ಕಲ್ಲು ಗಣಿಕಾರಿಕೆಯಿಂದಲೇ ನಮ್ಮ ಬದುಕು: ಕಾರ್ಮಿಕರು

ಉಚ್ಚಂಗಿದುರ್ಗ:

       ಇಲ್ಲಿ ನಡೆಯುತ್ತಿರುವ ಕಲ್ಲು ಕ್ರಷರ್ ಹಾಗೂ ಗಣಿಗಾರಿಕೆಗಳು ನಡೆಸಲು ಅನುಮತಿ ಕುರಿತು ಪರ ಹಾಗೂ ವಿರೋಧಗಳ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹರಪನಹಳ್ಳಿ ತಾಲ್ಲೂಕು ಉಪ ವಿಭಾಗಧಿಕಾರಿ ಜಿ.ನಜ್ಮಾ ತಿಳಿಸಿದರು.

       ಇಲ್ಲಿನ ಗೌಳೇರಹಟ್ಟಿ ಗ್ರಾಮದಲ್ಲಿ ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಅಕ್ರಮವಾಗಿ ನಡೆಸುತ್ತಿದ್ದ ಮಾಲೀಕರು ಈಗಾಗಲೇ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಪಡೆದು ಗಣಿಗಾರಿಕೆಯನ್ನು ಸಕ್ರಮಗೊಳಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಗಣಿಕಾರಿಕೆ ದುಶ್ಪರಿಣಾಮ ಕುರಿತ ವರದಿ ಹಿನ್ನಲೆಯಲ್ಲಿ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

       ಬೇವಿನಹಳ್ಳಿ, ಉಚ್ಚಂಗಿದುರ್ಗ, ಬೇವಿನಹಳ್ಳಿ, ಫಣಿಯಾಪುರ ಗ್ರಾಮಗಳ ಸುತ್ತ ಮುತ್ತಲೂ ಅಕ್ರಮ ಕ್ರಷರ್ ಹಾಗೂ ಕಲ್ಲು ಗಣಿಗಾರಿಕೆಗಳು ನಡೆಯುತ್ತಿರು ದೂರಿನ ಮೇರೆಗೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿತ್ತು.

        ಈ ಸಂಧರ್ಬದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ತಹಶೀಲ್ದಾರ ಶಿವಶಂಕರನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆಂಚನಗೌಡ, ಪಿಡಿಒ ರುದ್ರಪ್ಪ, ಗ್ರಾಮ ಪಂಚಾಯ್ತೆ ಅಧ್ಯಕ್ಷೆ ಸುಧಾ, ಸದಸ್ಯರಾದ ರೇಣುಕಮ್ಮ, ಹನುಮಂತನಾಯ್ಕ, ಮುಖಂಡರಾದ ನಾಗರಾಜಗೌಡ, ಆರೀಫ್, ಬಸವರಾಜ, ಫಣಿಯಾಪುರ ಲಿಂಗರಾಜ, ಮಾದಿಹಳ್ಳಿ ಅರುಣ್ ಕಬ್ಬಿಗೆರೆ, ನಾಗರಾಜ. ಶಶಿನಾಯ್ಕ ಹಾಗೂ ಗ್ರಾಮಸ್ಥರು ಇದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap