ನವದೆಹಲಿ
ಹಿರಿಯ ಕಾಂಗ್ರೆಸ್ ನಾಯಕ , ಮಾಜಿ ಕೇಂದ್ರ ಸಚಿವ ಗುರುದಾಸ್ ಕಾಮತ್ ಅವರು ಇಂದು (ಆ.22) ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೀಡಾಗಿದ್ದ ಕಾಮತ್ ಅವರನ್ನು ಚಾಣಕ್ಯಪುರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗುರುದಾಸ್ ಕಾಮತ್ ಅವರ ನಿಧನ ವಾರ್ತೆ ಕೇಳುತ್ತಿದ್ದಂತೆ ಆಸ್ಪತ್ರೆಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೌಡಾಯಿಸಿ ಅಂತಿಮ ನಮನ ಸಲ್ಲಿಸಿ, ಕಾಮತ್ ಅವರ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.
ಮುಂಬಯಿ ಕುರ್ಲಾ ಮೂಲದ ಕಾಮತ್ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಎನ್ ಎಸ್ ಐ ಯು ಮೂಲಕ ಹೋರಾಟ ಆರಂಭಿಸಿದ್ದ ಅವರು ಯುವ ಕಾಂಗ್ರೆಸ್ ನಾಯಕರಾಗಿ ಹೊರ ಹೊಮ್ಮಿ 5 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಯುಪಿಎ ಸರ್ಕಾರದಲ್ಲಿ ಟೆಲಿಕಾಂ ರಾಜ್ಯ ಖಾತೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
![](https://prajapragathi.com/wp-content/uploads/2018/08/22_08_2018-gurudas-kamat-1_18339994.jpg)