ಬೆಂಗಳೂರು
ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ನಿವಾಸಿಗಳು ತಮ್ಮ ದಿನನಿತ್ಯದ ಬಳಕೆಗೆ ಸಾಕಾಗುವಷ್ಟು ನೀರು ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಅವರು ನೀರು ಪೂರೈಸುವ ಟ್ಯಾಂಕರ್‌ಗಳನ್ನು ಕಾಯ್ದಿರಿಸಲು ತಿಂಗಳಿಗೆ ₹ 10,000 ಎತ್ತಿ ಇಡಬೇಕಾಗಿದೆ. ವೈಟ್‌ಫೀಲ್ಡ್‌ನಲ್ಲಿ ದಿನನಿತ್ಯದ ಬಳಕೆಯ ನೀರಿಗೂ ಹಾಹಾಕಾರ ಮುಂದುರೆದಿದೆ. ಕಳೆದ ಎರಡು ತಿಂಗಳುಗಳಿಂದ ತಮ್ಮ ಕಾಲೋನಿಗಳಿಗೆ ಸರಿಯಾದ ನೀರಿನ ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆ ಬಹಳ ದಿನಗಳಿಂದ ಕಾಡುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
‘ನಮಗೆ ಸರಿಯಾಗಿ ನೀರು ಪೂರೈಕೆಯಾಗಿ ಆರು ತಿಂಗಳಾಗಿದೆ. ಕಾವೇರಿ ಪೈಪ್‌ಲೈನ್‌ನಲ್ಲಿನ ಕೆಲವು ಸಮಸ್ಯೆ ಮತ್ತು ಇತರ ವಿಷಯಗಳೆ ಇದಕ್ಕೆ ಕಾರಣ. ಆದರೆ ನಮಗೆ ನಿಖರವಾಗಿ ಏನಾಗುತ್ತಿದೆ ಎಂದು ನಮಗೆ ತಿಳಿದಿಲ್ಲ ಎಂದು ವೈಟ್‌ಫೀಲ್ಡ್‌ನ ಪ್ರೆಸ್ಟೀಜ್ ಬೌಲೆವರ್ಡ್‌ನಲ್ಲಿ ವಾಸಿಸುವ ಇರ್ಷಾದ್ ಅಹಮದ್ ಹೇಳಿದ್ದಾರೆ. ಅವರ ಅಪಾರ್ಟ್‌ಮೆಂಟ್ ಸಂಕೀರ್ಣವು 144 ಫ್ಲಾಟ್‌ಗಳನ್ನು ಹೊಂದಿದೆ.
ವೈಟ್‌ಫೀಲ್ಡ್ ನಿವಾಸಿಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ನೀಡಿದ್ದಾರೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಿವಾಸಿಗಳು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದ ವಾರ್ಡ್ ಸಮಿತಿ ಸಭೆಗಳೂ ನಿಯಮಿತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದೇವೆ: ನಮ್ಮದು ಹೊಸ ಬಡಾವಣೆ, ಹೀಗಾಗಿ ಸದ್ಯ ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದೇವೆ. ನಮಗೆ ಸ್ವಲ್ಪ ಕಾವೇರಿ ನೀರು ಸಿಗುತ್ತದೆ.
ಆದರೆ ಅದು ಏನಕ್ಕೂ ಸಾಕಾಗಲ್ಲ. ನನಗೆ ಗೊತ್ತಿರುವ ಹತ್ತಿರದ ಹಲವಾರು ಕಾಲೋನಿಗಳು ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿವೆ. ಜನರು ನೀರಿಗಾಗಿ ತಿಂಗಳಿಗೆ ₹ 10,000 ಖರ್ಚು ಮಾಡುತ್ತಾರೆ. ಹೆಚ್ಚಿನ ಉಪ್ಪಿನ ಅಂಶದಿಂದಾಗಿ ಬೋರಿಂಗ್ ನೀರು ಸಹ ಉತ್ತಮ ಆಯ್ಕೆಯಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳ ಚರ್ಮವು ಊತ ಬಂದಿದೆ ಎಂದು ಅಹಮದ್ ಹೇಳಿದರು.
ನಾನು ಒಂದೆರಡು ತಿಂಗಳಿನಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ ಯಾವುದೇ ದೂರುಗಳಿಗೆ ಸ್ಪಂದಿಸುತ್ತಿಲ್ಲ. ನಾನು ಆರು ದೂರುಗಳನ್ನು ಸಲ್ಲಿಸಿದ್ದೇನೆ. ನಾನು ಪ್ರತಿ ತಿಂಗಳು ಕನಿಷ್ಠ ಮೂರರಿಂದ ನಾಲ್ಕು ಟ್ಯಾಂಕರ್‌ಗಳನ್ನು ಕಾಯ್ದಿರಿಸಬೇಕು ಅದು ನನಗೆ ₹2,500-3,000 ವೆಚ್ಚವಾಗುತ್ತದೆ. 10 ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕರ್ ಬೆಲೆ 800ರಿಂದ 1,600 ರೂಪಾಯಿ ಆಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








