ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

ನವದೆಹಲಿ

   ಕರ್ನಾಟಕದ ಕಲಬುರಗಿಯ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ  ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಮಹದೇವಪುರ ಕ್ಷೇತ್ರದಲ್ಲಿ ಕೂಡ ಮತಗಳ್ಳತನವಾಗಿದ್ದ ಕುರಿತು ಮಾಹಿತಿ ನೀಡಿದ್ದರು.

   ಕಾಂಗ್ರೆಸ್​ ಮತದಾರರನ್ನೇ ಟಾರ್ಗೆಟ್ ಮಾಡಲಾಗಿದೆ. ಆದಿವಾಸಿಗಳು, ಒಬಿಸಿ ಒಟ್ಟಿನಲ್ಲಿ ವಿರೋಧಪಕ್ಷಕ್ಕೆ ಮತಹಾಕುವವರ ಹೆಸರುಗಳನ್ನೇ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.ಹಾಗಾದರೆ ಈ ಮತಗಳ್ಳತನ ಸಿಕ್ಕಿಬಿದ್ದಿದ್ದು ಹೇಗೆ ಎಂದರೆ, ಆಳಂದದಲ್ಲಿ ಬಿಎಲ್​ಒ ಅವರ ಸಂಬಂಧಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಆಗ ತನಿಖೆ ಆರಂಭಿಸಿದಾಗ ಅವರ ಸಂಬಂಧಿಯ ಪಕ್ಕದ ಮನೆಯವರು ಅವರ ಹೆಸರನ್ನು ತೆಗೆಸಿದ್ದಾರೆ ಎಂಬುದು ತಿಳಿದುಬಂದಿತ್ತು, ಬಳಿಕ ಅಲ್ಲಿ ಹೋಗಿ ವಿಚಾರಿಸಿದಾಗ ನಾವು ಅರ್ಜಿ ಕೊಟ್ಟಿಲ್ಲ, ಯಾರ ಹೆಸರನ್ನೂ ತೆಗೆಸಿಲ್ಲ ಎಂದು ಹೇಳಿದಾಗ ಕೆಲವು ವಿಚಾರಗಳು ಬಹಿರಂಗಗೊಂಡಿವೆ.

ಇವರ ಹೆಸರುಗಳನ್ನು ತೆಗೆಸಲು ಬಳಸಿದ ಮೊಬೈಲ್ ಸಂಖ್ಯೆ ಯಾವುದು, ಹಾಗಾದರೆ ಒಟಿಪಿ ಎಲ್ಲಿಗೆ ಬಂದಿದೆ ಇದ್ಯಾವ ಮಾಹಿತಿಯೂ ಸಿಗುತ್ತಿಲ್ಲ. ಪ್ರತಿ ಚುನಾವಣೆ ಸಮಯದಲ್ಲೂ ಮತಗಳ್ಳತನದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಲೇ ಇದ್ದವು.

   ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನೇರ ಆರೋಪ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ವಿರುದ್ಧ ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ. 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಬರೆದು ಮಾಹಿತಿ ಕೇಳಲಾಗಿದೆ, ಆದರೆ ಅವರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ, ಸಿಐಡಿ ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಫೆಬ್ರವರಿ 23ರಂದು ಎಫ್​ಐಆರ್​ ದಾಖಲಿಸಲಾಗಿತ್ತು. ಹಾಗಾದರೆ ಇದೆಲ್ಲದರ ಹಿಂದೆ ಜ್ಞಾನೇಶ್ ಕುಮಾರ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

Recent Articles

spot_img

Related Stories

Share via
Copy link