ಕಲಬುರಗಿಯಲ್ಲಿ ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿ : ಮುಗಿಲುಮುಟ್ಟಿದ ಜನರ ಹರ್ಷೋದ್ಘಾರ

ಕಲಬುರಗಿ:

      ಕಲಬುರಗಿಯ ನೂತನ ವಿಮಾನ ನಿಲ್ದಾಣದಲ್ಲಿ ಇಂದು(ಭಾನುವಾರ) ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ನೆರವೇರಿತು. ಮೊಟ್ಟ ಮೊದಲ ಬಾರಿಗೆ ನಗರದ ನೆಲ ಸ್ಪರ್ಶಿಸಿದ ವಿಮಾನಗಳನ್ನು ಕಂಡು ಜನರ ಸಂತಸ ಹೆಚ್ಚಾಗಿತ್ತು.

      ನಗರದ ಹೊರವಲಯ ಶ್ರೀನಿವಾಸ್ ಸರಡಗಿ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ, ಹೈದರಾಬಾದ್ ನ ಏಷ್ಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸಂಸ್ಥೆಯ ಡೈಮಂಡ್ ಡಿಎ 40, ಡೈಮಂಡ್ ಡಿಎ 42 ಎಂಬ ಎರಡು ವಿಮಾನಗಳು ಇಂದು ಪ್ರಾಯೋಗಿಕವಾಗಿ ವಿಮಾನಗಳ ಯಶಸ್ವಿ ಪ್ರಾಯೋಗಿಕ ಹಾರಾಟ ನಡೆಸಿವೆ. ವಿಮಾನ ಹಾರಾಟ ನೋಡಲು ನಗರದ ಜನರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. 

      ಸಿಂಗಲ್‌ ಎಂಜಿನ್‌ನ ‘ಡೈಮಂಡ್‌–40’ ಕೂಡ 11.18ಕ್ಕೆ ನೆಲಕ್ಕಿಳಿಯಿತು. ಪೈಲೆಟ್‌ ಅಭಿಜಿತ್‌ ಹಾಗೂ ಸಹ ಪೈಲೆಟ್‌ ಅರುಣ್‌ ಅದನ್ನು ಚಾಲನೆ ಮಾಡಿಕೊಂಡು ಬಂದರು. ಸುಮಾರು 500 ಅಡಿಗಿಂತ ಕೆಳಕ್ಕೆ ಹಾರಿಸುವ ಮೂಲಕ ಅವರು ಮನರಂಜನೆ ನೀಡಿದರು.

      ಸಂಸದ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಜಿಲ್ಲೆಯ  ಎಲ್ಲಾ ಶಾಸಕರು, ಅಧಿಕಾರಿಗಳು, ಅತಿ ಗಣ್ಯರು ಕೂಡ ಈ ಸಂದರ್ಭಕ್ಕೆ ಸಾಕ್ಷಿಯಾದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap