ಶಿರಾ:
ಶಿರಾ ತಾ. ಕಳ್ಳಂಬೆಳ್ಳ ಹೋಬಳಿಯ ಅಜ್ಜೇನಹಳ್ಳಿ ಕೆರೆಯು ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಕೆರೆಗೆ ಬಾಗೀನ ಅರ್ಪಿಸಿದ ನಂತರ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಮಾರಂಭ ಕುರಿತು ಮಾತನಾಡಿದರು.
ಅಜ್ಜೇನಹಳ್ಳಿ ಕೆರೆಗೆ ಬಾಗೀನ ಅರ್ಪಿಸಿ ಟಿ.ಬಿ.ಜಯಚಂದ್ರ ಹೇಳಿಕೆ
ನನ್ನ ಇಡೀ ಜೀವಮಾನದಲ್ಲೂ ಕಳ್ಳಂಬೆಳ್ಳ ಹೋಬಳಿಯ ಜನತೆಯ ಪ್ರೀತಿ, ವಿಶ್ವಾಸಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ನನಗೆ ರಾಜಕೀಯ ಶಕ್ತಿ ನೀಡಿದ ಈ ಭಾಗದ ಜನತೆಯ ಋಣವನ್ನು ಹೇಮಾವತಿಯ ನೀರು ಹರಿಸುವ ಮೂಲಕ ತೀರಿಸಿದ್ದೇನೆಂಬ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಅಜ್ಜೇನಹಳ್ಳಿ ಕೆರೆಯು ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಕೆರೆಗೆ ಬಾಗೀನ ಅರ್ಪಿಸಿ ಅವರು ಮಾತನಾಡಿದರು.
ಕಳ್ಳಂಬೆಳ್ಳ ಕ್ಷೇತ್ರವಿದ್ದಾಗ 44 ವರ್ಷಗಳ ರಾಜಕೀಯ ಅನುಭವಗಳನ್ನು ಇಲ್ಲಿನ ಜನ ನನಗೆ ಕಲಿಸಿಕೊಟ್ಟಿದ್ದಾರೆ. ನೀರಾವರಿ ಯೋಜನೆಗಳನ್ನು ಕಲ್ಪಸಿಕೊಡುವಂತೆ ಪ್ರತೀ ಚುನಾವಣೆಯಲ್ಲೂ ಕಾಡಿ ಬೇಡುತ್ತಿದ್ದ ಇಲ್ಲಿನ ಜನತೆಗೆ ಈಗ ತೃಪ್ತಿ ಕಂಡಿದೆ. 7 ಕ್ಕೂ ಹೆಚ್ಚು ಬ್ಯಾರೇಜ್‍ಗಳು ಇಂದು ತುಂಬಿ ಹರಿದು ಹತ್ತಾರು ಕೆರೆಗಳು ತುಂಬಿ ಹರಿಯುತ್ತಿವೆ ಎಂದರು.
ಹೇಮಾವತಿಯ ನೀರಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಿದಾಗ ಕೆಲ ವಿರೋಧ ಪಕ್ಷಗಳ ದುರೀಣರು ನನ್ನನ್ನು ಲೇವಡಿ ಮಾಡಿದ್ದರು. ಈಗ ಅದೇ ಚೆಕ್ ಡ್ಯಾಂಗಳು ತುಂಬಿ ಅಂತರ್ಜಲವೂ ವೃದ್ಧಿಸಿದೆ. ಈಗ ಅಂತಹ ವಿರೋಧ ಪಕ್ಷಗಳ ಮುಖಂಡರಿಗೆ ಬಾಯಿ ಕಟ್ಟಿದೆ ಎಂದು ಜಯಚಂದ್ರ ತಿಳಿಸಿದರು.
ಭೂಸ್ವಾಧೀನದ ವೇಳೆ ಕಣ್ಣಲ್ಲಿ ನೀರು ಬಂತು
ಹೇಮಾವತಿಯ ನೀರನ್ನು ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಮೊದಲು ಹರಿಸಿ ನಂತರ ಮದಲೂರು ಕೆರೆಗೂ ಹರಿಸಲೇ ಬೇಕೆಂಬ ಚಿಂತನೆಯಿಂದ ಹಲವು ವಿರೋಧಿಗಳು ನೀಡಿದ ಮೌನದೇಟಿಗೂ ನಾನು ಸಹಿಸಿಕೊಂಡಿದ್ದೆನು. ಮದಲೂರು ಕೆರೆಯ ಚಾನಲ್ ನಿರ್ಮಾಣದ ವೇಳೆ ಭೂಸ್ವಾಧೀನ ಮಾಡಿಕೊಳ್ಳುವಾಗ ಈ ಭಾಗದ ಎಸ್.ಆರ್.ಗೌಡ ಸೇರಿದಂತೆ ಹಲವು ಜನ ಭೂಸ್ವಾಧೀನಕ್ಕೆ ಹೆಚ್ಚು ಹಣ ನೀಡುವಂತೆ ರೈತರನ್ನು ಹುರಿದುಂಬಿಸಿದರು. ಮತ್ತಲವು ಜನ ನನ್ನ ಮೇಲೆ ರೈತರನ್ನು ಎತ್ತಿಕಟ್ಟಿದರು ಆದರೂ ರೈತರ ಹಿತಕ್ಕೊಸ್ಕರ ಎಲ್ಲವನ್ನೂ ಸಹಿಸಿಕೊಂಡು 193 ಹೆಕ್ಟೇರ್‍ಗೆ 8 ಕೋಟಿ ರೂಗಳ ಪರಿಹಾರ ನೀಡಿಸಿದ್ದೆನು ಎಂದು ಜಯಚಂದ್ರ ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಪರ್ವತಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಪುಟ್ಟರಾಜು, ಬೊಮ್ಮಣ್ಣ, ಶಾಂತರಾಜು, ಹೆಂಜಾರಪ್ಪ, ಬಾಲೇನಹಳ್ಳಿ ಪ್ರಕಾಶ್, ಯಲದಬಾಗಿ ನವೀನ್, ಕಾಳಯ್ಯ, ಗೋವಿಂದರಾಜು, ಪುಟ್ಟರಾಜು, ರಾಧಾ ಮಂಜುನಾಥ್, ರಘುನಾಥ್, ಹನುಮಂತರಾಜು ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಹೇಮಾವತಿಯ ನೀರನ್ನು ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಮೊದಲು ಹರಿಸಿ ನಂತರ ಮದಲೂರು ಕೆರೆಗೂ ಹರಿಸಲೇ ಬೇಕೆಂಬ ಚಿಂತನೆಯಿಂದ ಹಲವು ವಿರೋಧಿಗಳು ನೀಡಿದ ಮೌನದೇಟಿಗೂ ನಾನು ಸಹಿಸಿಕೊಂಡಿದ್ದೆನು. ಮದಲೂರು ಕೆರೆಯ ಚಾನಲ್ ನಿರ್ಮಾಣದ ವೇಳೆ ಭೂಸ್ವಾಧೀನ ಮಾಡಿಕೊಳ್ಳುವಾಗ ಈ ಭಾಗದ ಎಸ್.ಆರ್.ಗೌಡ ಸೇರಿದಂತೆ ಹಲವು ಜನ ಭೂಸ್ವಾಧೀನಕ್ಕೆ ಹೆಚ್ಚು ಹಣ ನೀಡುವಂತೆ ರೈತರನ್ನು ಹುರಿದುಂಬಿಸಿದರು. ಮತ್ತಲವು ಜನ ನನ್ನ ಮೇಲೆ ರೈತರನ್ನು ಎತ್ತಿಕಟ್ಟಿದರು ಆದರೂ ರೈತರ ಹಿತಕ್ಕೊಸ್ಕರ ಎಲ್ಲವನ್ನೂ ಸಹಿಸಿಕೊಂಡು 193 ಹೆಕ್ಟೇರ್‍ಗೆ 8 ಕೋಟಿ ರೂಗಳ ಪರಿಹಾರ ನೀಡಿಸಿದ್ದೆನು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
