ಮಧುಗಿರಿ:
ಕಸಾಯಿಖಾನೆಗೆ ಕರುಗಳನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಕಾರ್ಯಾಚರಣೆ ನಡೆಸಿ ತಡೆದು ಕರುಗಳಿದ್ದ ವಾಹನವನ್ನು ಪೋಲೀಸರ ವಶಕ್ಕೆ ನೀಡುವಲ್ಲಿ ತಾಲ್ಲೂಕಿನ ಪತ್ರಕರ್ತರು ಯಶಸ್ವಿಯಾಗಿದ್ದಾರೆ.
ಪ್ರತಿ ಶುಕ್ರವಾರವೂ ಸಹಾ ಇದೇ ರೀತಿ 20 ರಿಂದ 25 ವಾಹನಗಳು ಇದೇ ರೀತಿ ಕರುಗಳನ್ನು ಹೊತ್ತು ಸಾಗುತ್ತವೆ ಎಂದು ಸಾರ್ವಜನಿಕರು ಶಂಕ ವ್ಯಕ್ತಪಡಿಸಿದ್ದಾರೆ.
ಕರುಗಳನ್ನು ಆಂಧ್ರ ಮೂಲದ ಗುಡಿಬಂಡೆಯಿಂದ ಆಲಿಪುರಕ್ಕೆ ಕರುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕರುಗಳಿದ್ದ ವಾಹನವನ್ನು ಮಧುಗಿರಿ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.