ಕೃಷ್ಣಜನ್ಮಾಷ್ಟಮಿ

ತುರುವೇಕೆರೆ:

              ಕೃಷ್ಣ ಬೆಳೆದ ಸಾಂಘಿಕ ಸಮಾಜ, ಸೈಸರ್ಗಿಕ ನೆಲೆಗಟ್ಟು ಹಾಗೂ ಸಾಂಸ್ಕøತಿಕ ಪರಿಸರವನ್ನು ಕೈ ಬಿಟ್ಟು ನಾವು ಮಕ್ಕಳನ್ನು ಆಧುನಿಕತೆಯ ವಿಕಾರಗಳಿಗೆ ತೆರೆದಿಟ್ಟು ಅವುಗಳ ಮುಗ್ಧತೆಯನ್ನು ಹಾಳುಗೆಡವುತ್ತಿದ್ದೇವೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ವಿಷಾಧ ವ್ಯಕ್ತಪಡಿಸಿದರು
              ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶ್ವಹಿಂದೂ ಪರಿಷತ್ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಮಾನಿಕೆರೆ ಮಂಜುನಾಥ್ ಮಕ್ಕಳಿಗಾಗಿ ಕೃತಿ ಶ್ರೀಕೃಷನ ಕತೆಗಳು ಪುಸ್ತಕದ ಕುರಿತು ಮಾತನಾಡಿದರು
ಪ್ರತಿಯೊಬ್ಬ ತಾಯಿಯೂ ತನ್ನ ಮಗ ಒಬ್ಬ ಕೃಷ್ಣನ ಪ್ರತಿರೂಪ ಎಂದೇ ಭಾವಿಸುತ್ತಾಳೆ. ಇಂತಹ ಮಕ್ಕಳ ಬಾಲ್ಯ ಆಹ್ಲಾದಕರವಾಗಿರಬೇಕು. ಅವರಿಗೆ ಪ್ರಕೃತಿ, ಪರಿಸರದೊಂದಿಗೆ ಅನುಸಂಧಾನ ಮಾಡಿಕೊಳ್ಳುವುದನ್ನು ಕಲಿಸಿಕೊಡಬೇಕು. ಕೃಷ್ಣ ವಿಶ್ವರೂಪ ದರ್ಶನ ಮಾಡಿಸಿದ್ದ, ಆದರೆ ಈಗಿನ ಮಕ್ಕಳು ಅಂಗೈನಲ್ಲಿನ ಮೊಬೈಲ್‍ನಲ್ಲಿ ವಿಶ್ವ ‘ಆಪ್’ದರ್ಶನ ಮಾಡಿಸುತ್ತವೆ. ಜೋಕಾಲಿ ಜೀಕುವ ವಯಸ್ಸಿನ ಮಕ್ಕಳು ಜೈಂಟ್‍ವೀಲಲ್ಲಿ ಕೂರುತ್ತವೆ. ನವಮಾಧ್ಯಮಗಳು ಮತ್ತು ಅಂತರ್ಜಾಲದ ಪರಿಣಾಮ ಮಕ್ಕಳಲ್ಲಿನ ಮುಗ್ಧತೆ, ವಯೋಸಹಜ ತುಂಟಾಟ, ಚಟುವಟಿಕೆಗಳು ಮುಕ್ಕಾಗುತ್ತಿವೆ. ಮಂಜುನಾಥ್ ಅವರು ರಚಿಸಿರುವ ಶ್ರೀ ಕೃಷ್ಣನ ಕತೆಗಳು ಕೃತಿ ಮಕ್ಕಳಲ್ಲಿ ಅಕ್ಷರ ಸಂಸ್ಕøತಿ ಪ್ರೇರೇಪಿಸಲು ಮತ್ತು ಪರಂಪರೆಯ ಮೌಲ್ಯಗಳನ್ನು ಪರಿಚಯಿಸಿಕೊಳ್ಳಲು ಉತ್ತಮ ಸಾಧನವಾಗಿದೆ ಎಂದರು.
              ಶಾಸಕ ಎ.ಎಸ್.ಜಯರಾಮ್ ಮಾತನಾಡಿ ಶ್ರೀ ಕೃಷ್ಣ ಭಾರತೀಯ ಸಂಸ್ಕøತಿಯ ಪ್ರತೀಕ. ಭಾರತವಲ್ಲದೆ ವಿದೇಶಗಳಲ್ಲೂ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ.ಕಲಾವಿದ ಮಂಜುನಾಥ್ ಅವರು ಹೊರತಂದಿರುವ ಶ್ರೀ ಕೃಷ್ಣನ ಕತೆಗಳು ಮಕ್ಕಳಲ್ಲಿನ ಕಲ್ಪನಾ ಶಕ್ತಿಯನ್ನು ವಿಸ್ತರಿಸುವುದಲ್ಲದೆ ಸಂಸ್ಕøತಿ, ಸಂಸ್ಕಾರಗಳ ನೆಲಗಟ್ಟಿನಲ್ಲಿ ಬೆಳೆಯಲು ಸಹಕಾರಿಯಾಗಿದೆ ಎಂದರು.
            ಪುಸ್ತಕ ಲೋಕಾರ್ಪಣೆ ಮಾಡಿದ ತಾಲೂಕು ಕಲಾವಿದರ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಬೋರೇಗೌಡ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪ.ಪಂ.ಅಧ್ಯಕ್ಷ ಲಕ್ಷ್ಮೀನರಸಿಂಹ, ಬಿಜೆಪಿ ನಗರಾಧ್ಯಕ್ಷ ನವೀವ್ ಬಾಬು ಇತರರು ಅಮಾನಿಕೆರೆ ಮಂಜಣ್ಣನವರಿಗೆ ಶುಭ ಹಾರೈಸಿದರು. ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಚ್.ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ (ರಾಜು), ಕೃತಿಯ ಲೇಖಕ ಅಮಾನಿಕೆರೆ ಮಂಜುನಾಥ್, ಕೃತಿಯ ಪ್ರಕಾಶಕ ಟಿ.ಎಚ್.ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಉಷಾ ಶ್ರೀನಿವಾಸ್, ರೂಪಶ್ರೀ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು.

Recent Articles

spot_img

Related Stories

Share via
Copy link
Powered by Social Snap