ಚಿಕ್ಕನಾಯಕನಹಳ್ಳಿ
ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಲು ಪಣ ತೊಟ್ಟಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸ್ವತಃ ಅವರೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತದಾರರಲ್ಲಿ ಮತಯಾಚಿಸಿದರು.
ಪಟ್ಟಣದ ಜೋಗಿಹಳ್ಳಿ ಆದಿಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದ 23ವಾರ್ಡ್‍ಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆಗೆ ಮುಂದಾದರು.
ಈ ವೇಳೆ ಚುನಾವಣಾ ಅಭ್ಯರ್ಥಿಗಳು ತಮ್ಮ ವಾರ್ಡ್‍ಗಳ ಸಮಸ್ಯೆಗಳು, ಅಲ್ಲಿನ ರಾಜಕೀಯ ವಾತಾವರಣದ ಬಗ್ಗೆ ಮಾಜಿ ಸಚಿವರಿಗೆ ತಿಳಿಸಿದರು ಹಾಗೂ ತಮ್ಮ ವಾರ್ಡ್‍ಗೆ ಚುನಾವಣಾ ಪ್ರಚಾರಕ್ಕೆ ಸಚಿವರನ್ನು ಆಹ್ವಾನಿಸಿದರು. ಜೊತಗೆ ಕೆಲ ವಾರ್ಡ್‍ಗಳಲ್ಲಿ ಇರುವ ಜನಾಂಗದ ಮತದಾರರನ್ನು ಸೆಳೆಯಲು ಆ ವಾರ್ಡ್‍ಗೆ ಆಯಾ ಜನಾಂಗದ ರಾಜ್ಯ ನಾಯಕರನ್ನು ಕರೆಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಕೆ.ಜಿ.ಕೃಷ್ಣೆಗೌಡ ಹಾಗೂ 23ವಾರ್ಡ್‍ನ ಅಭ್ಯರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
