ಕಮಲ ಜ್ಯೋತಿ ಕಾರ್ಯಕ್ರಮ..!!!

ಗುಬ್ಬಿ

       ಕೃಷಿ ಕ್ಷೇತ್ರ ಸೇರಿದಂತೆ ರೈತರು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃಧ್ದಿಗೆ ಕೇಂದ್ರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು ದೇಶದ ಸಮಗ್ರ ಅಭಿವೃಧ್ದಿಗೆ ಸದಾ ಶ್ರಮಿಸುತ್ತಿರುವ ಪ್ರದಾನಿ ಮೋದಿಯವರನ್ನು ಮತ್ತೊಮ್ಮೆ ಪ್ರದಾನ ಮಂತ್ರಿಗಳನ್ನಾಗಿ ಮಾಡಲು ಬಿಜೆಪಿಯನ್ನು ಬೆಂಬಲಿಸುವಂತೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಅ.ನಾ.ಲಿಂಗಪ್ಪ ತಿಳಿಸಿದರು.

       ಪಟ್ಟಣದ 11 ನೇವಾರ್ಡ್ ನಲ್ಲಿ ಬಿಜೆಪಿ ಘಟಕದವತಿಯಿಂದ ಏರ್ಪಡಿಸಿದ್ದ ಕಮಲ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ದೇಶದ ರೈತರ ಅಭ್ಯುದಯಕ್ಕೆ ಪೂರಕವಾದ ಯೋಜನೆಗಳಾದ ಫಸಲ್ ಬೀಮಾ ಯೋಜನೆ, ವಿದ್ಯುನ್ಮಾನ ರಾಷ್ಟ್ರೀಯ ಮಾರುಕಟ್ಟೆ, ಪಾರಂಪರಿಕ ಕೃಷಿ ಉತ್ತೇಜಕನಕ್ಕಾಗಿ ಕೃಷಿ ವಿಕಾಸ ಯೋಜನೆ, ಮಣ್ಣಿನ ಅರೋಗ್ಯ ಕಾರ್ಡ್, ರಾಷ್ಟ್ರೀಯ ಕಾಮದೇನು ಆಯೋಗ, ಕೃಷಿ ಸಿಂಚಾಯಿ ಯೋಜನೆಯಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಕೃಷಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃಧ್ದಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

       ಪಟ್ಟಣ ಪಂಚಾಯ್ತಿ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಈವರೆಗಿನ ಯಾವುದೇ ಸರ್ಕಾರಗಳು ಮಾಡಲಾಗದ ಅಭಿವೃಧ್ದಿ ಕಾರ್ಯಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಪ್ರದಾನಿ ಮೋದಿಯವರನ್ನೆ ಪ್ರಧಾನಿಯನ್ನಾಗಿ ಮಾಡಲು ಪೂರ್ಣ ಪ್ರಮಾಣದ ಸಹಕಾರ ನೀಡುವಂತೆ ತಿಳಿಸಿದರು.

      ಮಹಿಳೆಯರ ಸಮಗ್ರ ಅಭಿವೃಧ್ದಿಗೆ ಪೂರಕವಾದ ಹಲವು ಮಹತ್ವದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಪ್ರದಾನ ಮಂತ್ರಿ ಉಜ್ವಲಾ ಯೋಜನೆ, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃಧ್ದಿ ಯೋಜನೆ, ಎಸ್.ಸಿ.ಮತ್ತು ಎಸ್.ಟಿ ಸಮುದಾಯದ ಮಹಿಳೆಯರಿಗೆ ಭ್ಯಾಂಕ್ ಸಾಲ ಸೌಲಭ್ಯ, ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ ಸೇರಿದಂತೆ ಇಡೀ ದೇಶವನ್ನು ಸಮಗ್ರ ಅಭಿವೃಧ್ದಿಯತ್ತ ಕೊಂಡೊಯ್ಯಲು ಪ್ರಧಾನಿಯವರು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ, ಬಿಜೆಪಿ ಪಕ್ಷದ ವಿಸ್ತಾರಕರಾದ ಮಂಜುನಾಥ್ ಪಟೀಲ್, ಸಂತೋಷ್, ನಿವೃತ್ತ ಯೋಧ ಸಿದ್ದಪ್ಪಗುಜ್ಜರಿ, ಆರ್ಯವೈಶ್ಯ ಮಂಡಲಿ ಅಧ್ಯಕ್ಷ ಪಿ.ಸಿ.ಬಾಲಕೃಷ್ಣಮೂರ್ತಿ, ವೀರಶೈವ ಸಮಾಜದ ಉಪಾಧ್ಯಕ್ಷ ಕಾಂತರಾಜು, ಮುಖಂಡರಾದ ಹೆಚ್.ಎಲ್.ಬಸವರಾಜು, ಶ್ರೀನಿವಾಸಮೂರ್ತಿ, ರಾಜು, ಗೋಪಾಲಸಿಂಗ್, ನಾಗರಾಜು ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap