ಕಸ್ತೂರಿ ರಂಗನ್ ವರದಿ :ಖಾಸಗಿ ಶಾಲೆ ಹೆಸರು ಬದಲಾವಣೆ ಸಂಭವ

ಬೆಂಗಳೂರು

    ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಜಾರಿಗೆ ಬಂದರೆಖಾಸಗಿ ಶಾಲೆಯ ಆಡಳಿತ ಮಂಡಳಿಗಳು ತಮ್ಮ ಶಾಲೆಯ ಹೆಸರಿನ ಮುಂದೆ ಪಬ್ಲಿಕ್ ಎಂದು ಬಳಸುವುದು ತಪ್ಪಾಗಲಿದೆ ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಜಾರಿಗೆ ಬಂದ ಕೂಡಲೇ ಖಾಸಗಿ ಶಾಲೆಗಳು ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಶಾಲಾ ಹೆಸರುಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ.

     ದೇಶದಾದ್ಯಂತ ಅನೇಕ ಖಾಸಗಿ ಶಾಲೆಗಳು ತಮ್ಮ ಶಾಲೆಯ ಹೆಸರಿನ ಮುಂದೆ ಪಬ್ಲಿಕ್ ಸ್ಕೂಲ್ ಎಂದು ಬಳಸುತ್ತಿವೆ ವರದಿ ಜಾರಿಯಿಂದ ಇನ್ನು ಮುಂದೆ ದೆಹಲಿ ಪಬ್ಲಿಕ್ ಸ್ಕೂಲ್, ದಿ ಫ್ರಾಂಕ್ ಆಂಟನಿ ಪಬ್ಲಿಕ್ ಸ್ಕೂಲ್, ಬಾಲಭಾರತ ಪಬ್ಲಿಕ್ ಸ್ಕೂಲ್, ಇನ್ನಿತರ ಶಾಲೆಗಳು ಪಬ್ಲಿಕ್ ಎನ್ನುವುದನ್ನು ಕೈಬಿಡಬೇಕು

     ಸರ್ಕಾರಿ ಶಾಲೆ, ಶಿಕ್ಷಣ ಸಂಸ್ಥೆಗಳು ಮಾತ್ರ ಪಬ್ಲಿಕ್ ಪದವನ್ನು ಬಳಸಬಹುದೇ ವಿನಹ, ಖಾಸಗಿ ವ್ಯಕ್ತಿ, ಸಂಸ್ಥೆಗಳು ಬಳಸುವ ಶಾಲೆಗಳು ಪಬ್ಲಿಕ್ ಪದವನ್ನು ಬಳಸಬಾರದು. ಸಾರ್ವಜನಿಕರ ಹಣದಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ಮಾತ್ರ ಆ ಪದವನ್ನು ಬಳಸಬಹುದು. ಸರ್ಕಾರಿ ಶಾಲೆಗಳು ಸಾರ್ವಜನಿಕರ ಹಣದಿಂದ ನಡೆಯುತ್ತವೆ ಎಂದು ಕರಡುನಲ್ಲಿ ಉಲ್ಲೇಖಿಸಲಾಗಿದೆ.ಕಸ್ತೂರಿ ರಂಗನ್ ನೇತೃತ್ವದ ತಜ್ಞರ ಸಮಿತಿ ಕಳೆದ ವಾರ ರಾಷ್ಟ್ರೀಯ ಶಿಕ್ಷಣ ಕರಡು ನೀತಿಯನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕರಡು ವರದಿಯನ್ನು ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ