ನವದೆಹಲಿ:
ಕಾಂಗ್ರೆಸ್ ಕೆದಕಿದ ರಫೆಲ್ ಡೀಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ ಯುಪಿಎ ಸರಕಾರ 2007ರಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಶೇಕಡಾ 20ರಷ್ಟು ಕಡಿಮೆ ಬೆಲೆಗೆ 2016ರಲ್ಲಿ ಎನ್ ಡಿಎ ಸರಕಾರ ಕಡಿತ ಮಾಡಿ ಖರೀದಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ಎಎನ್ ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೇಟ್ಲಿ, ಈಗ ಭಾರತವು ಖರೀದಿಸುತ್ತಿರುವ ಯುದ್ಧ ವಿಮಾನ ಪೂರ್ಣ ಪ್ರಮಾಣದಲ್ಲಿ ಯುದ್ಧಕ್ಕೆ ಸನ್ನದ್ಧಗೊಂಡಿರುವಂಥದ್ದು . ಮತ್ತು ಮಧ್ಯವರ್ತಿಗಳೂ ಇಲ್ಲದೆ ಎರಡು ದೇಶದ ಸರಕಾರಗಳು ಈ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದ್ದಾರೆ.
ಆರಂಭಿಕ ಮಟ್ಟದ ಯುದ್ಧ ವಿಮಾನವನ್ನು ಯುದ್ಧ ಸನ್ನದ್ಧವಾದ ವಿಮಾನಕ್ಕೆ ಹೋಲಿಕೆ ಮಾಡಲು ಸಾಧ್ಯವಾ? ಸಾಧಾರಣ ವಿಮಾನವನ್ನು ಶಸ್ತ್ರಸಜ್ಜಿತವಾದುದ್ದರ ಜತೆ ತುಲನೆ ಮಾಡಬಹುದಾ? 2012ರಲ್ಲೇ ಒಪ್ಪಂದ ಮಾಡಿಕೊಂಡಿದ್ದರೆ 2017ರಲ್ಲಿ ಮೊದಲ ವಿಮಾನ ಭಾರತಕ್ಕೆ ಬಂದು ಇಳಿದಿರುತ್ತಿತ್ತು ಎಂದಿದ್ದಾರೆ.ಎಂದು ಉತ್ತರಿಸುತ್ತಾ ಅವರು ಕಾಂಗ್ರೇಸ್ ಗೆ ಟಾಂಗ್ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








