ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಆಗ್ರಹ

ಹುಳಿಯಾರು

            ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸದೆ ಮೇಲ್ಭಾಗದಲ್ಲಿ ಮಾತ್ರ ಬಣ್ಣ ಬಳಿಯಲಾಗಿದೆ ಎಂದು ಗ್ರಾಮದ ನಾಗರಾಜು ಆರೋಪಿಸಿದ್ದಾರೆ.
            ಲಿಂಗಪ್ಪನಪಾಳ್ಯದಲ್ಲಿರುವ ನೀರಿನ ಟ್ಯಾಂಕ್ ಒಳಭಾಗ ಕಲುಷಿತಗೊಂಡಿದ್ದರೂ ಸ್ವಚ್ಛಗೊಳಿಸಿ ತಿಂಗಳುಗಳೇ ಕಳೆದಿವೆ. ಈ ಕುರಿತಂತೆ ಪ.ಪಂ. ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರು. ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಲಾಗಿ ಸ್ವಚ್ಛಗೊಳಿಸಲು ಪಿಡಿಓಗೆ ಸೂಚನೆ ನೀಡಿದ್ದರು.
           ಆದರೆ ಟ್ಯಾಂಕ್ ಒಳ ಭಾಗವನ್ನು ಸ್ವಚ್ಛಗೊಳಿಸದೆ ಹೊರ ಭಾಗದಲ್ಲಿ ಬಣ್ಣಗಳನ್ನು ಬಳಿದಿದ್ದಾರೆ. ಟ್ಯಾಂಕ್‍ನ ಬಹುತೇಕ ನಲ್ಲಿಗಳು ಕಿತ್ತು ನೀರು ಸೋರಿಕೆಯಾಗುತ್ತಿದ್ದರೂ ಹೊಸ ನಲ್ಲಿಗಳನ್ನು ಅಳವಡಿಸದೆ ಮತ್ತೆ ಕಾಟಾಚಾರದ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.
ಇದರಿಂದ ಮತ್ತೆ ಅಶುದ್ಧ ನೀರನ್ನೆ ಬಡಕೂಲಿ ಕಾರ್ಮಿಕರು ಮತ್ತು ಮಕ್ಕಳು ಕುಡಿಯುವಂತಾಗಿದೆ. ಈ ಭಾಗದಲ್ಲಿ ಮಾರಣಾಂತಿಕ ಕಾಯಿಲೆಗಳಾದ ಟೈಫಾಯಿಡ್ ಜ್ವರ, ಜಾಂಡೀಸ್‍ಗೆ ರೋಗಗಳು ಹೆಚ್ಚಾಗಿದ್ದು ಇನ್ನು ಮುಂದಾದರು ಬೇಜವಾಬ್ದಾರಿತನವನ್ನು ಬಿಟ್ಟು ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link