ಕಾರು ಟ್ಯಾಂಕರ್ ನಡುವೆ ಭೀಕರ ಅಪಘಾತ

ಕುಣಿಗಲ್
          ಕಾರು ಟ್ಯಾಂಕರ್ ನಡುವೆ ಡಿಕ್ಕಿ ಸಂಬವಿಸಿದ ಪರಿಣಾಮ ಮೂರು ಜನ ಮೃತಪಟ್ಟು ಏಳು ಜನರಿಗೆ ತೀವ್ರಗಾಯಗೊಂಡ ಘಟನೆ ವರದಿಯಾಗಿದೆ.
             ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮದ್ದೂರು ತುಮಕೂರು ರಾಜ್ಯ ಹೆದ್ದಾರಿ ದೊಡ್ಡಮಾವತ್ತೂರು-ಮಾದಪ್ಪನಹಳ್ಳಿ ಗೇಟ್ ಬಳಿ ಬೆಳಿಗ್ಗೆ ನಡೆದ ದುರ್ಗಟನೆಯಲ್ಲಿ ಮೂಲ ತಮಿಳುನಾಡಿನ ಮೂರು ಜನ ಸಾವುಗೀಡಾಗಿದ್ದು ಏಳುಜನರು ತೀವ್ರಗಾಯಗೊಂಡಿದ್ದಾರೆ.
             ಮೃತಪಟ್ಟವರನ್ನು ಚಿನ್ನರಾಜು (60) ಮಹೇಂದ್ರನ್ (42) ಚಾಲಕ ಮನೋಜ್ (32) ಎಂದು ಗುರುತಿಸಲಾದ ಇವರು ಮೂಲತಹ ತಮಿಳುನಾಡಿನ ಕೊಯಮತ್ತೂರಿನ ಈ ರೋಡ್ ನವರಾಗಿದ್ದಾರೆ. ಆಲ್ವಿನ್, ರೋಜಲೀನ, ದುರ್ಗಬಾಯಿ, ಲೂಥರ್‍ಸಿಂಗ್, ಗೌರಿಬಿದನೂರು ಸ್ಟೀಫನ್, ಇನ್ನೊಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಈ ಪೈಕಿ ತೀವ್ರಗಾಯಗೊಂಡಿರುವ ಇಬ್ಬರ ಸ್ಥಿತಿ ಚಿಂತಾಜನವಾಗಿದೆ. ಅಪಘಾತವಾಗುತ್ತಿದ್ದಂತೆ ಹೆಚ್ಚೆತ್ತ ಗ್ರಾಮಸ್ತರು ಆಸ್ಪತ್ರೆಗೆ ದಾಖಲಿಸಲು ಮುಂದಾದರೆ ಕೆಲವು ಮಹಿಳೆಯರು ಅಪಘಾತಕ್ಕೀಡಾದವರಿಗೆ ಕುಡಿಯಲು ನೀರು ನೀಡುವ ಮೂಲಕ ಸಹಕರಿಸಿದರು. ಇವರು ತುಮಕೂರಿಗೆ ಹೆಣ್ಣೊಂದನ್ನು ನೋಡಲು ಹೋಗುತ್ತಿದ್ದಾಗ ಇಂತಹ ದುರ್ಗಘಟನೆ ಸಂಭವಿಸಿದೆ. ಪ್ರಕರಣವನ್ನು ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link