ಬೆಂಗಳೂರು :
ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಗಮನ ಹರಿಸುವುದು ಬಿಟ್ಟು ಕಾಂಗ್ರೆಸ್ ಮಹಾ ಘಟಿಬಂಧನ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷವನ್ನು ಲೆಕ್ಕಕ್ಕೆ ಇಟ್ಟಿಲ್ಲ. ಇವತ್ತಿನ ಮಹಾಘಟಿ ಬಂಧನ್ ನ ವ್ಯವಸ್ಥಾಪಕರು ಜೆಡಿಎಸ್ ಸಂತತಿ ಮುಗಿದಿದೆ ಅಂತ ಭ್ರಮೆಯಲ್ಲಿದ್ದಾರೆ. ಅವರು ಆಹ್ವಾನ ನೋಡಿದರೋ, ಬಿಟ್ಟರೋ?. ಯಾವುದು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ವಿಚಾರಕ್ಕೆ ಪ್ರತಿಕಿಯಿಸಿದ ಹೆಚ್ ಡಿಕೆ, ನಮಗೇನು ಆಹ್ವಾನ ಬಂದಿಲ್ಲ. ನೋಡೋಣ ಇನ್ನೂ ಸಮಯ ಇದೆ.ನನ್ನ ಪಕ್ಷ ಸಂಘಟನೆ ಏನಿದೆ ನಾಡಿನ ಸಮಸ್ಯೆ, ಈಗಾಗಲೇ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ನಮ್ಮ ಚಿಂತನೆ ಎಂದರು.
ಇವತ್ತಿನ ಪತ್ರಿಕೆ ನೋಡಿದೆ.
ರಾಜ್ಯದಲ್ಲಿ 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಚಿಂತನೆ ಇಲ್ಲ. ಏನೋ ಮಹಾಘಟಿ ಬಂಧನ್ ಅಂತ ಯಾರು ಸಾಧನೆ ಮಾಡದನ್ನು ನಾವು ಮಾಡಿದ್ದೇವೆಂದು ರಸ್ತೆ ಉದ್ದಕ್ಕೂ ನೂರಾರು ಕೋಟಿ ರೂ. ಖರ್ಚು ಮಾಡಿ ಬ್ಯಾನರ್ ಹಾಕಿಕೊಂಡು ಕುಳಿತವ್ರೆ. ಆದರೆ, ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇವರಿಗೆ ಲೆಕ್ಕಕ್ಕಿಲ್ಲ. ರೈತರು ಆತ್ಮಹತ್ಯೆ ಮಾಡಕೊಳ್ಳಬೇಡಿ ಎಂಬ ಒಂದು ಸಂದೇಶ ಕೊಟ್ಟರಾ?, ಇದು ಬೇಕಾಗಿಲ್ಲ . ಇದು ರಾಜ್ಯದ ಪರಿಸ್ಥಿತಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷಕ್ಕೆ ಕಾರ್ಯಕರ್ತರು ಇದ್ದಾರೆ, ನಾಡಿನ ಜನತೆ ಕೆಲವು ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ರತಿ ಚುನಾವಣೆಗೆ ಕೆಲವೊಂದು ತೀರ್ಮಾನ ಆಗುತ್ತದೆ. ನಮ್ಮದು ಹೋರಾಟ ಮಾಡಿಕೊಂಡಿರುವ ಪಕ್ಷ. ಈಗ ಏನೇ ಮಾತನಾಡಿದರೂ ನಗಣ್ಯ. ಲೋಕಸಭೆ ಚುನಾವಣೆಗೆ ಇನ್ನೂ ಎಂಟು, ಒಂಬತ್ತು ತಿಂಗಳು ಇದೆ. ನೋಡೋಣ ಏನಾಗುತ್ತದೆ ಅಂತ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ