ಕುಣಿಗಲ್ :
ರಸ್ತೆ ಸುರಕ್ಷತೆ ಸಪ್ತಾಹದ ಅಂಗವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ದ್ವಿಚಕ್ರ ವಾಹನ ಸವಾರರಿಗೆ ಕುಣಿಗಲ್ ಪೊಲೀಸರುವ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದರು.
ಪಟ್ಟಣದ ಪೊಲೀಸ್ ಠಾಣೆಯ ವತಿಯಿಂದ ರಸ್ತೆ ನಿಯಮ ಪಾಲಿಸಿ ಸುಭದ್ರ ಜೀವನ ನಿಮ್ಮದಾಗಿಸಿ ಎಂದು ಪೊಲೀಸ್ ಇಲಾಖೆಯ ಡಿವೈಎಸ್ಪಿ ರಮೇಶ್, ನಗರ ಪೊಲೀಸ್ ಇನ್ಸ್ಪೆಕ್ಟರ್ ರಾಜು ಡಿಎಲ್, ವೃತ್ತ ನಿರೀಕ್ಷಕರಾದ ಗುರುಪ್ರಸಾದ್, ಪಿಎಸ್‍ಐ ಅಮೃತೂರು ಮಂಜು ಇವರ ನೇತೃತ್ವದಲ್ಲಿ ಪಟ್ಟಣದಾದ್ಯಂತ ರಸ್ತೆ ಸುರಕ್ಷತೆ ಸಪ್ತಾಹದ ಅಂಗವಾಗಿ ಸಾರ್ವಜನಿಕರು ದ್ವಿಚಕ್ರವಾಹನ ಚಲಿಸುವಾಗ ಸಂಚಾರಿ ನಿಯಮ ಪಾಲಿಸುವುದರ ಜೊತೆಯಲ್ಲಿ ತಲೆಗೆ ಹೆಲ್ಮೆಟ್ ಧರಿಸುವುದು, ಮಾಸ್ಕ್ ಹಾಕಿಕೊಳ್ಳುವುದು, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಸೇರಿದಂತೆ ಸಂಚಾರಿ ನಿಯಮವನ್ನು ತಪ್ಪದೇ ಪಾಲಿಸುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಂಡಿದ್ದರು.
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ ಸಂಚರಿಸುತ್ತಿರುವರಿಗೆ ಹಾಗೂ ಧರಿಸದೇ ಇದ್ದವರಿಗೂ ಗುಲಾಬಿ ಹೂವು ನೀಡುವ ಮೂಲಕ ತಿಳುವಳಿಕೆ ನೀಡಿದರು. ಮದ್ಯಪಾನ ಮಾಡಿ ವಾಹನ ಚಲಿಸಬಾರದು, ಅಪ್ರಾಪ್ತ ವಯಸ್ಕರಿಗೆ ವಾಹನ ಚಲಿಸಲು ಅವಕಾಶ ನೀಡುವುದು ಅಪರಾಧ, ಮತ್ತಿತರ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಸ್ವತಹ ಪೊಲೀಸರೇ ಹೆಲ್ಮೆಟ್ ಧರಿಸಿ ಬೈಕ್ ಓಡಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
