ಕೆ.ಎನ್.ರಾಜಣ್ಣ ನವರ 75ನೇ ಜನ್ಮದಿನದ ಅಮೃತೋತ್ಸವದ ಸಮಾರಂಭ: ಧನ್ಯ ಕುಮಾರ್

ಕೊರಟಗೆರೆ ;-

     ತುಮಕೂರು ನಗರದಲ್ಲಿ ಮೇ 13 ರಂದು ನಡೆಯುವ ರಾಜ್ಯದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ನವರ 75ನೇ ಜನ್ಮದಿನದ ಅಮೃತೋತ್ಸವದ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರöಮವನ್ನು ಅದ್ದೂರಿಯಾಗಿ ಆಚರಿಸಲಿದ್ದು ಸಹಕಾರ ರತ್ನ ಕೆ.ಎನ್.ರಾಜಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಅದ್ಯಕ್ಷ ಧನ್ಯಕುಮಾರ್ ಕರೆ ನೀಡಿದರು.

      ಅವರು ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಎಲ್ಲಾ ಹಿಂದುಳಿದ ವರ್ಗಗಳ ಜನಾಂಗದವರು ತಿರ್ಮಾನದಂತೆ ಮೇ.13 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ನಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ನಡೆಸಲು ತೀರ್ಮಾನಿಸಲಾಗಿದ್ದು ಕಲ್ಪತರು ನಾಡು ತುಮಕೂರು ಜಿಲ್ಲೆಯ ರೈತರು ಸೇರಿದಂತೆ, ಸಾಮಾಜಿಕ, ಸಹಕಾರ ವಲಯದ ಸಮಗ್ರ ಅಭಿವೃದ್ದಿಗೆ ಬದ್ದತೆಯಿಂದ ತೊಡಗಿಸಿಕೊಂಡಿರುವ ಜನಪ್ರಿಯ ನಾಯಕ ಸಹಕಾರ ರಂಗದ ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕೃತರು, ಕರ್ನಾಟಕ ಸರ್ಕಾರದ ಸಹಕರ ಸಚಿವರಾದ ಕೆ.ಎನ್.ರಾಜಣ್ಣ ನವರು 75ನೇ ವರ್ಷಕ್ಕೆ ಕಾಲಿರಿಸಿದ್ದಾರೆ, ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಬೆಳ್ಳಾವಿ ಶಾಸಕರಾಗಿ, ಪ್ರಸ್ತುತ ಎರಡನೇ ಅವಧಿಗೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ ಕೆ.ಎನ್.ರಾಜಣ್ಣ ನವರ ಸೇವೆ ಬಹಳ ಅಪಾರವಾದದುÀ ಎಂದು ತಿಳಿಸಿದರು.

      ತುಮಕೂರು ಡಿಸಿಸಿ ಬ್ಯಾಂಕ್‌ನಲ್ಲಿ ಕಳೆದ 3 ದಶಕಗಳಿಂದ ಅಧ್ಯಕ್ಷರಾಗಿ ಜಿಲ್ಲೆಯ ರೈತರ ಹಿತೈಷಿಯಾಗಿ ಅತ್ಯುತ್ತಮ ಸಹಕಾರ ನೀಡುತ್ತಿದ್ದಾರೆ, ನೇರ ನಡೆ ನುಡಿಯ ಕೆ.ಎನ್. ರಾಜಣ್ಣ ರವರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ರೈತರ, ಶೋಷಿತರ ಹಾಗೂ ಎಲ್ಲಾ ಜಾತಿಯ ಬಡವರ ಏಳಿಗೆಗೆ ನಿರಂತರ ಶ್ರಮಿಸುತ್ತಿದ್ದಾರೆ, ಮಾಜಿ ಪ್ರದಾನಿ ಇಂದಿರಾ ಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ,ಬಂಗಾರಪ್ಪ, ಪ್ರಚಲಿತ ರಾಜಕಾರಣಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರುಗಳ ಆದರ್ಶದಂತೆ ತಮ್ಮಜೀವನವನ್ನು ಹಿಂದುಳಿದ ವರ್ಗ ಮತ್ತು ದಲಿತರ ಏಳಿಗೆಗೆ ದುಡಿಯುತ್ತಿದ್ದು ರೈತರ ಪಾಲಿನ ಜೀವನಾಡಿಯಾಗಿ ಸಹಕಾರ ಕ್ಷೇತ್ರವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡ್ಯೋದ ಮಹಾನ್ ರಾಜಕಾರಣಿ ಆಗಿದ್ದಾರೆ ಎಂದು ತಿಳಿಸಿದರು.

      ಪ.ಪಂ ಸದಸ್ಯ ಹಿಂದುಳಿದ ವರ್ಗಗಳ ನಾಯಕ ಎ.ಡಿ.ಬಲರಾಮಯ್ಯ ಮಾತನಾಡಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ನವರ 75ನೇ ಜನ್ಮದಿನವನ್ನು ಬಹಳ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಗಿದ್ದು ಕೊರಟಗೆರೆ ತಾಲೂಕಿನಿಂದ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಈ ಸಮಾರಂಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ ಕೆ.ಎನ್.ರಾಜಣ್ಣ ರವರು ಕಳೆದ 5೦ ವರ್ಷಗಳಿಂದ ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಅವರ ಬದುಕಿನ ಸಾರ್ಥಕತೆಯ 75ನೇ ಜನ್ಮದಿನದ ಅಂಗವಾಗಿ ತುಮಕೂರು ಜಿಲ್ಲೆಯ ಆತ್ಮೀಯ ಅಭಿಮಾನಿಗಳು, ಹಿತೈಷಿಗಳು ಬಿಡುಗಡೆ ಗೊಳಿಸುತ್ತಿರುವ ಕೆ.ಎನ್. ಆರ್.ಅಭಿನಂದನಾ ಗ್ರಂಥ ಬಿಡುಗಡೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.

       ಪತ್ರಿಕಾ ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಮೇಲ್ವಿಚಾರಕ ಬೋರಣ್ಣ,ಶಿವಣ್ಣ, ಮಂಜೇಶ್, ಶಾಂತಕುಮಾರ್, ಪವನ್‌ಕುಮಾರ್, ಆಂಜನೇಯುಲು, ಎನ್,ಪದ್ಮನಾಬ್, ರುದ್ರೇಶ್, ಅಶ್ವತ್ಥನಾರಾಯಣರಾಜು, ಕೆ.ಆರ್. ಓಬಳರಾಜು, ಗಟ್ಲಹಳ್ಳಿ ಕುಮಾರ್,ಮಂಜುನಾಥ್, ವಿನಯ್‌ಕುಮಾರ್, ಕೇಶವಮೂರ್ತಿ, ಗೋವಿಂದರಾಜು, ಚಿಕ್ಕಣ್ಣ,ರವಿಕುಮಾರ್, ದೊಡ್ಡಣ್ಣ, ಶಶಿಕುಮಾರ್, ರಾಜೇಶ್‌ದೊಡ್ಡಮುನಿ, ಚಿನ್ನಿವೆಂಕಟಶೆಟ್ಟಿ,ಕಾಲಿಚರಣ್ ಶಶಿಕುಮಾರ್, ಗೌರಿಶಂಕರ್, ಆನಂದ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link