ತುಮಕೂರು
ಕಾನೂನು ಉಚಿತ ಸೇವೆಗಳನ್ನು ಒದಗಿಸುವ ಗುರಿಯಿಂದ ಕಾನೂನು ಸಾಕ್ಷರತೆ ರಥ ಬಂದಿದೆ,ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಮಾಜಕ್ಕೆ ಸಹಕರಿಸಬೇಕೆಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬದಾಮಿಕರ್ ಹೇಳಿದರು.
ಅವರು ಇಂದು ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ಕಾನೂನು ಸಾಕ್ಷರಥ ರಥದ ಉದ್ಘಾಟನೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಜೆ.ಕೆ.ಅನಿಲ್ ರವರು ಸರ್ಕಾರವು ಬಹಳ ವೆಚ್ಚ ಮಾಡಿ ಕಾನೂನು ರಥವನ್ನು ಕರ್ನಾಟಕದ ಪ್ರತಿ ಹಳ್ಳಿ-ಹಳ್ಳಿಗೂ ಕಳಿಸುತ್ತಿದೆ ಇದರಿಂದ ಪ್ರತಿ ಹಳ್ಳಿಯ ಪ್ರತಿ ಪ್ರಜೆಯೂ ಸಹ ಕಾನೂನು ವಿಷಯವನ್ನು ತಿಳಿದುಕೊಳ್ಳಬೇಕು,ಎಲ್ಲರೂ ತ್ವರಿತ ನ್ಯಾಯದಾನದಲ್ಲಿ ಪಾಲ್ಗೊಳ್ಳಬೇಕು,ಕಾನೂನಿನ ಅರಿವು ಇದ್ದಾಗ ಮಾತ್ರ ಜಗಳ,ವೈಮನಸ್ಯಗಳು ಕಡಿಮೆಯಾಗುತ್ತವೆ,ಕಾನೂನು ರಥದ ಸೇವೆ ಭಾರತದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂದು ಮತ್ತು ಈ ನಿಟ್ಟಿನಲ್ಲಿ ತುಮಕೂರು ತಾಲ್ಲೋಕಿನ ಎಲ್ಲ ವಕೀಲರು ಕ್ರಿಯಾಶೀಲರಾಗಿ ಜನಗಳೊಂದಿಗೆ ಬೆರೆತು ಕಾರ್ಯಕ್ರಮಗಳನ್ನು ನಡೆಸಿಕೊಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಮರಿಚೆನ್ನಮ್ಮ, ನ್ಯಾಯಾಧೀಶರಾದ ಬಾಬಾ ಸಾಹೇಬ್ ಜಿನರಾಳ್ಕರ್, ಬಿ.ಆರ್.ದೇವರಾಜು,ಟಿ.ಕವಿತ,ಆರ್.ಪಾತಣ್ಣ,ಹರೀಶ್ ಬಾಬು, ಎನ್.ಆರ್.ಲೋಕೇಶ್, ಡಿ.ಎ.ಜಗದೀಶ್, ಶೆಟ್ಟಿಹಳ್ಳಿ ರಮೇಶ, ಎಂ.ಎನ್.ಜಗದೀಶ್, ಸಿ.ಸುರೇಶ್ ಕುಮಾರ್, ಪಾಲಾಕ್ಷಯ್ಯ, ಕೆ.ಬಿ.ಚಂದ್ರಚೂಡ ಮತ್ತು ತುಮಕೂರು ನ್ಯಾಯಾಲಯದ ಎಲ್ಲ ನ್ಯಾಯಾಧೀಶರು,ವಕೀಲರು,ಕಕ್ಷಿದಾರರು,ಸಾರ್ವಜನಿಕರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸುರೇಶ್ ಕುಮಾರ್ ಸ್ವಾಗತಿಸಿ,ರಶ್ಮಿ ಪ್ರಾರ್ಥಿಸಿ,ಆರ್.ಪಾತಣ್ಣ ವಂದಿಸಿದರು,ಬಿ.ಆರ್.ದೇವರಾಜು ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
