ಕಾನೂನುಗಳು ರಚನೆಯಾಗುವುದು ಎಲ್ಲಾ ಜನರ ಒಳಿತಿಗಾಗಿ : ಕೆ.ಎನ್. ರಾಜಣ್ಣ

ಮಧುಗಿರಿ:

    ಕಾನೂನುಗಳು ರಚನೆಯಾಗುವುದು ಎಲ್ಲಾ ಜನರ ಒಳಿತಿಗಾಗಿ ಇವುಗಳಲ್ಲಿ ಏನಾದರೂ ಅನಾನುಕೂಲಗಳು ಕಂಡು ಬಂದರೆ ಅವುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಶಾಸನ ಸಭೆಗಿರುತ್ತದೆ ಎಂದು ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ತಿಳಿಸಿದರು.

    ಅವರು ತಾಲೂಕಿನ ದೊಡ್ಡೇರಿ ಹೋಬಳಿಯ ಚೆನ್ನಮ್ಮನ ಪಾಳ್ಯದ ಕೊಲ್ಲಾಪುರದಮ್ಮ ದೇವಾಲಯದ ಸಮೀಪ ಹಮ್ಮಿಕೊಂಡಿದ್ದ ದೇವತಾಪೂಜೆ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜನರು ನಮಗೆ ಅಧಿಕಾರ ನೀಡುವುದು ಅವರ ಒಳಿತಿಗಾಗಿ ಅವರು ನೀಡುವ ಅಧಿಕಾರವನ್ನು ನಾವು ಅವರ ಅಭಿವೃದ್ದಿಗಾಗಿ ಬಳಸಿ ಜನಪರ ರೈತರ ಪರವಾಗಿ ಇರಬೇಕಾಗಿದೆ.ಅನ್ನ ಭಾಗ್ಯ ಯೋಜನೆಯನ್ನು ಸಿದ್ದರಾಮಯ್ಯನವರು ಜಾರಿ ಮಾಡಿದ್ದು ಕರೊನಾ ಸಂಧರ್ಭದಲ್ಲಿ ಆ ಯೋಜನೆಯು ಜನರಿಗೆ ತುಂಬಾ ಅನೂಕೂಲವಾಗಿದೆ.

    ನಮ್ಮ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಅಧಿಕಾರ ಹಿಡಿದರೆ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಪಾಯಿಗಳು ಹಾಗೂ 200 ಯೂನಿಟ್ ವಿದ್ಯುತ್‍ನ್ನು ಉಚಿತವಾಗಿ ನೀಡಲಾಗುವುದು ಜನಪರ ಯೋಜನೆಗಳ ಜಾರಿಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ತಮ್ಮಲ್ಲೆರಾ ಸಹಕಾರ ಅಗತ್ಯವಾಗಿದೆ.

   ಮುಂದೆ ಬರುವ 2023ರ ವಿಧಾನ ಸಭೆಯ ಚುನಾವಣೆಯು ನನ್ನ ಕಡೆ ಚುನಾವಣೆಯಾಗಿದೆ ನಂತರ ಯಾವುದೇ ಕಾರಣಕ್ಕೂ ಯವುದೇ ಚುನಾವಣೆಗಳಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಸದಾ ಜತೆಯಿದ್ದು ನಿಮ್ಮಗಳ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ. ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಅಗತ್ಯವಿರುವ ಜಿಲ್ಲಾ ಕೇಂದ್ರ , ರಾಯದುರ್ಗಾ ರೈಲ್ವೆ ಯೋಜನೆ , 54 ಕೆರೆಗಳಿಗೆ ಎತ್ತಿನ ಹೊಳೆಯ ನೀರನ್ನು ಹರಿಸುವುದು ಹಾಗೂ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಆಳವಡಿಸುವುದನ್ನು ಮಾಡಿಯೇ ತೀರುತ್ತೇನೆಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ಚುನಾವಣೆಯನ್ನು ಮುಂದೂಡಿದ್ದು ಹಾಗೂ ನನಗೆ ರಾಜಕೀಯವಾಗಿ ಪುನರ್ ಜನ್ಮ ನೀಡಿದ ಈ ಹೋಬಳಿಯಲ್ಲಿ ಮತಗಳಿಕೆ ಕಡಿಮೆಯಾಗಿದ್ದು ಸಹ ನನ್ನ ಸೋಲಿಗೆ ಕಾರಣವಾಯಿತು.

   ಯಾವುದೇ ಅಪ ಪ್ರಚಾರ , ಆಸೆ ಆಮಿಷಗಳಿಗೆ ಒಳಗಾಗದೆ ಜನಪರವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಬೇಕು. ತಪ್ಪುಗಳನ್ನು ಮಾಡುವುದು ಮಾನವನ ಸಹಜ ಗುಣವಾಗಿದ್ದು ಮತ್ತೆ ಮಾಡಿರುವಂತಹ ತಪ್ಪುಗಳನ್ನು ಮಾಡದೇ ತಿದ್ದಿಕೊಳ್ಳುವುದು ಮಾನವನ ಧರ್ಮವಾಗಿದೆ. ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ನಿಮ್ಮ ಅಮೂಲ್ಯವಾದ ಮತಗಳನ್ನು ನೀಡುವುದರ ಮೂಲಕ ಕೈ ಬಲಪಡಿಸುವಂತೆ ಮನವಿ ಮಾಡಿದರು.

   ಪೋಷಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜತೆಯಲ್ಲಿ ಪ್ರತಿಯೊಬ್ಬರಲ್ಲಿಯು ಸಮಾನತೆ ಹಾಗೂ ಸ್ವಾಭಿಮಾನದ ಬದುಕನ್ನು ಕಾಣುವಂತಹ ಸಮಾಜ ನಿರ್ಮಾಣವಾಗಬೇಕು ಎಂದರು. ಟಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಜಿ.ಜೆ.ರಾಜಣ್ಣ , ರಾಜ್ಯ ಸಹಕಾರ ಲಮಹಾಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ , ಮಾಜಿ ತಾಪಂ ಸದಸ್ಯರಾದ ಹೆಂಜಾರಪ್ಪ , ಪ್ರಸನ್ನ ಕುಮಾರ್ , ನರಸಿಂಹಯ್ಯ , ಮುಖಂಡರಾದ ನಾರಾಯಣಪ್ಪ , ಮಹಾಲಿಂಗಪ್ಪ , ಜಗದೀಶ್ , ಸಿದ್ದಾಪುರ ರಂಗಶ್ಯಾಮಣ್ಣ , ಸಣ್ಣರಾಮಣ್ಣ , ಈರದಾಸಪ್ಪ ಹಾಗೂ ಗ್ರಾಮಸ್ಥರು ಕಾರ್ಯಕರ್ತರು ಇದ್ದರು.

Recent Articles

spot_img

Related Stories

Share via
Copy link