ಕಾಶ್ಮೀರಿ ಪಂಡಿತರ ಸಮಸ್ಯೆ ಕುರಿತಂತೆ ಪ್ರಧಾನಿಗೆ ರಾಹುಲ್ ಪತ್ರ

ನವದೆಹಲಿ

ನಾವು ಸೂಕ್ತ ಭದ್ರತೆಯ ಭರವಸೆಯಿಲ್ಲದೆ ಕಾಶ್ಮೀರಿ ಕಣಿವೆಗೆ ಮರಳಲು ಇಷ್ಟಪಡುವುದಿಲ್ಲ ಎಂಬ ಕಾಶ್ಮೀರಿ ಪಂಡಿತರ ಸಂಕಟವನ್ನು ಪರಿಶೀಲಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೂಲಂಕುಶವಾಗಿ ಪತ್ರದ ಮೂಲಕ  ಒತ್ತಾಯಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದ ಆಡಳಿತವು ಅಸೂಕ್ಷ್ಮ ದೋರಣೆಯನ್ನು ಅನುಸರಿಸುತ್ತಿದೆ ಎಂದು ರಾಹುಲ್‌ ಆರೋಪಿಸಿದ್ದಾರೆ.

ಮೋದಿಗೆ ಬರೆದ ಪತ್ರದಲ್ಲಿ, ಇತ್ತೀಚೆಗೆ ಭಯೋತ್ಪಾದಕರು ಕಾಶ್ಮೀರಿ ಪಂಡಿತರು ಮತ್ತು ಇತರರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ವಿಚಾರದ ಬಗ್ಗೆ ರಾಹುಲ್‌ ಹೇಳಿದ್ದಾರೆ. ಇದು ಕಣಿವೆಯಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರು) ಸರ್ಕಾರಿ ಅಧಿಕಾರಿಗಳು ತಮ್ಮನ್ನು ಕಾಶ್ಮೀರ ಕಣಿವೆಯಲ್ಲಿ ಕೆಲಸಕ್ಕೆ ಹಿಂತಿರುಗುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು. ಈ ಪರಿಸ್ಥಿತಿಯಲ್ಲಿ, ಅವರ ಸುರಕ್ಷತೆ ಮತ್ತು ಭದ್ರತೆಯ ಯಾವುದೇ ಖಾತರಿಯಿಲ್ಲದೆ ಅವರನ್ನು ಕಣಿವೆಗೆ ಹಿಂತಿರುಗುವಂತೆ ಒತ್ತಾಯಿಸುವುದು ಕ್ರೂರ ಕ್ರಮವಾಗಿದೆ’ ಎಂದು ರಾಹುಲ್‌ ತಿಳಿಸಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೆ, ಸರ್ಕಾರವು ಈ ಕಾಶ್ಮೀರಿ ಪಂಡಿತ್ ಉದ್ಯೋಗಿಗಳಿಂದ ಇತರ ಆಡಳಿತ ಮತ್ತು ಸಾರ್ವಜನಿಕ ಸೌಲಭ್ಯಗಳಲ್ಲಿ ಸೇವೆಗಳನ್ನು ಪಡೆಯಬಹುದು ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಹಿಂದಿಯಲ್ಲಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link