ತುಮಕೂರು:
ಡ್ರಾಪ್ ಕೊಡುವ ನೆಪದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೃದ್ಧೆಯನ್ನು ಕಾರಿನಲ್ಲಿ ಗ್ರಾಮಕ್ಕೆ ಬಿಡುವ ನೆಪದಲ್ಲಿ ವೃದ್ಧೆಯನ್ನು ಹತ್ತಿಸಿಕೊಂಡ ಆರೋಪಿಗಳು ಆಕೆಯ ಕೊರಳಿನಲ್ಲಿದ್ದ ಸುಮಾರು 1.25 ಲಕ್ಷ ರೂ. ಬೆಲೆ ಬಾಳುವ 45 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಹೆಬ್ಬೂರು ಗೇಟ್ ಬಳಿ ನಡೆದಿದೆ.
ಕಲ್ಲೂರು ಗ್ರಾಮದ ನಾಗಮ್ಮ ಎಂಬುವರೇ ಸರ ಕಳೆದುಕೊಂಡ ವೃದ್ಧೆಯಾಗಿದ್ದು, ಇವರು ಬೆಂಗಳೂರಿನಿಂದ ಬಂದು ಬಸ್ಸಿಗಾಗಿ ಕಾಯುತ್ತಿದ್ದಾಗ ಸಿ.ಎಸ್.ಪುರ ಕಡೆಯಿಂದ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಕಲ್ಲೂರು ಗ್ರಾಮಕ್ಕೆ ಬಿಡುವುದಾಗಿ ಹತ್ತಿಸಿಕೊಂಡು, ನಂತರ ಬೈಚೇನಹಳ್ಳಿ ಇಟ್ಟಿಗೆ ಫ್ಯಾಕ್ಟರಿ ಬಳಿ ಕಾರು ನಿಲ್ಲಿಸಿ ವೃದ್ಧೆಯ ಕೊರಳಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಆಕೆಯನ್ನು ಕೆಳಗಿಳಿಸಿ ಪರಾರಿಯಾಗಿದ್ದಾನೆಂದು ಅಜ್ಜಿಯ ಮೊಮ್ಮಗ ಜಗದೀಶ್ ಎಂಬುವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
