ಬೆಂಗಳೂರು
ಬೆಂಗಳೂರಿನ ಪಾಲಿಕೆ ಅಧಿಕಾರಿಗಳು ದಿಢೀರ್ ಎಚ್ಚೆತ್ತಹಾಗೆ ಕಾಣುತ್ತಿದೆ ಬೆಂಗಳೂರಿನ ಬೆಳ್ಳಂದೂರು ಬಫರ್ ವಲಯದಲ್ಲಿದ್ದ ಸುಮಾರು 400 ಶೆಡ್‌ಗಳನ್ನು ನೆಲಸಮ ಮಾಡಿದ್ದಾರೆ ಇದರಿಂದ ಸುಮಾರು 1500ಕ್ಕೂ ಹೆಚ್ಚು ಮಂದಿ ಮನೆ ಕಳೆದುಕೊಂಡಿದ್ದಾರೆ. ರಾಜ್ಯದ ಗಮನವನ್ನು ಆಗಾಗ ತನ್ನತ್ತ ಸೆಳೆಯುವ ಬೆಳ್ಳಂದೂರು ಕೆರೆಯ ಸಮೀಪದಲ್ಲಿರುವ ಕರಿಯಮ್ಮನ ಅಗ್ರಹಾರಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು, ನಿವಾಸಿಗಳನ್ನು ಹೊರಗೆ ಆದೇಶಿಸಿ ಶೆಡ್‌ಗಳನ್ನು ಕೆಡವಿದ್ದಾರೆ, ಈ ಜಾಗ ಬಫರ್ ವಲಯದಲ್ಲಿರುವುದರಿಂದ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರವುಗಳಿಸಿರುವುದರ ಬಗ್ಗೆ ಯಾವುದೇ ಸೂಚನೆ ಕೊಡದೆ ಏಕಾಏಕಿ ಬಂದು ಶೆಡ್‌ಗಳನ್ನು ತೆರವು ಮಾಡಿರುವುದು ನಿರಾಶ್ರಿತರ ಆಕ್ರೋಶ ಕಾರಣವಾಗಿದೆ. ಕೆಲ ನಿವಾಸಿಗಳು ಶೆಡ್‌ಗಳನ್ನು ಕೆಡವಲು ಬಿಡುವುದಿಲ್ಲ ಎಂದು ಧರಣಿ ಕೂತರೂ ಪಟ್ಟು ಬಿಡದೆ ಅಧಿಖಾರಿಗಳು ಶೆಡ್‌ಗಳನ್ನು ಕೆಡವಿದರು ಎಂದು ಸಂತ್ರಸ್ಥರು ಅಳಲು ತೋಡಿಕೊಂಡರು , ಜೆಸಿಬಿಯಿಂದ ಶೆಡ್‌ಗಳ ತೆರವು ಕಾರ್ಯಾರಚಣೆ ನಡೆಯುವಾಗ ನಿವಾಸಿಗಳು ಪ್ರತಿಭಟನೆ ನಡೆಸಿದರು.
![](https://prajapragathi.com/wp-content/uploads/2018/08/file71isbgfh8ldlk2fs67v1534707.jpg)