ತುಮಕೂರು:

ಶಿರಾ- ತುಮಕೂರು ಎನ್.ಹೆಚ್-48 ರಸ್ತೆಯಲ್ಲಿ ಕೆಎಸ್‌ಅರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಇಂದು(ಮಂಗಳವಾರ) ಬೆಳಗಿನ ಜಾವ 5.15 ಗಂಟೆ ಸುಮಾರಿಗೆ ಶಿರಾ – ತುಮಕೂರು ಎನ್.ಹೆಚ್-48 ರಸ್ತೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ಮುಂಭಾಗ ಮುಂದೆ ಹೋಗುತ್ತಿದ್ದ ವಾಯುವ್ಯ ಸಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹಿಂದಿನಿಂದ ಸೀಬಡ್೯ ಬಸ್ (ಕಾರವಾರ – ಬೆಂಗಳೂರು ಮಾರ್ಗ) ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಚಾಲಕ ಧನರಾಜ್ ( 54), ನಿಖಿತ(27) ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿದ್ದ ಸುಮಾರು 35-40 ವರ್ಷ ವಯಸ್ಸಿನ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉಳಿದ ಸುಮಾರು 8 – 10 ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








