ಕಾಂತರಾಜ್ ವರದಿ ತಿರಸ್ಕರಿಸಿ: ಸಿಎಂಗೆ ಸಮಿತಿ ಒತ್ತಾಯ

ಬೆಂಗಳೂರು

     ಸಾಮಾಜಿಕ, ಆರ್ಥಿಕ ಸಮೀಕ್ಷೆಯಡಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಅವರು ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ವಕ್ಕಲಿಗ ಸಮುದಾಯವನ್ನು ಮುಂದುವರೆದ ಜನಾಂಗ ಎಂದು ಶಿಫಾರಸ್ಸು ಮಾಡಿದ್ದು, ಈ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಿರಸ್ಕರಿಸಬೇಕು ಎಂದು ರಾಜ್ಯ ವಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ. ಗಾನಂ ಶ್ರೀಕಂಠಯ್ಯ ಒತ್ತಾಯಿಸಿದ್ದಾರೆ.

     ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜ್ ವರದಿಯನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಒಕ್ಕಲಿಗ ಜನಾಂಗ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಯಾವುದೇ ಮೀಸಲಾತಿ ಪಡೆಯಲು ಸಾಧ್ಯವಿಲ್ಲ. ಒಕ್ಕಲಿಗರಿಗೆ ಯಾವುದೇ ರೀತಿಯಲ್ಲೂ ಪ್ರಾತಿನಿಧ್ಯೆ ದೊರೆಯುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಕಾಂತರಾಜ್ ವರದಿ ಅವೈಜ್ಞಾನಿಕವಾಗಿದ್ದು, ವಸ್ತುನಿಷ್ಟತೆಯಿಂದ ಕೂಡಿಲ್ಲ.

    ಸಮೀಕ್ಷೆ ಎಲ್ಲರನ್ನು ಒಳಗೊಂಡಿಲ್ಲ. ಒಕ್ಕಲಿಗ ಜನಾಂಗ ಶೇ 16 ರಷ್ಟಿದ್ದು, ವರದಿಯಲ್ಲಿ ಶೇ 8 ರಷ್ಟಿದೆ ಎಂದು ತೋರಿಸಿದೆ. ರಾಜ್ಯದಲ್ಲಿ ಒಕ್ಕಲಿಗ ಜನಸಂಖ್ಯೆ ಶೇ16 ರಷ್ಟಿದ್ದು, ವಿವಿಧ ಆಯೋಗಗಳು ಒಕ್ಕಲಿಗರ ಕೆಲವೊಂದು ಉಪ ಪಂಗಡಗಳನ್ನು ಕೈಬಿಟ್ಟಿರುವುದರಿಂದ ಆ ವರದಿಗಳಲ್ಲಿ ಜನಸಂಖ್ಯೆ ಶೇ 12 ರಿಂದ 14 ರಷ್ಟಿದೆ ಎಂದು ತಿಳಿಸಿರುವುದು ಕೂಡ ಅವೈಜ್ಞಾನಿಕ ಎಂದು ಹೇಳಿದರು.

    ಸಮೀಕ್ಷೆ ನಡೆಸುವಾಗ ಎಲ್ಲಾ ವರ್ಗಕ್ಕೆ ಸೇರಿದ ನಿವೃತ್ತ ನ್ಯಾಯಾಧೀಶರನ್ನು ಸಮಿತಿ ಸದಸ್ಯರನ್ನಾಗಿ ಮಾಡಬೇಕಾಗಿತ್ತು. ಕಾಂತರಾಜ್ ಸಮಿತಿಯು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಸೋಗಿನಲ್ಲಿ ಜನಗಣತಿ ಮಾಡಿದೆ. ಆದರೆ ಜನಗಣತಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ರಾಜ್ಯಕ್ಕೆ ಯಾವುದೇ ಅಧಿಕಾರವಿರುವುದಿಲ್ಲ. ಆದ್ದರಿಂದ ಈ ವರದಿಯು ಕಾನೂನು ಬಾಹಿರ ಎಂದರು.

    1975 ರಲ್ಲಿ ಹಾವನೂರು, 1980 ರಲ್ಲಿ ಮಂಡಲ್ ಆಯೋಗ ಒಕ್ಕಲಿಗ ಜನಾಂಗ ಹಿಂದುಳಿದ ವರ್ಗವೆಂದು, 1995 ರಲ್ಲಿ ಚಿನ್ನಪ್ಪರೆಡ್ಡಿ (ಎಸ್‌ಟಿ) ಆಯೋಗ ಕೆಲವರ ಒಳಸಂಚಿನಿAದ ಒಕ್ಕಲಿಗ ಜನಾಂಗರು ಮುಂದುವರಿದ ಜನಾಂಗವೆAದು ವರದಿ ನೀಡಿದೆ. ಸರ್ಕಾರ ಅದನ್ನು ಮರು ಪರಿಶೀಲಿಸಿ, ಒಕ್ಕಲಿಗ ಜನಾಂಗವನ್ನು ಹಿಂದುಳಿದ ಜನಾಂಗವೆAದು ಪರಿಗಣಿಸಿ ಮೀಸಲಾತ್ನಿ ನೀಡಿದೆ.

    ಸಂವಿಧಾನದ ಮೂಲದಂತೆ ಎಸ್.ಸಿ. ಎಸ್.ಟಿ. ಜನಾಂಗಕ್ಕೆ 10 ವರ್ಷಗಳು ಮಾತ್ರ ಮೀಸಲಾತಿ ನೀಡಬೇಕಿದ್ದರೂ 75 ವರ್ಷಗಳು, ಹಿಂದುಳಿದ ಜನಾಂಗದವರಿಗೆ 1975 ರಿಂದ ಇದುವರೆವಿಗೂ ಸುಮಾರು 50 ವರ್ಷಗಳ ಕಾಲ ಮೀಸಲಾತಿ ನೀಡಿ ಈಗಲೂ ಮುಂದುವರೆಸಲಾಗಿದೆ ಎಂದರು.

    ವಿವಿಧ ಸರ್ಕಾರಗಳು ಚಿನ್ನಪ್ಪರೆಡ್ಡಿ (ಎಸ್.ಟಿ.), ಕಾಂತರಾಜು (ಕುರುಬ) ಮತ್ತು ಭಕ್ತ ವತ್ಸಲಂ (ಎಸ್.ಸಿ.) ಇವರುಗಳನ್ನು ಅವರಿಗೆ ಅನುಕೂಲಕರವಾಗಿ ವರದಿ ನೀಡುವ ವ್ಯಕ್ತಿಗಳನ್ನು ಆಯೋಗಕ್ಕೆ ನೇಮಿಸಿ ಅವರಿಂದ ಬೇಕಾದ ರೀತಿಯಲ್ಲಿ ವರದಿಗಳನ್ನು ಪಡೆದು ಒಕ್ಕಲಿಗ ಜನಾಂಗಕ್ಕೆ ಅನ್ಯಾಯ ಮಾಡುತ್ತಾ ಬಂದಿವೆ. ಭಕ್ತ ವತ್ಸಲಂ (ಎಸ್.ಸಿ) ಆಯೋಗದಿಂದಲೂ ಸ್ಥಳೀಯ ಸಂಸ್ಥೆಗಳಿಗೆ ಒಕ್ಕಲಿಗ ಜನಾಂಗಕ್ಕೆ ಕಡಿಮೆ ಮೀಸಲಾತಿ ನೀಡಲು ಒಳಸಂಚು ನಡೆಸಲಾಗಿದೆ. ಹೀಗಾಗಿ ಒಕ್ಕಲಿಗರಿಗೆ ಹಿಂದಿನ ಸರ್ಕಾರ ಮೀಸಲಾತಿಯನ್ನು ಪ್ರವರ್ಗ-3ಎ ಯಿಂದ 2ಸಿ ಗೆ ಬದಲಾಯಿಸಿ ಶೇ 4 ರಿಂದ 6 ಕ್ಕೆ ಹೆಚ್ಚಿಸಿದೆ. ಇದನ್ನು 12% ಕ್ಕೆ ಹೆಚ್ಚಿಸಿ ಸಂವಿಧಾನದ ಪರಿಚ್ಛೇದ 9 ರಲ್ಲಿ ಸೇರಿಸಬೇಕು ಎಂದರು.

    ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ಹುದ್ದೆಗಳನ್ನು ಸರಿಯಾಗಿ ಪರಿಗಣಿಸದೇ ಹೆಚ್ಚಿನ ಹುದ್ದೆಗಳಿವೆ ಎಂದು ತೋರಿಸಲಾಗಿದೆ. ಹೀಗಾಗಿ ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ನೌಕರರು ಜೇಷ್ಠತೆಯಲ್ಲಿ ಹಿರಿಯರಾಗಿ, ಮುಂದಿನ ಎರಡು ದಶಕಗಳಲ್ಲಿ ಎಲ್ಲಾ ಉನ್ನತ ಹುದ್ದೆಗಳಲ್ಲಿ ಹೈದರಾಬಾದ್ ಕರ್ನಾಟಕ ನೌಕರರುಗಳೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ರಾಜ್ಯ ವಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ. ಗಾನಂ ಶ್ರೀಕಂಠಯ್ಯ ಕಳವಳ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ನಾಗರಾಜ್, ನಿವೃತ್ತ ಜಂಟಿ ನಿರ್ದೇಶಕ ಗಂಗಣ್ಣ ಮತ್ತಿತರರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap