ಕಾರ್ತಿಕ್‌ ಆರ್ಯನ್‌ ಫೋಟೋ ಕದ್ದ ಕರಣ್‌ ಜೋಹರ್‌ ….!

ಕಾರ್ತಿಕ್ ಆರ್ಯನ್​ ಅವರು ಇದೇ ಮೊದಲ ಬಾರಿಗೆ ಕರಣ್ ಜೋಹರ್  ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದಾಗಲೇ ಕುತೂಹಲ ಹೆಚ್ಚಿತ್ತು. ಧರ್ಮ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ಚಿತ್ರ ಹೊರ ಬರಲಿದೆ. ಈ ಸಿನಿಮಾಗೆ ‘ನಾಗ್​ಜಿಲ್ಲಾ’ ಎನ್ನುವ ಟೈಟಲ್ ಇಡಲಾಗಿದೆ. ಸಾಮಾನ್ಯ ವ್ಯಕ್ತಿ ಹಾವಾಗಿ ಬದಲಾಗುವ ರೀತಿಯಲ್ಲಿ ಪೋಸ್ಟರ್ ಮೂಡಿ ಬಂದಿದೆ. ಆದರೆ,  ಕಾರ್ತಿಕ್ ಆರ್ಯನ್ ಸಿನಿಮಾ ಪೋಸ್ಟರ್​ ನೋಡಿದ ಬಳಿಕ ಒಂದು ದೊಡ್ಡ ತಪ್ಪು ಕಾಣಿಸಿದೆ. ಇದನ್ನು ಅಭಿಮಾನಿಗಳು ಕಂಡು ಹಿಡಿದಿದ್ದಾರೆ.

ಸಾಮಾನ್ಯವಾಗಿ ಹೊಸ ಸಿನಿಮಾ ಘೋಷಣೆ ಮಾಡುವಾಗ ಪೋಸ್ಟರ್​ಗಾಗಿ ಫೋಟೋಶೂಟ್ ಮಾಡಿಸಲಾಗುತ್ತದೆ. ಇದಕ್ಕಾಗಿ ಸ್ವಲ್ಪ ಹಣ ಖರ್ಚಾಗುತ್ತದೆ. ಆದರೆ, ತಂಡದವರು ಇದನ್ನು ಉಳಿಸೋ ಪ್ಲ್ಯಾನ್ ಮಾಡಿದಂತಿದೆ. ಈ ಪೋಸ್ಟರ್ ಹಿಂದಿನ ಅಸಲಿ ಮರ್ಮವನ್ನು ನೆಟ್ಟಿಗರು ಬಿಚ್ಚಿಟ್ಟಿದ್ದಾರೆ. ಇದರಿಂದ ಧರ್ಮ ಸಂಸ್ಥೆಗೆ ಮುಜುಗರ ಆಗಿದೆ.

ಕಾರ್ತಿಕ್ ಆರ್ಯನ್ ಅವರ ‘ನಾಗ್​ಜಿಲ್ಲಾ’ ಸಿನಿಮಾ ಪೋಸ್ಟರ್ ನೋಡಿದವರಿಗೆ ಅವರು ಈ ಮೊದಲು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದ ಫೋಟೋ ನೆನಪಾಗಿದೆ. ಅವರು ಈ ಮೊದಲು ಮಾಡಿದ್ದ ಫೋಟೋ ಹಾಗೂ ಪೋಸ್ಟರ್ ಮಧ್ಯೆ ಸಾಕಷ್ಟು ಸಾಮ್ಯತೆ ಇದೆ. ಹೇರ್​ಸ್ಟೈಲ್​ನಿಂದ ಹಿಡಿದು ಎಲ್ಲವೂ ಬಹುತೇಕ ಹೋಲಿಕೆ ಇದೆ. ಎರಡೂ ಕಡೆಗಳಲ್ಲಿ ಕಾರ್ತಿಕ್ ಶರ್ಟ್ ಧರಿಸಿಲ್ಲ. ಹೀಗಾಗಿ, ಪೋಸ್ಟರ್ ಮಾಡಲು ಫೋಟೋಶೂಟ್ ಮಾಡೋದು ಬಿಟ್ಟು ಅವರದ್ದೇ ಖಾತೆಯ ಹಳೆಯ ಫೋಟೋಗಳನ್ನು ತೆಗದರೇ ಎನ್ನುವ ಪ್ರಶ್ನೆ ಮೂಡಿದೆ.

Recent Articles

spot_img

Related Stories

Share via
Copy link