ಬರಗೂರು :
ಕೆಪಿಎಂಇ ಕಾಯಿದೆ ಅಡಿಯಲ್ಲಿ ನೋಂದವಣೆಯಾಗದ ಕ್ಲೀನಿಕ್‍ಗಳ ವಿರುದ್ದ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಚಂದ್ರಿಕಾ ಸಿರಾ ತಾಲ್ಲೂಕಿನ ಬರಗೂರು ಗ್ರಾಮಕ್ಕೆ ದಿಡೀರ್ ಭೇಟಿ ನೀಡಿ ಕ್ಲೀನಿಕ್‍ಗಳ ಮೇಲೆ ದಾಳಿ ನಡೆಸಿ ಸೀಲು ಹಾಕಿದ ಪ್ರಕರಣ ಶುಕ್ರವಾರ ಸಂಜೆ ಜರುಗಿದೆ.
ಶುಕ್ರವಾರ ಸಂಜೆ ಬರಗೂರಿನ ಮಾತ ಕ್ಲೀನಿಕ್ ಗೆ ಡಿಹೆಚ್‍ಓ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಾಜು ಡಿ ರವರು ಕೆಪಿಎಂಇ ಕಾಯಿದೆ ಅಡಿಯಲ್ಲಿ ನೋಂದವಣೆಯನ್ನು ಮಾಡಿಸದೆ ಆರ್ಹ ವಿದ್ಯಾರ್ಹತೆ ಇಲ್ಲದೆ ಸಾರ್ವಜನಿಕರಿಗೆ ಆರ್ಯವೇದಿಕ ವೈದ್ಯನೆಂದು ಅಲೋಪತಿ ಜೌಷಧಿಯನ್ನು ನೀಡುತ್ತಿರುವುದು ಕಂಡು ಬಂದಿರುವುದರಿಂದ ಕೆಪಿಎಂಇ ಕಾಯಿದೆ 2007 ಅಧಿನಿಯದ 2*3 ಉಲಾಂಘಿಸಿರುವ ಪ್ರಕರ ಇವರ ಮೇಲೆ ಕೆಪಿಎಂಇ ಕಾಯಿದೆ 2007 ಅಧಿನಿಯಮ 9ರ ಅಡಿಯಲ್ಲಿ ಪ್ರಮಜರುಗಿಸಿದ್ದಾರೆ, ಇನ್ನೂಳಿದ ಕ್ಲೀನಿಕ್‍ಗಳಾದ ಲಕ್ಷ್ಮೀ ಕ್ಲೀನಿಕ್‍ನ ಎಲ್.ಚಂದ್ರಶೇಖರ್, ಬಾಬಾ ಕ್ಲೀನಿಕ್‍ನ ಇಮ್ಯಾನ್,ಬನಶಂಕರಿ ಕ್ಲೀನಿಕ್‍ನ ರಾಜಶೇಖರ್ ವಿರುದ್ದ ಇದೇ ಕಾಯಿದೆಯಾಡಿ ಇಗಾಗಲೇ ನೋಟಿಸ್ ಜಾರಿ ಮಡಿದ್ದರು ಉತ್ತರ ನೀಡದೆ ಇರುವುದರಿಂದ ಮುಚ್ಚಿರುವ ಕ್ಕೀನಿಕ್‍ಗಳ ವಿರುದ್ದ ಎತಸ್ಥೀತಿಯಲ್ಲಿ ಸಿಲ್ ಮಾಡಲಾಯಿತು ಎನ್ನಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮುತ್ತಿಗೆ : ಇದೇ ಮೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಚಂದ್ರಿಕಾ ರವರಿಗೆ ಮುತ್ತಿಗೆ ಹಾಕಿ ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಆಂದ್ರ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಸಾವಿರಾರು ಮಂದಿ ರೋಗಿಗಳು ಬರುತ್ತಿದ್ದಾರೆ. ಇಲ್ಲಿನ ಆಸ್ಪತ್ರೆಯು ಮೇಲ್ದರ್ಜೆಗೇರುತ್ತದೆಂದು ಜನಪ್ರತಿನಿದಿಗಳು ಸುಮಾರು ವರ್ಷಗಳಿಂದ ಬರೀ ಆಶ್ವಾಸನೆಗಳನ್ನು ನೀಡುತ್ತಲೇ ಬಂದಿದ್ದು, ಇದುವರೆಗೂ ಈಡೇರಿಲ್ಲ. ಇಲ್ಲಿಗೆ ತುರ್ತಾಗಿ ಮಹಿಳಾ ವೈದ್ಯರ ಅವಶ್ಯಕತೆ ಇದೆ. ಹಾಗೂ ರಾತ್ರಿ ವೇಳೆ ವೇಳೆಯಲ್ಲಿ ವೈದ್ಯರನ್ನು ನೇಮಕ ಮಾಡುವಂತೆ ಬಿಜೆಪಿ ತಾಲ್ಲೂಕ್ ಉಪಾಧ್ಯಕ್ಷ ಸಿದ್ದೇಶ್,ಬ.ಹ.ಓಂಕಾರ್, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ನಾರಾಯಣಪ್ಪ, ದೇವರಾಜು(ಅರಸು), ರೇಣುಕಾಪ್ರಸಾದ್,ಬಸವರಾಜು ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಒತ್ತಾಯಿಸಿದರು.