲ್ಲಿ ಪ್ರಕಟಗೊಂಡಿರುವುದನ್ನು ಮೋಹನ್ ಕುಮಾರ್ ರವರು ಸೋದಾಹರಣವಾಗಿ ವಿವರಿಸಿದರು. ಉಪನ್ಯಾಸದ ನಂತರ ಸಂವಾದ ಕೂಡ ಇತ್ತು. ವಿದ್ಯಾರ್ಥಿಗಳು ಇದರಲ್ಲಿ ಉತ್ಸಾಹದಿಂದ ಭಾಗವಹಿಸಿದರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರೇವಣ್ಣಸಿದ್ದೇಶ್ವರ ರವರು ಅಧ್ಯಕ್ಷತೆ ವಹಿಸಿದ್ದರು. ಐಕ್ಯೂ.ಎಸಿ ಸಂಚಾಲಕರಾದ ಪ್ರೊ.ಮನೋಹರ್, ನ್ಯಾಕ್ ಸಂಚಾಲಕರಾದ ಮುತ್ತುರಾಜ್, ಉಪಸ್ಥಿತರಿದ್ದರು. ಕನ್ನಡ ವೇದಿಕೆಯ ಸಂಚಾಲಕರಾದ ಗಂಗಾಧರ.ಬಿ.ಎಂ. ರವರು ಕಾರ್ಯಕ್ರಮವನ್ನು ನಿರೂಪಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap