ಚಿತ್ರದುರ್ಗ
ತರಳಬಾಳು ಜಗದ್ಗುರುಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಒತ್ತಾಸೆಯಂತೆದಾವಣಗೆರೆ ಮತ್ತು ಚಿತ್ರದುರ್ಗಜಿಲ್ಲೆಯ ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಜಿ.ಎಂ.ಸಿದ್ದೇಶರವರು ತಮ್ಮ ಹುಟ್ಟೂರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಭೀಮಸಮುದ್ರಗ್ರಾಮದಲ್ಲಿ ನಾಲ್ಕನೇ ಬಾರಿಗೆ ಸಂಸದರಾಗಿಆಯ್ಕೆಯಾಗಿರುವ ಬಿಜೆಪಿಯ ಹಿರಿಯ ಸಂಸದ ಜಿ.ಎಂ.ಸಿದ್ದೇಶರವರಿಗೆ ಏರ್ಪಡಿಸಲಾಗಿದ್ದಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮತದಾನ ಮಾಡಿದಂತಹದಾವಣಗೆರೆಜಿಲ್ಲೆಯ ಜಗಳೂರು ತಾಲ್ಲೂಕಿನಐವತ್ತಕ್ಕೂ ಹೆಚ್ಚು ಕೆರೆಗಳಿಗೆ ಮತ್ತುಚಿತ್ರದುರ್ಗಜಿಲ್ಲೆಯ ಭರಮಸಾಗರ ಹೋಬಳಿ, ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಹೋಬಳಿ, ಶಿವಗಂಗ, ಕಾತ್ರಾಳು ಕೆರೆಗಳಿಗೆ ನೀರುತುಂಬಿಸುವ ಯೋಜನೆಯು ತರಳಬಾಳು ಶ್ರೀಗಳ ಬಹುದಿನಗಳ ಒತ್ತಾಸೆಯಾಗಿದ್ದು, ಶ್ರೀಗಳ ಆಶಯದಂತೆಕೆರೆತುಂಬುವಯೋಜನೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರುಎರಡನೇ ಬಾರಿಗೆಆಯ್ಕೆ ಆಗುವ ಮೂಲಕ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ಯುವಂತಹ ಕನಸು ಕಂಡಿದ್ದು, ರೈತರು ಕೃಷಿ ಕೂಲಿಕಾರರು, ಮಹಿಳೆಯರು ಸೇರಿ, ವಸತಿ ಹೀನರು ಮತ್ತು ನಿವೇಶನ ಹೀನರಿಗೆಇನ್ನುಐದು ವರ್ಷಗಳೊಳಗಾಗಿ ಐದುಕೋಟಿ ಮನೆಗಳನ್ನು ನಿರ್ಮಾಣ ಮಾಡಿಕೊಡುವಉದ್ದೇಶ ಹೊಂದಿದ್ದು, ಆ ಕಾರಣಕ್ಕಾಗಿ ಈ ದೇಶದ ಬಡವರು, ಅಸಹಾಯಕರು, ನಿರ್ಗತಿಕರು, ಮೋದಿ ಆಡಳಿತವನ್ನು ಬೆಂಬಲಿಸಿದ್ದಾರೆ ಎಂದರು.
ಚಿತ್ರದುರ್ಗ, ದಾವಣಗೆರೆಎರಡೂ ಜಿಲ್ಲೆಗಳು ತರಳಬಾಳು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಎರಡು ಕಣ್ಣುಗಳು ಇದ್ದಂತೆ. ಎರಡು ಜಿಲ್ಲೆಗಳನ್ನು ಕೃಷಿ, ನೀರಾವರಿ, ಹೈನುಗಾರಿಕೆಯಂತಹಅಭಿವೃದ್ಧಿ ಚಟುವಟಿಕೆಗಳಿಂದ ಆರ್ಥಿಕಾಭಿವೃದ್ಧಿಯಾದರೆ, ತರಳಬಾಳು ಶ್ರೀಗಳಿಗೆ ಆಗುವಂತಹ ಸಂತೋಷ ಹೇಳ ತೀರದು.ಅವರ ಮಾರ್ಗದರ್ಶನ ಮತ್ತು ಸೂಚನೆಯಂತೆಎರಡೂ ಜಿಲ್ಲೆಗಳಲ್ಲೂ ಕೆರೆತುಂಬಿಸುವ ಯೋಜನೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆಎಂದು ಜಿ.ಎಂ.ಸಿದ್ದೇಶರವರು ಹೇಳಿದರು.
ಮೋದಿ ಅವರ ಪ್ರಭಾವದಿಂದಾಗಿದೇಶಾದ್ಯಂತ ಪ್ರಚಂಡ ಬಹುಮತದಿಂದ ಬಿಜೆಪಿ ಮತ್ತೊಮ್ಮೆಅಧಿಕಾರಕ್ಕೆ ಬಂದಿದ್ದು, ಅವರ ಆಡಳಿತಾವಧಿಯಲ್ಲಿ 2022ಕ್ಕೆ ಈ ದೇಶಕ್ಕೆ 75 ವರ್ಷಗಳು ತುಂಬಲಿದ್ದು, ಆ ವೇಳೆಗೆ ವಸತಿ ಹೀನರು, ನಿವೇಶನ ಹೀನರ ಸಂಖ್ಯೆಯನ್ನು ಇಳಿಸಲಾಗುತ್ತದೆ ಎಂದು ಹೇಳಿದರು.ನವಭಾರತ ನಿರ್ಮಾಣದ ಪರಿಕಲ್ಪನೆ ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇಶದ ಸರ್ವಾಂಗೀಣಅಭಿವೃದ್ಧಿಗಾಗಿ ಸಂಕಲ್ಪ ಮಾಡಿದ್ದಾರೆಎಂದು ಹೇಳಿದರು.
ನಾಲ್ಕನೇ ಬಾರಿಗೆ ಅಮೋಘವಾಗಿ ಆಯ್ಕೆಯಾಗಿರುವಜಿ.ಎಂ. ಸಿದ್ದೇಶರವರ ಅಭಿನಂಧನಾ ಸಮಾರಂಭದಲ್ಲಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಚನ್ನಗಿರಿ ಶಾಸಕ ಮಾಡಾಳ ವಿರೂಪಾಕ್ಷಪ್ಪ, ಸಿದ್ದೇಶರವರ ಧರ್ಮಪತ್ನಿ ಶ್ರೀಮತಿ ಗಾಯತ್ರಿದೇವಿ,ಸಿದ್ದೇಶರವರಪುತ್ರಅಮಿತ್, ಬಿಜೆಪಿ ಜಿಲ್ಲಾಧ್ಯಕ್ಷಕೆ.ಎಸ್. ನವೀನ್, ಜಿ.ಎಂ.ಸುರೇಶ, ಮಾಜಿ ಶಾಸಕ ರಮೇಶ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇಂದ್ರೆ, ಭರಮಸಾಗರ ಸಾಮಿಲ್ ಶಿವಾನಂದಪ್ಪ, ಜಿಲ್ಲಾ ಪಂಚಾಯತ್ ಡಿ.ವಿ.ಶರಣಪ್ಪ, ಮುಂತಾದವರು ಸಮಾರಂಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
