ಕರೆಂಟ್ ಶಾಕ್ ಗೆ ಯುವಕ ಬಲಿ…!!!

ಕೊರಟಗೆರೆ

       ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತನ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್‍ತಂತಿಯ ಕೆಳಗೆ ಅಡಕೆ ಕಾಯಿ ಕೀಳುವ ವೇಳೆ ದೋಟಿಯ ಮೂಲಕ ವಿದ್ಯುತ್ ಸ್ಪರ್ಶವಾಗಿ ಯುವಕನೋರ್ವ ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

        ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ ಗ್ರಾಮದ ವೀರಣ್ಣನ ಮಗನಾದ ಸತೀಶ್(19) ಮೃತ ಪಟ್ಟ ದುರ್ದೈವಿ. ಬೊಮ್ಮಲದೇವಿಪುರ ಗ್ರಾಪಂ ವ್ಯಾಪ್ತಿಯ ಚಟ್ಟೇನಹಳ್ಳಿ ಗ್ರಾಮದ ರೈತ ಎಲೆ ದೊಡ್ಡಯ್ಯ ಎಂಬುವರ ಅಡಕೆ ಮತ್ತು ಬಾಳೆ ತೋಟದಲ್ಲಿ ಘಟನೆ ನಡೆದಿದೆ.

        ಕೋಡ್ಲಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವರ ಮಗನಾದ ರಘು ಎಂಬುವರ ಜೊತೆ ಮಂಗಳವಾರ ಮುಂಜಾನೆಅಡಕೆ ಫಸಲು ಕೀಳಲು ಹೋದ ಮೃತ ಸತೀಶ್ ಅಡಕೆ ಕಾಯಿ ಕೀಳುವ ವೇಳೆ ವಿದ್ಯುತ್ ಗಮನಿಸದೆ ಬಾಳೆಗಿಡದ ಮರೆಯಿಂದ ಅಡಕೆ ಗೊಂಚಲು ಕೀಳಲು ಪ್ರಯತ್ನಿಸಿ ವಿದ್ಯುತ್‍ತಂತಿಯ ಸ್ಪರ್ಶವಾಗಿ ಕಾಲು ಮತ್ತು ಹೊಟ್ಟೆಯ ಭಾಗಕ್ಕೆ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

         ಕೊರಟಗೆರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದ ನೂರಾರು ಜನ ರೈತನ ಜಮೀನಿನಲ್ಲಿ ಹಾದು ಹೋಗಿರುವ ಹಳೆಯ ವಿದ್ಯುತ್ ತಂತಿಗಳು ನೆಲಕ್ಕೆ ತಾಗುತ್ತಿವೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಅನಾಹುತ ಆಗುತ್ತಿವೆ. ತಕ್ಷಣ ಮೇಲಧಿಕಾರಿಗಳು ಹಳೆಯ ವಿದ್ಯುತ್ ತಂತಿಯ ಮಾರ್ಗವನ್ನು ಬದಲಾವಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.’

         ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸೈ ಮಂಜುನಾಥ, ಬೆಸ್ಕಾಂ ಇಲಾಖೆಯ ಎಇಇ ಮಲ್ಲಣ್ಣ, ಪ್ರಸನ್ನಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link