ಹೊನ್ನಾಳಿ:

ಕೆಎಸ್‍ಆರ್ ಟಿ ಸಿ ಬಸ್‍ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್‍ನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿರುವ ದುರ್ಘಟನೆ ತಾಲೂಕಿನ ತುಗ್ಗಲಹಳ್ಳಿ ಗ್ರಾಮದ ಕ್ರಾಸ್ ಬಳಿ ಮಂಗಳವಾರ ಸಂಭವಿಸಿದೆ.
ಹೊನ್ನಾಳಿಯಿಂದ ತೀರ್ಥರಾಮೇಶ್ವರ ಸುಕ್ಷೇತ್ರಕ್ಕೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಕೆಂಚಿಕೊಪ್ಪದ ಕಡೆಯಿಂದ ಹೊನ್ನಾಳಿಗೆ ಬರುತ್ತಿದ್ದ ಜಗದಂಬ ಎಂಬ ಖಾಸಗಿ ಬಸ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ಗಾಯಾಳುಗಳು ಹೊನ್ನಾಳಿಯ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣನಾಗಿರುವ ಖಾಸಗಿ ಬಸ್ ಚಾಲಕ ತೀರ್ಥಲಿಂಗಪ್ಪ ಮೇಲೆ ಕ್ರಮ ಜರುಗಿಸುವಂತೆ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಬಸವರಾಜ್ ಕೊಳ್ಳಿ ದೂರು ನೀಡಿದ್ದಾರೆ.
ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








