ಕಾಲೇಜು ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ ಕಡ್ಡಾಯ

ತಿಪಟೂರು :

              ಸ್ನಾತಕೋತ್ತರ, ಪದವಿ, ಪದವಿಪೂರ್ವಕಾಲೇಜು ಸಹಿತ ಎಲ್ಲಾ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಸೇವಾಯೋಜನೆ (ಎನ್.ಎಸ್.ಎಸ್) ಕಡ್ಡಾಯಗೊಳಿಸಲು ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಮತ್ತು ಉನ್ನತ ಶಿಕ್ಷಣ ಪ್ರವೇಶಾತಿಯಲ್ಲಿ ಕೋಟಾನಿಗಧಿಮಾಡಲು ಚಿಂತಿಸಿರುವ ಗೃಹಸಚಿವರು ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ನಿಲುವನ್ನು ತುಮಕೂರು ವಿ.ವಿ. ಅಕಾಡೆಮಿಕ್ ಕೌನ್ಸಿಲ್ ಮಾಜಿ ಸದಸ್ಯರಾದ ಕೆ.ಎಸ್.ಸದಾಶಿವಯ್ಯನವರು ಸ್ವಾಗತಿಸಿದ್ದಾರೆ.

               ಎನ್.ಎಸ್.ಎಸ್ ನಲ್ಲಿ ಕೇವಲ ಬಡವರು, ಮಧ್ಯಮ ವರ್ಗದವರ ಮಕ್ಕಳು ಮಾತ್ರ ಪಾಲ್ಗೊಳ್ಳುತ್ತಿದ್ದು ಶ್ರೀಮಂತರ ಮಕ್ಕಳು ಇದರಿಂದ ದೂರ ಉಳಿಯುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಶಿಸ್ತು, ಸಂಸ್ಕೃತಿ ಉತ್ತಮ ನಡವಳಿಕೆ ರೂಡಿಸಿಕೊಳ್ಳುವ ದೃಷ್ಠಿಯಿಂದ ಎನ್.ಎಸ್.ಎಸ್ ಕಡ್ಡಾಯಗೊಳಿಸುವುದು ಸೂಕ್ತ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಹೋದಾಗ ಎನ್.ಎಸ್.ಎಸ್ ಸಾಕಷ್ಟು ಉಪಯೋಗಕ್ಕೆ ಬರುತ್ತದೆಂದು ಅಭಿಪ್ರಾಯಪಟ್ಟಿದ್ದಾರೆ.

                ಮುಂದುವರೆದು ದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಆವರಣದಲ್ಲಿ ಜಂಕ್‍ಫುಡ್‍ಗಳ ಮಾರಾಟವನ್ನು ನಿಷೇದಿಸಿ. ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯು.ಜಿ.ಸಿ) ಆದೇಶ ಹೊರಡಿಸಿರುವುದು ಯುವ ಜನತೆಯ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಉತ್ತಮ ಕ್ರಮವಾಗಿದೆ. ಜೊತೆಗೆ ಕೇವಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಷ್ಟೇಅಲ್ಲದೆ ಎಲ್ಲಾ ಶಾಲೆ ಹಾಗೂ ಪ್ರೌಢಶಾಲೆಗಳ ಆವರಣದ ಸುತ್ತಮುತ್ತಕೂಡ ಇವುಗಳನ್ನು ನಿಷೇದಿಸುವ ಅಗತ್ಯವಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಗಮನರಿಸಿ ಕಟ್ಟುನಿಟ್ಟಿನ ನೀತಿಯನ್ನು ಜಾರಿಗೊಳಿಸಬೇಕೆಂದು ಸದಾಶಿವಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Recent Articles

spot_img

Related Stories

Share via
Copy link