ದೊಡ್ಡೇರಿ :-
ಜುಲೈ ತಿಂಗಳ 2017ರ ಅಂತ್ಯಕ್ಕೆ 2017-18 ಕ್ಕೆ ಮಧುಗಿರಿ ವಿಧಾನ ಸಭಾ ಕ್ಷೇತ್ರದ ದೊಡ್ಡೇರಿ ಹೋಬಳಿಗೆ 8 ಕೋಟಿ 65 ಲಕ್ಷ ರೂಗಳ ಸುವರ್ಣಮುಖಿ ಹಳ್ಳಕ್ಕೆ ಚೆಕ್ಕ್ ಡ್ಯಾಂ ಕಂ ಕಾಜುವೇ ಕಾಮಗಾರಿಗಳನ್ನು ಹಿಂದಿನ ಶಾಸಕರಾಗಿದ್ದ ಸನ್ಮಾನ್ಯ ಕೆ ಎನ್ ರಾಜಣ್ಣ ನವರು ಮಂಜೂರಾತಿ ಮಾಡಿಸಿದ್ದರು ಎಂದು ಜಿ ಪಂ ಸದಸ್ಯ ಮತ್ತು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಹೂವಿನ ಚೌಡಪ್ಪ ನವರು ಪತ್ರಿಕೆಗೆ ತಿಳಿಸಿದರು.
ಮುಖ್ಯವಾಗಿ ಕವಣದಾಲ ಪಂಚಾಯ್ತಿಯ ಸುವರ್ಣಮುಖಿ ಹಳ್ಳಕ್ಕೆ ಚೆಕ್ ಡ್ಯಾಂ ಚಿಕ್ಕತಿಮ್ಮನಹಳ್ಳಿ ಹತ್ತಿರ ಒಂದು ಕೋಟಿ ರೂಗಳು ಬಡವನಹಳ್ಳಿ ಗ್ರಾ.ಪಂ ವ್ಯಾಪ್ತಿಯ ನಾಗೇನಹಳ್ಳಿ ತಿಪ್ಪನಹಳ್ಳಿ ಹತ್ತಿರ ಚೆಕ್ ಡ್ಯಾಂ ಕಾಜುವೇ ನಿರ್ಮಾಣಕ್ಕೆ ಒಂದು ಕೋಟಿ 35 ಲಕ್ಷ ರೂಗಳು ಚಂದ್ರಗಿರಿ ಪಂಚಾಯ್ತಿ ವ್ಯಾಪ್ತಿಯ ಬಳೇಹಳ್ಳಿ ಬಂಡೆ ಈಚಲು ಹತ್ತಿರ ಚೆಕ್ ಡ್ಯಾಂ ನಿರ್ಮಾಣಕ್ಕೆ ಒಂದು ಕೋಟಿ 15 ಲಕ್ಷರೂಗಳು ಈಗಾಗಲೇ ಹಾಲಿ ಶಾಸಕರಾಗಿರುವ ವೀರಭದ್ರಯ್ಯ ನವರು ಶಂಕುಸ್ಥಾಪನೆ ಮಾಡಿರುವ ಬಡವನಹಳ್ಳಿ ಪಂಚಾಯ್ತಿಯ ಕನಪನಾಯಕನಹಳ್ಳಿ ಅತ್ತಿರ ಚೆಕ್ ಡ್ಯಾಂ ಕಂ ಕಾಜುವೆ ನಿರ್ಮಾಣಕ್ಕೆ 2 ಕೋಟಿ ರೂಗಳು ಮತ್ತು ಸಜ್ಜೆ ಹೊಸಹಳ್ಳಿ ಕಿತ್ತಗಳಿ ಕೆರೆಡಗೆ ಫೀಡರ್ ಚಾನೆಲ್ ಗೆ 40 ಲಕ್ಷ ರೂಗಳು ತಿಪ್ಪನಹಳ್ಳಿ ಕೆರೆಗೆ ಫೀಡರ್ ಚಾನೆಲ್ ಗಾಗಿ 25 ಲಕ್ಷರೂಗಳು ಗೂಬಲ ಗುಟ್ಟೆ ಹಳ್ಳದ ಅತ್ತಿರ ಚೆಕ್ ಡ್ಯಾಂಗಾಗಿ 40 ಲಕ್ಷರೂ ಗಳು ಲಿಂಗ ಸಂದ್ರ ಗ್ರಾಮದ ಹಳ್ಳಕ್ಕೆ 35 ಲಕ್ಷ ರೂಗಳು ತಿಮ್ಮಲಾ ಪುರ ಗ್ರಾಮದ ಕುಕ್ಕಲಗುಡ್ಡೆ ಚೆಕ್ ಡ್ಯಾಂ 40 ಲಕ್ಷರೂಗಳು ಆಪನಹಳ್ಳಿ ಹಾಗೂ ದೊಡ್ಡೇರಿ ಬುಡರಗುಂಟೆ ಕೆರೆ ಶಿವನಗೆರೆ ಪೂಜಾರಳ್ಳಿ ಗೋಣಸೆಟ್ಟಿ ಕೆರೆಬಡವನಹಳ್ಳಿ ಎ ಎಂ ಕಾವಲ್ ಹತ್ತಿರ ಮತ್ತು ಕೂನ್ನಹಳ್ಳಿ ಹಳ್ಳದ ಕೆರೆಗಳಿಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಕೆ ಎನ್ ರಾಜಣ್ಣನವೆರ ಶಾಸಕರ ಅನುಧಾನ ಬಂದಿರುವುದು ಸ್ಪಷ್ಟೀಕರಣವಾಗಿದೆ ಸಮ್ಮಿಶ್ರ ಸರ್ಕಾರದಲ್ಲಿ ಈ ವರೆವಿಗೂ ಯಾವುದೇ ಅನುದಾನ ಬಂದಿರುವುದಿಲ್ಲ ಹಿಂದಿನ ಸರ್ಕಾರದ ಎತ್ತಿನ ಹೊಳೆ ಯೋಜನೆಯ ಅನೇಕ ಸಿ ಸಿ ರಸ್ತೆಯ ಕಾಮಗಾರಿಗಳು ಬಯಲು ಸೀಮೆಯ ಯೋಜನೆಯ ಅನುದನಗಳು ಈಗಾಗಲೇ ಶಂಕುಸ್ಥಾಪನೆ ಗೊಂಡಿರುವ ತಿಪ್ಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕೊಠಡಿ ಮತ್ತು ಕುರಿಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಶಾಲಾಕೊಠಡಿ ಶಂಕುಸ್ಥಾಪನೆಯಾಗಬೇಕಾಗಿರುವ ಜಕ್ಕೇನಹಳ್ಳಿ ಹೊನ್ನಾಪುರ ಜವನಯ್ಯನ ಪಾಳ್ಯ ದಲ್ಲಿ ಶಾಲಾಕೊಠಡಿಗಳು ಮತ್ತು ಶಂಕುಸ್ಥಾಪನೆ ಯಾಗಿರುವ ಭೂತನಹಳ್ಳಿ ಜವನಯ್ಯನ ಪಾಳ್ಯ ಗ್ರಾಮಗಳ ಶುಧ್ದ ಕುಡಿಯುವ ನೀರಿನ ಘಟಕಗಳು ಕೆ ಎನ್ ರಾಜಣ್ಣ ನವರು ಶಾಸಕರಾಗಿದ್ದಾಗ ತಂದಂತಹ ಅನುಧಾನಗಳು ಎಂದು ಜಿ ಪಂ ಸದಸ್ಯ ಹೂವಿನ ಚೌಡಪ್ಪ ಪ್ರಜಾ ಪ್ರಗತಿ ಪತ್ರಿಕೆಯೊಂದಿಗೆ ಮಾತನಾಡಿತಿಳಿಸಿದರು.