ಕಾರು ಬೈಕ್ ಡಿಕ್ಕಿ :ಬೈಕನ್ನು 4 ಕಿ.ಮಿ ಎಳೆದೊಯ್ದಿದ ಕಾರು

ನವದೆಹಲಿ

ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ  ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವುದು ಸವಾರರ ಹುಂಬತನ , ನಿರ್ಲಕ್ಷ್ಯ, ಅಜಾಗರೂಕತೆ ಇನ್ನು ಮುಂತಾದ ಕಾರಣಗಳಿರುತ್ತವೆ .ಇಂತಹುದ್ದೇ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದ್ದು ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್‌ ಅನ್ನು ಸುಮಾರು 4 ಕಿ.ಮೀ ದೂರ ಎಳೆದೊಯ್ದಿದೆ ಎನ್ನಲಾಗಿದೆ. ಇನ್ನೂ ಘಟನೆಯಲ್ಲಿ  ಬೈಕ್ನನಲ್ಲಿದ್ದ ಇಬ್ಬರು ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ತೀರಾ ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ಅಂಜಲಿ ಸಂಗ್ ಪ್ರಕರಣ ಇನ್ನೂ ಮಾಸಿಲ್ಲ. ಅದಾಗಲೇ ಕರ್ನಾಟಕದ ಮಂಗಳೂರು ಸೇರಿದಂತೆ ಹರಿಯಾಣದಲ್ಲೂ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಗುರುಗ್ರಾಮದ ಸೆಕ್ಟರ್ 62 ಪ್ರದೇಶದಲ್ಲಿ ಇಬ್ಬರು ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ವೇಗವಾಗಿ ಬಂದ ಹೋಂಡಾ ಅಮೇಜ್ ಕಾರು ಬೈಕ್‌ಗೆ ಗುದ್ದಿದೆ. ಘಟನೆ ವೇಳೆ ಚಾಲಕ ಪಾನಮತ್ತನಾಗಿದ್ದ ಎನ್ನಲಾಗಿದೆ. ಈತ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಇಬ್ಬರು ಬೈಕ್ ಸವಾರರು ರಸ್ತೆ ಬದಿ ಬಿದ್ದಿದ್ದಾರೆ. ಬೈಕ್‌ಗೆ ಢಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ವೇಗವಾಗಿ ಹೋಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಕಾರಿನಡಿ ಸಿಲುಕಿಕೊಂಡಿದೆ. ಆದರೂ ಕಾರು ಚಾಲಕ 4 ಕಿ.ಮೀ ವೇಗವಾಗಿ ಕಾರು ಚಲಾಯಿಸಿದ್ದಾನೆ.

Recent Articles

spot_img

Related Stories

Share via
Copy link
Powered by Social Snap