ತುಮಕೂರು
ಎ.ಪಿ.ಎಂ.ಸಿ. ಯಾರ್ಡ್ ಆವರಣದಲ್ಲಿರುವ ಟಿ.ಡಿ.ಸಿ.ಸಿ.ಐ ಕಟ್ಟಡದಲ್ಲಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿ.ಎಸ್.ಟಿ.ಯಲ್ಲಿನ ಗೊಂದಲಗಳ ಬಗ್ಗೆ ಶ್ರೀ ಸ್ವಾಮಿಗೌಡ, ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ತುಮಕೂರು ಇವರು ಚರ್ಚಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀನಾಥ್, ಉಪಾಧ್ಯಕ್ಷ ಎಂ.ಎನ್.ಲೋಕೇಶ್. ಕಾರ್ಯದರ್ಶಿ ಅಬ್ದುಲ್ ಜಲೀಲ್, ಸಿ.ಎಸ್.ಸಂಜಯ್, ತೆರಿಗೆ ಸಮಿತಿ ಚೇರ್ಮೆನ್ ಟಿ.ಜೆ.ಗಿರೀಶ್, ಪ್ರಕಾಶ್ ಮತ್ತು ಮಾಜಿ ಅಧ್ಯಕ್ಷರುಗಳಾದ ಟಿ.ಆರ್.ಲೋಕೇಶ್. ಸುಜ್ಞಾನ್‍ಹಿರೇಮಠ್ ಹಾಗೂ ಸುರೇಂದ್ರ ಷಾ ಸಂಸ್ಥೆಯ ನಿರ್ದೇಶಕರುಗಳು ಹಾಗೂ ತುಮಕೂರಿನ ಇತರೆ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ