ತಿಪಟೂರು
ಕೊರೋನಾ ವೈರಸ್ ತನ್ನ ವ್ಯಾಪ್ತಿಯನ್ನು ಹರಡುವುದನ್ನು ತಪ್ಪಿಸಲು ಮಾರ್ಚ್ 24 ರಿಂದ ಏಪ್ರಿಲ್ 14ರ ವರೆಗೆ ಸಂಪೂರ್ಣ ಭಾರತ ಲಾಕ್‍ಡೌನ್ ಘೋಷಿಸಿದ್ದು ಸಾರ್ವಜನಿಕರಿಗೆ ಒಂದು ಕ್ಷಣ ದಿಗಿಲು ಮೂಡಿಸಿತ್ತು. ಇದರಿಂದ ಜನರು ಭಯಬೀತರಾಗಿ ತಮಗೆ ದಿನ ಬಳಕೆ ವಸ್ತುಗಳು ದೊರೆಯುತ್ತವೋ ಇಲ್ಲವೋ ಎಂಬಂತೆ ಜನರು ಎಂದಿನಕ್ಕಿಂತ ಹೆಚ್ಚಿಗೆಯೇ ಬೀದಿಗಿಳಿದು ತಮಗೆ ಬೇಕಾದ ದಿನಸಿ ಮತ್ತು ಅಗತ್ಯವಸ್ತುಗಳನ್ನು ಖರೀದಿಸುತ್ತಿದ್ದರು.
ಹೊಸವರ್ಷದ ತೊಡಕಿಗೆ ಲಾಕ್‍ಡೌನ್ ಭಯವಿಲ್ಲ:
ಯುಗಾದಿ ಎಷ್ಟು ವಿಶೇಷವೊ ಅಷ್ಟೆ ಮಹತ್ವವನ್ನು ಹೊಂದಿರುವ ವರ್ಷದ ತೊಡಕಿಗೆ ಮಾಂಸಾಹಾರಿಗಳು ಎಲ್ಲಿ ಕುತ್ತು ಬರುತ್ತದೋ ಎಂಭ ಭಯದಲ್ಲೇ ಇದ್ದರು. ನಂತರ ಸರ್ಕಾರ ಮಾಂಸ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಗುರುವಾರ ಬೆಳಗ್ಗೆಯೆ ನಗರಸಭೆ ಅಧಿಕಾರಿಗಳು ಹಾಗೂ ಆರಕ್ಷಕರ ಅಣತಿಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮಗೆ ಬೇಕಾದ ಮಾಂಸವನ್ನು ಕೊಂಡುಕೊಂಡರು. ಆದರೆ ಕೋಳಿಜ್ವರದ ಶಂಕೆ ಇದ್ದರಿಂದ ಕೋಳಿ ಅಂಗಡಿಗಳು ಮುಚ್ಚಿದ್ದವು.
ನಿರ್ಗತಿಕರಿಗೆ ವರ, ಪುಂಡರಿಗೆ ಶಾಪವಾದ ಆರಕ್ಷಕರು :
ಒಂದು ಕಡೆ ಲಾಕ್‍ಡೌನ್ ಇದ್ದು, ಇದರಿಂದ ಎಷ್ಟೊ ಜನ ನಿರ್ಗರಿಕರಿಗೆ ಆರಕ್ಷಕರು ಅನ್ನ, ನೀರು ಕೊಡುವ ಮೂಲಕ ಮಾನವೀಯತೆಯನ್ನು ಮೆರೆದರು. ಇದರ ಮಧ್ಯೆ ಅನಾವಶ್ಯಕವಾಗಿ ರಸ್ತೆ ಸುತ್ತುತ್ತಿದ್ದ ಪುಂಡರಿಗೆ ಲಾಠಿ ರುಚಿಯನ್ನು ತೋರಿಸುವ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಸೀದಿಗಳಲ್ಲಿ ಕರೆ ನೀಡಿದರೂ ಬಗ್ಗದ ಯುವಕರು :
ನಗರದ ಗಾಂಧಿನಗರದಲ್ಲಿರುವ ಹಲವಾರು ಮಸೀದಿಗಳಲ್ಲಿ ಕೊರೋನಾ ವೈರಸ್ ಬಗ್ಗೆ ತಿಳಿವಳಿಕೆ ನೀಡಿ ಎಚ್ಚರಿಸುತ್ತಿದ್ದರು. ಆದರೂ ಕೂಡ ಯುವಕರು ಗುಂಪುಗುಂಪಾಗಿ ರಸ್ತೆಯಲ್ಲಿ ಓಡಾಡುವುದನ್ನು ಕಂಡ ಆರಕ್ಷಕರು ಮಸೀದಿಯ ಜಮಾತ್ ನಿಮ್ಮ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಳ್ಳಿ. ಬೀದಿ ಸುತ್ತಲು ಬಿಡಬೇಡಿ ಎಂದೂ, ಇದಕ್ಕೂ ಜಮಾತ್‍ಗೂ ಸಂಬಂಧವಿಲ್ಲವೆಂದು ತಿಳಿಸಿದರೂ ಸಹ ಒಂದೇ ದ್ವಿಚಕ್ರವಾಹನದಲ್ಲಿ 3-4 ಜನರು ಸುತ್ತುವುದು ಸಾಮಾನ್ಯವಾಗಿತ್ತು.
ಪೆಟ್ರೋಲ್, ಸಿಗರೇಟ್, ಗುಟ್ಕಾಗೆ ಕಡಿವಾಣ ಹಾಕಿದರೆ ಪುಂಡರ ಹಾವಳಿ ತಪ್ಪುವುದೇ? :
ಇನ್ನೂ ಲಾಕ್‍ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಬೇಕೆಂದರೆ ಪೆಟ್ರೋಲ್, ಸಿಗರೇಟ್, ಗುಟ್ಕಾಗೆ ಕಡಿವಾಣ ಹಾಕಿದರೆ, ಎಲ್ಲಿ ಬೇಕೆಂದರಲ್ಲಿ ಸುತ್ತುವ ಪುಂಡರ ಹಾವಳಿ ತಪ್ಪುವುದು ಅಥವಾ ದಿನಸಿ ರೀತಿಯಲ್ಲಿ ಅವರಿಗೆ ಬೇಕಾದ ವಸ್ತುಗಳನ್ನು ಅವರ ಮನೆಯಲ್ಲಿಯೇ ಕೊಟ್ಟರೆ ಇನ್ನೂ ಒಳ್ಳೆಯದು ಎಂದು ಕೆಲವರ ಅಭಿಪ್ರಾಯವಾಗಿದೆ.
ಪೋಷಕರು ಜವಾಬ್ದಾರಿ ಅರಿಯಬೇಕು :
ಚಿಕ್ಕ ಮಕ್ಕಳು ಇಲ್ಲದ ಕಾರಣ ಹೇಳಿ ಹೊರಗೆ ಹೋಗುವುದು ಮಾಮೂಲಿ. ಆದರೆ ಕೆಲವು ಸೋಂಬೇರಿ ಪೋಷಕರೆ ಮಕ್ಕಳಿಗೆ ದ್ವಿಚಕ್ರವಾಹನ ಅಥವಾ ಸೈಕಲ್‍ಅನ್ನು ಕೊಟ್ಟು ತಮಗೆ ಬೇಕಾದ ವಸ್ತುಗಳನ್ನು ತರಲು ಕಳುಹಿಸುತ್ತಿದ್ದಾರೆ. ಆದರೆ ಇಲ್ಲಿ ಆಚೆÉ ಬರುವ ಮಕ್ಕಳು ತನ್ನ ಸ್ನೇಹಿತರನ್ನು ನೋಡಲು, ಇಲ್ಲ ನಗರ ಹೇಗಿದೆ ಎಂದು ನೋಡಲು ಹೋಗಿ ಇಲ್ಲದ ಅಪಾಯವನ್ನು ಮೇಲೆಳೆದು ಕೊಳ್ಳ್ಳುತ್ತಿದ್ದಾರೆ.
ರೇಷ್ಮೆ, ಹಣ್ಣು, ಹೂ ಮತ್ತು ತರಕಾರಿ ಮಾರುವವರಿಗೆ ಶಾಸಕರ ಅಭಯ :
ಇಡೀ ಭಾರತವೇ ಲಾಕ್‍ಡೌನ್ ಭೀತಿಯಲ್ಲಿ ನಷ್ಟವನ್ನು ಅನುಭವಿಸುತ್ತಿದೆ. ರೇಷ್ಮೆ, ಹಣ್ಣು, ಹೂ ಮತ್ತು ತರಕಾರಿ ವ್ಯಾಪಾರಿಗಳಿಗೆ ನಷ್ಟ ಉಂಟಾಗುವುದನ್ನು ತಪ್ಪಿಸಲು ಹಾಪ್‍ಕಾಮ್ಸ್ ಮತ್ತು ರೇಷ್ಮೆ ಮಂಡಳಿಯ ಜೊತೆ ಚರ್ಚಿಸಿ ಸೂಕ್ತ ಬೆಲೆಗೆ ವಸ್ತುಗಳನ್ನು ಮಾರಿಸಿಕೊಡುವುದಾಗಿ ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ